ಬಂಟ್ವಾಳ ತಾಲೂಕು ಕಾಂಗ್ರೆಸ್ ಕಚೇರಿಯಲ್ಲಿ ಮತ್ತೆ ಮಾರಾಮಾರಿ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಮೇ 15 : ಬಂಟ್ವಾಳ ತಾಲೂಕು ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಮತ್ತೆ ಎರಡು ಕಾಂಗ್ರೆಸ್
ಬಣಗಳ ನಡುವೆ ಮಾರಾಮಾರಿ ನೆಡದಿದೆ.

ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಮಿಥುನ್ ರೈ ಹಾಗೂ ಕಾಂಗ್ರೆಸ್ ನ
ಮತ್ತೊಂದು ಬಣದ ಲುಕ್ಮಾನ್ ಅವರ ಬೆಂಬಲಿಗರು ಒಬ್ಬರಿಗೊಬ್ಬರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ

Clash between Two groups of Congress at Bantwala congress office

ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣಾ ಆರಂಭದ ಬಳಿಕ ಪದೇ ಪದೇ
ನಡೆಯುತ್ತಿರುವ ಹೊಡೆದಾಟದಲ್ಲಿ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ
ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿದ್ದು, ಗೊಂದಲದ ವಾತಾವರಣ ನಿರ್ಮಾಣವಾಗಿದೆ.

ಚುನಾವಣೆ ಆರಂಭವಾದಾಗಿನಿಂದಲೂ ಸಣ್ಣ ಪುಟ್ಟ ವಿಚಾರಗಳಿಗೆ ಸಂಬಂಧಿಸಿ ಆಗಾಗ ಕಾರ್ಯಕರ್ತರು ಹೊಡೆದಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇನ್ನು ಕಳೆದ ವಾರ ಇದೆ ವಿಷಯಕ್ಕೆ ಸಂಬಂಧಿಸಿ ಮಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಕೂಡ ಮಾರಾಮಾರಿ ನಡೆದಿತ್ತು.

ಚುನಾವಣೆಗೆ ಅಭ್ಯರ್ಥಿಯಾಗಿದ್ದ ಲುಕ್ಮಾನ್ ಮೇಲೆ ಮಿಥುನ್ ರೈ ಬೆಂಬಲಿಗರು ಹಲ್ಲೆ ನೆಡಸಿದ್ದರು. ಏಳು ವರ್ಷ ಸತತ ಯುವ ಕಾಂಗ್ರೆಸ್ ಅಧ್ಯಕ್ಷರಾಗಿರುವ ಮಿಥುನ್ ರೈ ವಿರುದ್ಧ ಪಕ್ಷದ ಕಚೇರಿಯಲ್ಲಿ ಗೂಂಡಾಗಿರಿ ನಡೆಸಿದ ಆರೋಪ ಕೂಡ ಕೇಳಿಬಂದಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
clash between two groups of district youth Congress, which broke out during Dakshina Kannada district Youth congress election, at Bantwala congress office on Monday 15th. The same incident took place at congress office between Mithun Rai and Lukman a week ago.
Please Wait while comments are loading...