ಧರ್ಮಸ್ಥಳ ಲಕ್ಷದೀಪೋತ್ಸವದಲ್ಲಿ ‘ಸೆಲ್ಫಿ ಸ್ಟಿಕ್’ ದರ್ಬಾರ್

By: ಚಿತ್ರ ವರದಿ: ಪವನ್.ಎಂ.ಸಿ
Subscribe to Oneindia Kannada

ಈ ಬಾರಿಯ ಧರ್ಮಸ್ಥಳದ ಲಕ್ಷದೀಪೋತ್ಸವದಲ್ಲಿ ಸೆಲ್ಫಿ ಸ್ಟಿಕ್ ಗಳದ್ದೇ ಪ್ರಭಾವಳಿ. ಮಳಿಗೆಗಳಲ್ಲಿ ಲಭ್ಯವಾಗುತ್ತಿರುವ ಅವುಗಳನ್ನು ಖರೀದಿಸಿ ತಮ್ಮ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಖುಷಿಪಡುತ್ತಿದ್ದಾರೆ. ಮಕ್ಕಳು, ಮಹಿಳೆಯರು ಎನ್ನದೆ ಎಲ್ಲರೂ ಮೊಬೈಲ್ ಜೊತೆ ಒಂದು ಸೆಲ್ಫಿ ಸ್ಟಿಕ್ ಹಿಡಿದು ತಿರುಗಾಡುತ್ತಿದ್ದಾರೆ.

ವ್ಯಾಪಾರಿಗಳು ಸೆಲ್ಫೀ ಸ್ಟಿಕ್ ಗಳನ್ನು ಮಾರುತ್ತಿದ್ದಾರೆ. ಕಳೆದ ಹತ್ತುವರ್ಷಗಳಿಂದ ಲಕ್ಷದೀಪೋತ್ಸವಕ್ಕೆ ಬರುತ್ತಿರುವ ಈ ವ್ಯಾಪಾರಿಗಳು ಪ್ರತೀ ಬಾರಿಯೂ ಹೊಸ ಜಮಾನಕ್ಕೆ ಸರಿಹೊಂದುವ ವಸ್ತುಗಳನ್ನು ಹೊತ್ತು ಬರುತ್ತಾರೆ. ವ್ಯಾಪಾರಕ್ಕಾಗಿ ಮೈಸೂರಿನಿಂದ ಧರ್ಮಸ್ಥಳದತ್ತ ಮುಖ ಮಾಡುವ ಇವರು ಈ ವರ್ಷ ಯುವಜನತೆಯನ್ನು ಕೇಂದ್ರೀಕರಿಸಿಕೊಂಡು ಸೆಲ್ಫಿಸ್ಟಿಕ್ ಗೆ ಹೆಚ್ಚಿನ ಆಧ್ಯತೆ ನೀಡಿದ್ದಾರೆ. [ಗ್ಯಾಲರಿ: ಧರ್ಮಸ್ಥಳ ಲಕ್ಷದೀಪೋತ್ಸವ ವೈಭವ]

Dharmasthala Lakshadeepotsava youth craze Selfie Stick

ಜನರಿಗೆ ಇಂದು ಸೆಲ್ಫಿ ಹುಚ್ಚು ಹೆಚ್ಚಾಗಿರುವುದರಿಂದ ಈ ಸ್ಟಿಕ್ ಗಳಿಗೆ ಹೆಚ್ಚು ಬೇಡಿಕೆ ಇದೆ. ಹಾಗಾಗಿ ಈ ಬಾರಿ ಅತಿಹೆಚ್ಚು ಪ್ರಮಾಣದಲ್ಲಿ ಸೆಲ್ಫೀ ಸ್ಟಿಕ್ ಗಳನ್ನು ಖರೀದಿಸುತ್ತಿರುವುದರಿಂದ ಉತ್ತಮ ವ್ಯಾಪಾರವಾಗುತ್ತಿದೆ, ಹಾಗಾಗಿ ಜನರ ಬೇಡಿಕೆಯನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ಮತ್ತಷ್ಟು ಸೆಲ್ಫಿ ಸ್ಟಿಕ್ ಮಳಿಗೆಗಳನ್ನು ತೆರೆಯುತ್ತೇವೆ ಎನ್ನುತ್ತಾರೆ ತಂಡದ ಸದಸ್ಯರು.[ಧರ್ಮಸ್ಥಳದಲ್ಲಿ ಗಮನ ಸೆಳೆದ ದುರ್ಗದ ವೇಷಧಾರಿ]

