ಕರ್ನಾಟಕ ಪಿಯುಸಿ ಫಲಿತಾಂಶ: ಮಂಗಳೂರಿನ ದರ್ಶನ್, ಪ್ರಣವ್ ಸಾಧನೆ

ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ನಿನ್ನೆ ಹೊರಬಿದ್ದಿದ್ದು, ಸೈಂಟ್ ಅಲೋಶಿಯಸ್ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿ ದರ್ಶನ್ ಶೇ. 593 (600) ಅಂಕಗಳನ್ನು ಪಡೆದಿದ್ದಾರೆ.

ಮಂಗಳೂರು, ಮೇ 12: ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ನಿನ್ನೆ (ಮೇ 11) ಹೊರಬಿದ್ದಿದ್ದು, ಸೈಂಟ್ ಅಲೋಶಿಯಸ್ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿ ದರ್ಶನ್ ಶೇ. 593 (600) ಅಂಕಗಳನ್ನು ಪಡೆದಿದ್ದಾರೆ. ಮೂಲ ಗಣಿತ, ಸಂಖ್ಯಾಶಾಸ್ತ್ರ, ಅಂಕಗಣಿತ ಹಾಗೂ ಬಿಸ್ನೆಸ್ ಸ್ಟಡೀಸ್ ನಲ್ಲಿ ತಲಾ 100 ಅಂಕಗಳು ಹಾಗೂ ಆಂಗ್ಲ ಭಾಷೆಯಲ್ಲಿ 95, ಹಿಂದಿಯಲ್ಲಿ 98 ಅಂಕಗಳನ್ನು ದರ್ಶನ್ ಪಡೆದಿದ್ದಾರೆ.[ಕರ್ನಾಟಕ ಪಿಯುಸಿ ಫಲಿತಾಂಶ: ಮೈಸೂರಿಗೆ ಸ್ವಲ್ಪ ಸಿಹಿ - ಸ್ವಲ್ಪ ಕಹಿ]

ಟ್ಯೂಶನ್, ಕೋಚಿಂಗ್ ಇಲ್ಲದೆ ಅತ್ಯುತ್ತಮ ಅಂಕಗಳನ್ನು ಪಡೆದಿರುವ ದರ್ಶನ, ಕೆಲವು ವಿದ್ಯಾರ್ಥಿಗಳಿಗೆ ಕೋಚಿಂಗ್ ಕ್ಲಾಸ್ ಗೆ ಹೋದ್ರೆ ಮಾತ್ರ ಒಳ್ಳೆಯ ಅಂಕ ಬರುತ್ತದೆ ಎಂದು ಪರಿಗಣಿಸುತ್ತಾರೆ, ಆದರೆ ಶ್ರದ್ಧೆ, ಭಕ್ತಿ ಹಾಗೂ ಏಕಾಗ್ರತೆಯಿಂದ ಓದಿದರೆ ಒಳ್ಳೆಯ ಅಂಕ ಗ್ಯಾರಂಟೀ ಎನ್ನುತ್ತಾರೆ.[ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ: ಸೃಜನಾ, ರಾಧಿಕಾ, ಚೈತ್ರಾ ಟಾಪರ್ಸ್]

Karnataka 2nd PUC results: Mangaluru boys achievement

ಪ್ರಣವ್
ಬಿಲ್ಡಿಂಗ್ ಕಾಂಟ್ರಾಕ್ಟರ್ ಆಗಿರುವ ಸತೀಶ್ ಪಿ. ಮತ್ತು ಗೃಹಿಣಿ ದಯಾವತಿ ಅವರ ಪುತ್ರ ಪ್ರಣವ್, ಉಜಿರೆ ಎಸ್‌ಡಿಎಂ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ 594 (600) ಅಂಕಗಳಿಸಿ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದಿದ್ದಾರೆ. ಕನ್ನಡದಲ್ಲಿ 94, ಸಂಸ್ಕೃತದಲ್ಲಿ-100, ಭೌತಶಾಸ್ತ್ರದಲ್ಲಿ-100, ರಸಾಯನ ಶಾಸ್ತ್ರ-100, ಗಣಿತ -100, ಜೀವಶಾಸ್ತ್ರ-100 ಅಂಕಗಳನ್ನು ಗಳಿಸಿ ಸಾಧನೆ ಮೆರೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+