ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ಮಿಲಾಗ್ರಿಸ್‌ ಚರ್ಚ್‌ನಲ್ಲಿ ಕಳ್ಳತನ

By ಐಸಾಕ್‌ ರಿಚರ್ಡ್‌, ಮಂಗಳೂರು
|
Google Oneindia Kannada News

ಮಂಗಳೂರು, ಜು.24: ನಗರದ ಪ್ರಸಿದ್ದ ಮಿಲಾಗ್ರಿಸ್‌ ಚರ್ಚ್‌ನ ಕಿಟಕಿ ಸರಳುಗಳನ್ನು ತುಂಡರಿಸಿ ಇಬ್ಬರು ಕಳ್ಳರು ಆಡಳಿತ ಕಚೇರಿಯಲ್ಲಿದ್ದ 1.20 ಲಕ್ಷ ಹಣವನ್ನು ದೋಚಿದ್ದಾರೆ. ಬುಧವಾರ ರಾತ್ರಿ 10.30ರ ವೇಳೆಗೆ ಕಳ್ಳತನ ನಡೆದಿದ್ದು, ದುಷ್ಕರ್ಮಿ‌ಗಳ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇಂದು ಬೆಳಗ್ಗೆ ಫಾದರ್‌ ವೆಲೆರಿಯನ್‌ ಚರ್ಚಿನ ಬಾಗಿಲು ತೆರೆದಾಗ ಕಳ್ಳರ ಕೈಚಳಕ ಬೆಳಕಿಗೆ ಬಂದಿದೆ. ಪಾಂಡೇಶ್ವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಳ್ಳರ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ.

 ಕಿಟಕಿಯನ್ನು ತುಂಡರಿಸಿ ಕಳ್ಳತನ:

ಕಿಟಕಿಯನ್ನು ತುಂಡರಿಸಿ ಕಳ್ಳತನ:

ಚರ್ಚ್‌‌ನ ಹಿಂಭಾಗದ ಕಿಟಕಿಯನ್ನು ತುಂಡರಿಸಿ ಕಳ್ಳರು ಆಡಳಿತ ಕಚೇರಿಗ ಒಳಗೆ ನುಗ್ಗಿ ಕಳ್ಳತನ ಮಾಡಿದ್ದಾರೆ.

 ಪ್ರಸಿದ್ದ ಚರ್ಚ್‌:

ಪ್ರಸಿದ್ದ ಚರ್ಚ್‌:

ನಗರದಲ್ಲಿ ಮಧ್ಯ ಭಾಗದಲ್ಲಿರುವ ಮಿಲಾಗ್ರಿಸ್‌ ಚರ್ಚ್‌ ನಗರದ ಪ್ರಸಿದ್ದ ಚರ್ಚ್‌‌ಗಳಲ್ಲಿ ಒಂದಾಗಿದೆ. ಹೆಚ್ಚಾಗಿ ಶ್ರೀಮಂತ ಜನರು ಭೇಟಿ ನೀಡುತ್ತಿದ್ದು, ಪ್ರಾಥಮಿಕ ತನಿಖೆಯಿಂದ ಆಡಳಿತ ಕಚೇರಿಯಲ್ಲಿದ್ದ 1.20 ಲಕ್ಷ ಹಣವನ್ನು ಕಳ್ಳರು ದೋಚಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

 ಸಿಸಿಕ್ಯಾಮೆರಾದಲ್ಲಿ ಸೆರೆ:

ಸಿಸಿಕ್ಯಾಮೆರಾದಲ್ಲಿ ಸೆರೆ:

ಎರಡು ಸಿಸಿ ಕ್ಯಾಮೆರಾ ಆಡಳಿತ ಕಚೇರಿಯಲ್ಲಿದ್ದು ಒಂದು ಸಿಸಿ ಕ್ಯಮೆರಾವನ್ನು ತಿರುಗಿಸಿ ಕಳ್ಳತನ ಎಸಗಿದ್ದಾರೆ. ಇನ್ನೊಂದು ಸಿಸಿ ಕ್ಯಾಮೆರಾದಲ್ಲಿ ಮುಖವಾಡ ಧರಿಸಿದ ಕಳ್ಳರ ಕೃತ್ಯ ಸೆರೆಯಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದು ಸಿಸಿ ಕ್ಯಾಮೆರಾ ದೃಶ್ಯವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿಲ್ಲ.

 ಸ್ಥಳೀಯರ ಕೃತ್ಯ ಶಂಕೆ:

ಸ್ಥಳೀಯರ ಕೃತ್ಯ ಶಂಕೆ:

ಚರ್ಚಿನ ಬಗ್ಗೆ ಚೆನ್ನಾಗಿ ತಿಳಿದಿರುವ ವ್ಯಕ್ತಿಗಳೇ ಈ ಕಳ್ಳತನ ಎಸಗಿದ್ದಾರೆ ಎಂದು ಹೇಳಲಾಗುತ್ತಿದೆ.

English summary
2 thieves gained entry into the Milagres Our Lady of Miracles Church office at 10.20 pm on Wednesday July 23 and escape after collecting cash amounting to around Rs 1.2 lac from the three cash boxes found inside.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X