ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಬೆಂಬಲಿಸಲ್ಲ : ಪ್ರಸನ್ನ

Recommended Video

      Lok Sabha Elections 2019 : ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಬೆಂಬಲಿಸಲ್ಲ : ಪ್ರಸನ್ನ | Oneindia kannada

      ಮಂಡ್ಯ, ಮಾರ್ಚ್ 12 : 'ಕಾಂಗ್ರೆಸ್‌ನಿಂದ ಸುಮಲತಾ ಅವರು ಕಣಕ್ಕಿಳಿಯಬೇಕು ಅಥವ ಜೆಡಿಎಸ್ ಅವರಿಗೆ ಟಿಕೆಟ್ ನೀಡಬೇಕು. ಜಿಲ್ಲೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರಿಗೆ ನಾವು ಬೆಂಬಲ ನೀಡುವುದಿಲ್ಲ' ಎಂದು ನಾಗಮಂಗಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಹೇಳಿದರು.

      ಮಂಡ್ಯದಿಂದ 2019ರ ಲೋಕಸಭಾ ಚುನಾವಣೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡುತ್ತಿದ್ದಾರೆ. ಆದರೆ, ಕೆಲವು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ನಿಖಿಲ್ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

      'ಹೈಕಮಾಂಡ್ ಆದೇಶವನ್ನು ನಾವು ಪಾಲಿಸುತ್ತೇವೆ. ಆದರೆ, ಜನರು ಕೇಳಬೇಕಲ್ಲ. ಈಗಾಗಲೇ ನಮ್ಮ ಕಾರ್ಯಕರ್ತರು ಎಚ್ಚರಿಕೆ ಕೊಟ್ಟಿದ್ದಾರೆ. ಹೀಗಾಗಿ ಕೊನೆಯ ಕ್ಷಣದ ತನಕ ನಾವು ಕಾಯುತ್ತೇವೆ' ಎಂದು ಪ್ರಸನ್ನ ಹೇಳಿದ್ದಾರೆ.

      ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಈ ಕುರಿತು ಹೇಳಿಕೆ ನೀಡಿದ್ದು, 'ಮಂಡ್ಯ ಜಿಲ್ಲೆಯ ಜನರ ಅಭಿಮಾನವನ್ನು ದುರುಪಯೋಗಪಡಿಸಿಕೊಳ್ಳುವ ಕುಟುಂಬ ನಮ್ಮದಲ್ಲ. ನಿಖಿಲ್ ಸ್ಪರ್ಧೆ ಬಗ್ಗೆ ಪಕ್ಷದ ಮುಖಂಡರು ತೀರ್ಮಾನ ಮಾಡುವುದಲ್ಲ. ಜನರೇ ತೀರ್ಮಾನ ಮಾಡುತ್ತಾರೆ' ಎಂದರು.

      ಕಾರ್ಯಕರ್ತರು ಹೊಡಿತಾರೆ

      ಕಾರ್ಯಕರ್ತರು ಹೊಡಿತಾರೆ

      'ಜಿಲ್ಲೆಯಲ್ಲಿ ನಿಖಿಲ್ ಕುಮಾರಸ್ವಾಮಿಗೆ ಬೆಂಬಲ ನೀಡುವುದಿಲ್ಲ. ಹೈಕಮಾಂಡ್ ಹೇಳುತ್ತದೆ ಎಂದು ಬೆಂಬಲ ಕೊಟ್ಟರೆ ನಾಳೆ ನಮ್ಮ ಕಾರ್ಯಕರ್ತರು ನಮಗೆ ಹೊಡಿತಾರೆ' ಎಂದು ನಾಗಮಂಗಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಹೇಳಿದರು.

