ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜನ ಸಂಜೀವಿನಿಯಲ್ಲಿ ಶೇ.50ರಷ್ಟು ರಿಯಾಯಿತಿಯಲ್ಲಿ ಔಷಧಿಗಳು ಲಭ್ಯ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಮಾರ್ಚ್. 06 : ಇಲ್ಲಿನ ವೆನ್ಲಾಕ್ ಆಸ್ಪತ್ರೆ ಹಾಗೂ ಲೇಡಿಗೋಷನ್ ಆಸ್ಪತ್ರೆಯ ಬಳಿ ಇರುವ ''ಜನ ಸಂಜೀವಿನಿ'' ಜನೆರಿಕ್ ಔಷಧಿ ಮಳಿಗೆಯಲ್ಲಿ ರಿಯಾಯಿತಿ ದರದಲ್ಲಿ ಎಲ್ಲ ಔಷಧಿಗಳು ಲಭ್ಯವಿದೆ. ವಿಪರ್ಯಾಸವೆಂದರೆ ಈ ಬಗ್ಗೆ ಬಹುತೇಕ ಜನರಿಗೆ ತಿಳಿದಿಲ್ಲ

ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈ ಔಷಧಿ ಮಳಿಗೆಗಳಲ್ಲಿ ಎಲ್ಲಾ ಔಷಧಗಳು ಶೇ.50ರಷ್ಟು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ.

ಇದರಿಂದ ಜನರು ಜನ ತಮಗೆ ಅವಶ್ಯವಾದ ಔಷಧಿಗಳನ್ನು ರಿಯಾಯಿತಿ ದರದಲ್ಲಿ ಪಡೆದುಕೊಂಡು ಹೆಚ್ಚಿನ ಹಣ ಉಳಿತಾಯ ಮಾಡಹುದು.

ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಆರಂಭಗೊಂಡಿರುವ ಜನ ಸಂಜೀವಿನಿ -ಜೆನರಿಕ್ ಸೆಂಟರ್ ಎಂಬ ಔಷಧಿ ಮಳಿಗೆಯಲ್ಲಿ ಅತ್ಯಂತ ಕಡಿಮೆ ಬೆಲೆಗೆ ಔಷಧಿಗಳು ದೊರೆಯಲಿವೆ. ಇದರಿಂದ ಪ್ರಜ್ಞಾವಂತ ಜನರು ಈ ಬಗ್ಗೆ ಜನಸಾಮಾನ್ಯರಿಗೆ ಹರಿವು ಮೂಡಿಸುವ ಕಾರ್ಯ ಆಗಬೇಕಿದೆ.

ಸರಕಾರದ ''ಜನ ಸಂಜೀವಿನಿ''

ಸರಕಾರದ ''ಜನ ಸಂಜೀವಿನಿ''

ಕೇಂದ್ರ ಸರ್ಕಾರದ 'ಜನೌಷಧ' ಕಾರ್ಯಕ್ರಮಕ್ಕೆ ಪರ್ಯಾಯವಾಗಿ ರಾಜ್ಯ ಆರೋಗ್ಯ ಇಲಾಖೆ 'ಜನ ಸಂಜೀವಿನಿ' ಯೋಜನೆ ಜಾರಿಗೆ ತಂದಿದೆ. ಈ ಜನ ಸಂಜೀವಿನಿ ಮಳಿಗೆಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳೂ ಔಷಧ ಖರೀದಿಸಬಹುದು. ಔಷಧ ನಿಯಂತ್ರಣ ಇಲಾಖೆಯು ಈ ಮಳಿಗೆಗಳ ಮೇಲೆ ಹಿಡಿತ ಹೊಂದಿರುತ್ತದೆ.

ಜನ ಸಂಜೀವಿನಿಗೆ ಸರಕಾರ ಔಷಧಿಗಳ ಪೂರೈಕೆ

ಜನ ಸಂಜೀವಿನಿಗೆ ಸರಕಾರ ಔಷಧಿಗಳ ಪೂರೈಕೆ

ಖಾಸಗಿ ಮೆಡಿಕಲ್ ಗಳಲ್ಲಿ ದೊರೆಯುವ ಔಷಧಿಗಳೇ ''ಜನ ಸಂಜೀವಿನಿ'' ರಿಯಾಯಿತಿ ದರಗಳಲ್ಲಿ ದೊರೆಯುತ್ತವೆ. ಮಧ್ಯವರ್ತಿಗಳಿಲ್ಲದೆ ಸರಕಾರ ನೇರವಾಗಿ ಔಷಧಿಗಳನ್ನು ಖರೀದಿಸಿ ಎಲ್ಲಾ ಜನರಿಕ್ ಕೇಂದ್ರಗಳಿಗೆ ಪೂರೈಸುತ್ತಿದೆ.

ಶೇ.50ರಷ್ಟು ರಿಯಾಯಿತಿ ದರದಲ್ಲಿ

ಶೇ.50ರಷ್ಟು ರಿಯಾಯಿತಿ ದರದಲ್ಲಿ

ಈ ಔಷಧಿ ಮಳಿಗೆಗಳಲ್ಲಿ ಎಲ್ಲಾ ಔಷಧಗಳು ಶೇ.50ರಷ್ಟು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ಖಾಸಗಿ ಮೆಡಿಕಲ್ ಅಂಗಡಿಗಳಲ್ಲಿ ದೊರೆಯುವ 300-400 ಬೆಳೆಯ ಔಷಧಿಗಳು ''ಜನ ಸಂಜೀವಿನಿ'' ಜೆನೆರಿಕ್ ಔಷಧ ಕೇವಲ 100 ರುಗೆ ಸಿಗಲಿವೆ. ಡಯಾಬಿಟೀಸ್ ಗೆ ಸಂಬಂಧಿಸಿದ 47 ರು ಮಾತ್ರೆ ಕೇವಲ 4 ರುಗೆ ನೀಡಲಾಗುತ್ತಿದೆ. ಪ್ರಝೊಪ್ರೆಸ್ ಎಕ್ಸೆಲ್ 5 ಎಂಬ 148 ರು.ಬೆಲೆಯ ಔಷಧಿ ಕೇವಲ 28 ರುಗಳಲ್ಲಿ ಈ ''ಜನ ಸಂಜೀವಿನಿ'' ಜೆನೆರಿಕ್ ಔಷಧ ಲಭ್ಯವಿದೆ.

2016 ರ ಡಿಸೆಂಬರ್ 9ರಂದು ಜಾರಿಗೆ

2016 ರ ಡಿಸೆಂಬರ್ 9ರಂದು ಜಾರಿಗೆ

2016 ರ ಡಿಸೆಂಬರ್ 9ರಂದು ಜೆನೆರಿಕ್ ಔಷಧ ಮಳಿಗೆಯನ್ನು ಯು.ಟಿ.ಖಾದರ್ ಅವರು ಆರೋಗ್ಯ ಸಚಿವರಾಗಿದ್ದ ವೇಳೆ ಈ ಯೋಜನೆಯನ್ನು ಜಾರಿಗೆ ತರಲಾಗಿತ್ತು. ನಂತರ ಆರೋಗ್ಯ ಸಚಿವರಾಗಿ ನೇಮಕಗೊಂಡಿದ್ದ ರಮೇಶ್ ಕುಮಾರ್ ಅವರು ಈ ಯೋಜನೆಯನ್ನು ಉದ್ಘಾಟನೆ ಮಾಡಿದ್ದರು.

English summary
Are you worried about your Medicine expenses, now Get 50 percent discount on all life saving medicines at Jana Sanjeevani in Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X