ಧರ್ಮಸ್ಥಳದ ಮುಖ್ಯ ದ್ವಾರದಿಂದ ಹೀಗೊಮ್ಮೆ ಕಣ್ಣು ಹಾಯಿಸಿದರೆ ಅಲ್ಲಿ ನಮ್ಮನ್ನು ಕೈಬೀಸಿ ಕರೆಯುವ ಬಟ್ಟೆ ಅಂಗಡಿಗಳು, ಫ್ಯಾನ್ಸಿ ವಸ್ತುಗಳು, ವಿವಿಧ ಬಗೆಯ ತಿನಿಸು ಅಂಗಳಗಳು, ವಸ್ತು ಪ್ರದರ್ಶನ ಹೀಗೆ ಎಲ್ಲಿ ನೋಡಿದರೂ ಕೂಡ ಮಳಿಗೆಗಳು ಕಾಣುತ್ತವೆ. ಇಂತಹ ಮಳಿಗೆಗಳಿಗಿಂತಲೂ ಹೆಚ್ಚು ಕಣ್ಣಿಗೆ ಬೀಳುವುದು ಜನರು ಸೆಲ್ಫೀ ಕ್ಲಿಕ್ಕಿಸುವ ದೃಶ್ಯಗಳು. [ಲಕ್ಷದೀಪೋತ್ಸವದಲ್ಲಿ ಕನ್ನಡ ಡಿಂಡಿಮ]

Dharmasthala Lakshadeepotsava youth craze Selfie Stick

ಮಾರುಕಟ್ಟೆಯಲ್ಲಿ 200 ರಿಂದ 300ರೂ ಕೊಟ್ಟು ಖರೀದಿ ಮಾಡುವ ಬದಲು ಇಲ್ಲಿ ಕಡಿಮೆ ಬೆಲೆಗೆ ಖರೀದಿಸಬಹುದು ಎಂದು ಜನರು ಹರ್ಷವ್ಯಕ್ತಪಡಿಸುತ್ತಿದರು. ಧರ್ಮಸ್ಥಳದ ಲಕ್ಷದೀಪೋತ್ಸವದಲ್ಲಿ ಮಾತ್ರ ಕೇವಲ 100ರೂಗೆ ವಿವಿಧ ವಿನ್ಯಾಸವಿರುವ ಸೆಲ್ಫಿಸ್ಟಿಕ್ ದೊರೆಯುತ್ತಿರುವುದರಿಂದ ಖುಷಿಯಿಂದ ಕೊಂಡುಕೊಳ್ಳುತ್ತಿದ್ದಾರೆ.

50 ಜನರ ತಂಡದೊಂದಿಗೆ ಅಗಮಿಸಿರುವ ಸೆಲ್ಫೀ ಸ್ಟಿಕ್ ವ್ಯಾಪಾರಸ್ಥರು ಹೆಚ್ಚು ಜನತೆ ಹಾಗೂ ಲೈಟಿಂಗ್ ಇದ್ದಲ್ಲಿ ಮಾತ್ರ ಕಾಣಸಿಗುತ್ತಾರೆ. ತಮ್ಮ ಮಾತಿನ ಮೂಲಕವೇ ಜನರನ್ನು ಸೆಳೆಯುತ್ತಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Dharmasthala Laksha Deepotsava 2016: Youth are going craze about selfie sticks which are available at a price of Rs 150 at the fair.
Please Wait while comments are loading...