      ಎಚ್ಚರಿಕೆ ಕೊಟ್ಟಿದ್ದಾರೆ

      ಎಚ್ಚರಿಕೆ ಕೊಟ್ಟಿದ್ದಾರೆ

      'ಈಗ ಅಂಬರೀಶ್ ಅಭಿಮಾನಿಗಳು ನಮಗೆ ಎಚ್ಚರಿಕೆ ನೀಡಿದ್ದಾರೆ. ನೀವು ಏನಾದರೂ ಅವರಿಗೆ ಬೆಂಬಲ ಕೊಟ್ಟರೆ ನಿಮಗೆ ಹೊಡೆಯುತ್ತೇವೆ ಎಂದಿದ್ದಾರೆ. ನಾವು ಅವರಿಗೆ ಆ ರೀತಿ ಏನೂ ಆಗಲ್ಲ. ಸುಮಲತಾ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಗಲಿದೆ ಎಂದು ಕಾರ್ಯಕರ್ತರನ್ನು ಸಮಾಧಾನ ಮಾಡಿದ್ದೇವೆ' ಎಂದು ಪ್ರಸನ್ನ ತಿಳಿಸಿದರು.

      ಕೊನೆಯ ತನಕ ಕಾಯುತ್ತೇವೆ

      ಕೊನೆಯ ತನಕ ಕಾಯುತ್ತೇವೆ

      'ಕಾಂಗ್ರೆಸ್‌ನಿಂದ ಸುಮಲತಾ ಅಂಬರೀಶ್ ಅವರು ಮಂಡ್ಯದ ಅಭ್ಯರ್ಥಿಯಾಗುತ್ತಾರೆ ಎಂಬ ನಿರೀಕ್ಷೆಯಲ್ಲಿ ನಾವಿದ್ದೇವೆ. ಸಚಿವ ಡಿ.ಕೆ.ಶಿವಕುಮಾರ್ ಅವರು ನಮ್ಮ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ನಾವು ಕೊನೆಯ ತನಕ ಕಾಯುತ್ತೇವೆ' ಎಂದು ಪ್ರಸನ್ನ ಹೇಳಿದರು.

      ಮೂರು ಮಾತನ್ನು ಕೇಳಿ

      ಮೂರು ಮಾತನ್ನು ಕೇಳಿ

      'ಕಾಂಗ್ರೆಸ್‌ನಿಂದ ಸುಮಲತಾ ಅವರು ನಿಲ್ಲಬೇಕು ಅಥವ ಜೆಡಿಎಸ್‌ನಿಂದ ಸುಮಲತಾ ಅಂಬರೀಶ್ ಅವರಿಗೆ ಟಿಕೆಟ್ ನೀಡಬೇಕು. ಇಲ್ಲವಾದಲ್ಲಿ ಮಂಡ್ಯ ಜಿಲ್ಲೆಯವರಿಗೆ ಟಿಕೆಟ್ ಕೊಟ್ಟು, ರಾಜಕೀಯ ಅನುಭವ ಇರುವವರನ್ನು ನಿಲ್ಲಿಸಬೇಕು' ಎಂದು ಪ್ರಸನ್ನ ಒತ್ತಾಯಿಸಿದರು.

      ನಾವು ಬೆಂಬಲ ನೀಡುತ್ತೇವೆ

      ನಾವು ಬೆಂಬಲ ನೀಡುತ್ತೇವೆ

      'ನೀವು ಮೈತ್ರಿ ಎಂದು ನಿಮಗೆ ಬೇಕಾದವರನ್ನು ನಿಲ್ಲಿಸಿದರೆ ಅದು ಸರಿ ಇಲ್ಲ. ಹೈಕಮಾಂಡ್ ಮಾತನ್ನು ನಾವು ಕೇಳುತ್ತೇವೆ. ಆದರೆ, ಜನರು ಕೇಳಬೇಕಲ್ಲ. ಮಂಡ್ಯ ಜಿಲ್ಲೆಗೆ ಅದರದ್ದೇ ಆದ ಸ್ಥಾನಮಾನವಿದೆ. ಸುಮಲತಾ ಅವರಿಗೆ ಜೆಡಿಎಸ್ ಟಿಕೆಟ್ ಕೊಟ್ಟರೆ ನಾವು ಬೆಂಬಲಿಸುತ್ತೇವೆ' ಎಂದು ಪ್ರಸನ್ನ ಹೇಳಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+