ಉಳ್ಳಾಲದಲ್ಲಿ ಹಡಗು ದುರಂತ; 33 ಜನರು ಅಪಾಯದಲ್ಲಿ
ಬ್ರೇಕ್ ವಾಟರ್ ಕಾರ್ಯಾಚರಣೆಗಾಗಿ ಉಳ್ಳಾಲ ಬಳಿಯ ಮೊಗವೀರಪಟ್ಣದ ಬಳಿಯ ಸಮುದ್ರಕ್ಕೆ ಪ್ರಯಾಣ ಬೆಳೆಸಿದ್ದ ಹಡಗು ದುರಂತಕ್ಕೀಡಾಗಿದ್ದು 33 ಜನರು ಅಪಾಯದಲ್ಲಿ ಸಿಲುಕಿದ್ದಾರೆ.
ಉಳ್ಳಾಲದಲ್ಲಿ ಹಡಗು ದುರಂತ; 33 ಜನರು ಅಪಾಯದಲ್ಲಿ
ಉಳ್ಳಾಲ (ಮಂಗಳೂರು), ಜೂನ್ 3: ಉಳ್ಳಾಲ ಮೊಗವೀರಪಟ್ಣದ ಸಮುದ್ರದಲ್ಲಿ ಬ್ರೇಕ್ ವಾಟರ್ ಕಾಮಗಾರಿಗಾಗಿ ಕಾರ್ಮಿಕರನ್ನು ಹೊತ್ತು ತೆರಳಿದ್ದ ಹಡಗೊಂಡು ದುರಂತಕ್ಕೀಡಾಗಿದೆ.
ಸಮುದ್ರ ತೀರದಿಂದ ಸುಮಾರು 1 ಕಿ.ಮೀ. ದೂರದವರೆಗೆ ಸಾಗಿದ ನಂತರ ಸಾಗರದಾಳದಲ್ಲಿದ್ದ ಬಂಡೆ ಗಲ್ಲಿಗೆ ಡಿಕ್ಕಿ ಹೊಡೆದ ಪರಿಣಾಮ ಹಡಗು ಮುಳುಗಲಾರಂಭಿಸಿದೆ.

ಹಡಗಿನಲ್ಲಿ ಸುಮಾರು 33 ನೌಕರರಿದ್ದು, ಇವರಲ್ಲಿ ಇಬ್ಬರು ಮಂಗಳೂರಿನವರೆಂದು ಹೇಳಲಾಗಿದೆ. ಹಡಗು ಮುಳುಗುತ್ತಿರುವುದರಿಂದ ಭಯಭೀತರಾಗಿರುವ ಹಡಗಿನಲ್ಲಿರುವ ಸಿಬ್ಬಂದಿ ಹಡಗಿನಲ್ಲಿದ್ದ ಸಿಡಿಮದ್ದುಗಳನ್ನು ಸಿಡಿಸುತ್ತಾ ದಡದಲ್ಲಿದ್ದವರ ಗಮನ ಸೆಳೆದು ರಕ್ಷಣೆಗಾಗಿ ಕೂಗುತ್ತಿದ್ದಾರೆ.
ಇದೀಗ ಬಂದ ಮಾಹಿತಿಯ ಪ್ರಕಾರ, ರಕ್ಷಣಾ ಕಾರ್ಯಾಚರಣೆ ಆರಂಭಗೊಂಡಿದ್ದು, ನೌಕರರನ್ನು ರಕ್ಷಿಸಲು ಎರಡು ಸ್ಟೀಮ್ ಬೋಟ್ ಗಳನ್ನು ಕಳುಹಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.












Click it and Unblock the Notifications