ಪುತ್ತೂರಿನ ಪಂಚಮುಖಿ ಆಂಜನೇಯನ ಕೃಪೆಯಿಂದ ಯದುವೀರ್ ಗೆ ಗಂಡು ಮಗು?

Posted By:
Subscribe to Oneindia Kannada
   ಹನುಮಂತನ ಕೃಪೆಯಿಂದ ಯದುವೀರ್ ತ್ರಿಷಿಕಾಗೆ ಗಂಡು ಮಗು ಜನನ | Oneindia Kannada

   ಮಂಗಳೂರು, ಡಿಸೆಂಬರ್ 7: ಮೈಸೂರು ಯದುವಂಶಕ್ಕೆ ಯುವರಾಜನ ಆಗಮನವಾಗಿದೆ. ಯದುವೀರ್ ತ್ರಿಷಿಕಾ ದಂಪತಿಗೆ ಗಂಡು ಸಂತಾನ ಪ್ರಾಪ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಯದುವಂಶ, ಅಲಮೇಲಮ್ಮನ ಶಾಪದಿಂದ ಮುಕ್ತಗೊಂಡಿದೆ ಎಂಬ ಚರ್ಚೆ ಆರಂಭಗೊಂಡಿದೆ.

   ಗಂಡು ಮಗುವಿಗೆ ಜನ್ಮವಿತ್ತ ಮೈಸೂರು ಯುವರಾಣಿ ತ್ರಿಷಿಕಾ ಕುಮಾರಿ

   ಯದುವೀರ್ ತ್ರಿಷಿಕಾ ದಂಪತಿಗೆ ಗಂಡು ಸಂತಾನ ಪ್ರಾಪ್ತಿಗೆ ಹನುಮನ ಕೃಪೆ ಕಾರಣ ಎಂಬ ಮಾತು ಕೇಳಿಬರುತ್ತಿದೆ. ಪುತ್ತೂರಿನ ಈಶ್ವರಮಂಗಲದಲ್ಲಿರುವ ಹನುಮಗಿರಿ ಶ್ರೀ ಕ್ಷೇತ್ರದ ಪಂಚಮುಖಿ ಆಂಜನೇಯನ ಕೃಪೆಯಿಂದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಪುತ್ರ ಸಂತಾನ ಪ್ರಾಪ್ತವಾಗಿದೆ ಎಂದು ಹೇಳಲಾಗಿದೆ.

   ಆಂಜನೇಯನ ಪರಮ ಭಕ್ತ ಯದುವೀರ್

   ಆಂಜನೇಯನ ಪರಮ ಭಕ್ತ ಯದುವೀರ್

   ಅಂಜನೇಯನ ಪರಮ ಭಕ್ತರಾಗಿರುವ ಯದುವೀರ್ ಕೃಷ್ಣದತ್ತ ಒಡೆಯರ್ ಕಳೆದ ತಿಂಗಳು ಕ್ಷೇತ್ರಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ದರು. ವಿಶೇಷ ಪೂಜೆ ಸಂದರ್ಭದಲ್ಲಿ ಗಂಡು ಮಗುವಿನ ಬೇಡಿಕೆ ಇಟ್ಟಿದ್ದರು . ಪೂಜೆಯ ಫಲವಾಗಿ ಯದುವೀರ್ ಅವರ ಇಷ್ಟಾರ್ಥ ಈಡೇರಿದಂತಾಗಿದೆ.

   ನವೆಂಬರ್ 2ರಂದು ವಿಶೇಷ ಪೂಜೆ

   ನವೆಂಬರ್ 2ರಂದು ವಿಶೇಷ ಪೂಜೆ

   ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹನುಮಗಿರಿ ಮಂಚಮುಖಿ ಆಂಜನೇಯ ಶ್ರೀ ಕ್ಷೇತ್ರಕ್ಕೆ ಕಳೆದ ನವೆಂಬರ್ 2 ರಂದು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

   ಮೈಸೂರಿಗೆ ಬಂದ ಮುದ್ದು ರಾಜಕುಮಾರ: ಒಂದಷ್ಟು ಚಿತ್ರಗಳು

    ಉಪವಾಸ ವ್ರತದಲ್ಲೇ ಪೂಜೆ

   ಉಪವಾಸ ವ್ರತದಲ್ಲೇ ಪೂಜೆ

   ಶ್ರೀ ಕೋದಂಡರಾಮನ ಪ್ರತಿಷ್ಠಾ ಮಹೋತ್ಸವ ದಲ್ಲಿ ಭಾಗಿಯಾಗಿದ್ದ ಯದುವೀರ್ ವಿಶೇಷ ಪೂಜೆ ಸಲ್ಲಿಸಿದರು. ನಂತರ ಅವರು ಅಲ್ಲಿಂದ ಬಂದು ಪಂಚಮುಖಿ ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಕ್ಷೇತ್ರಕ್ಕೆ ಬರುವಾಗಲೇ ಉಪವಾಸ ವ್ರತದಲ್ಲಿದ್ದ ಯದುವೀರ್ ಪೂಜೆಯ ಬಳಿಕ ಕ್ಷೇತ್ರದಲ್ಲಿ ಉಪಾಹಾರ ಸೇವಿಸಿದ್ದರು.

   ಗಂಡು ಮಗುವಿಗೆ ಜನ್ಮ ನೀಡಿದ ತ್ರಿಷಿಕಾ

   ಗಂಡು ಮಗುವಿಗೆ ಜನ್ಮ ನೀಡಿದ ತ್ರಿಷಿಕಾ

   ಪೂಜೆ ಪುನಸ್ಕಾರಗಳ ಫಲ ಎಂಬಂತೆ ಮೈಸೂರು ಯುವರಾಣಿ ತ್ರಿಷಿಕಾ ಕುಮಾರಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇದಕ್ಕೆ ಪುತ್ತೂರಿನ ಹನುಮಗಿರಿ ಶ್ರೀ ಕ್ಷೇತ್ರದ ಪಂಚಮುಖಿ ಆಂಜನೇಯನ ಕೃಪೆ ಕಾರಣ ಎಂದು ಹೇಳಲಾಗುತ್ತಿದೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Yaduveer Trishika couple blessed with baby boy. It is said that a baby boy was born from grace of Hanumagiri Panchamukhi Anjaneya of Eshwaramangala, Puttur.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