• search
  • Live TV
ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಡ್ಯ : ಗೆಳೆಯನ ತಲೆ ಕತ್ತರಿಸಿದ ಪ್ರಕರಣಕ್ಕೆ ಟ್ವಿಸ್ಟ್!

|

ಮಂಡ್ಯ, ಅಕ್ಟೋಬರ್ 01 : ಮಂಡ್ಯದಲ್ಲಿ ಯುವಕನೊಬ್ಬ ಸ್ನೇಹಿತನ ತಲೆ ಕತ್ತರಿಸಿ ಪೊಲೀಸ್ ಠಾಣೆಗೆ ತಂದ ಪ್ರಕರಣ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಆದರೆ, ಈ ಕೊಲೆ ಪ್ರಕರಣಕ್ಕೆ ತಿರುವು ಸಿಕ್ಕಿದೆ ಪ್ರಚಾರದ ಹುಚ್ಚಿನಿಂದಾಗಿ ಯುವಕ ಸ್ನೇಹಿತನ ತಲೆ ಕಡಿದು ಜೈಲು ಪಾಲಾಗಿದ್ದಾನೆ.

ಮಂಡ್ಯ: ತಾಯಿಯೊಂದಿಗೆ ಅನುಚಿತವಾಗಿ ವರ್ತಿಸಿದವನ ರುಂಡ ಕಡಿದ ಮಗ

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಚಿಕ್ಕೆಬಾಗಿಲು ಗ್ರಾಮದ ಪಶುಪತಿ (28) ತನ್ನ ಗ್ರಾಮದ ಯುವಕ ಮತ್ತು ಸ್ನೇಹಿತ ಗಿರೀಶ್ (29) ತಲೆಯನ್ನು ಸೆಪ್ಟೆಂಬರ್ 29ರಂದು ಕತ್ತರಿಸಿ, ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದ.

ಪೊಲೀಸ್ ಠಾಣೆಗೆ ಪ್ರಿಯತಮೆಯ ರುಂಡ ಹಿಡಿದು ತಂದ ಯುವಕ!

ತನ್ನ ತಾಯಿ ಬಗ್ಗೆ ಗಿರೀಶ್ ಕೆಟ್ಟದ್ದಾಗಿ ಮಾತನಾಡಿದ್ದ. ಆದ್ದರಿಂದ, ಕೊಲೆ ಮಾಡಿದ್ದೇನೆ ಎಂದು ತನ್ನ ಕೃತ್ಯವನ್ನು ಸಮರ್ಥಿಸಿಕೊಂಡಿದ್ದ. ಆದರೆ, ಚಿಕ್ಕೆಬಾಗಿಲು ಗ್ರಾಮಸ್ಥರ ಹೇಳಿಕೆಯಿಂದಾಗಿ ಸತ್ಯ ಬಯಲಾಗಿದೆ.

ಚಿಕ್ಕೆಬಾಗಿಲು ಗ್ರಾಮಸ್ಥರು ಹೇಳುವ ಪ್ರಕಾರ 'ನಾನು ಯಾರನ್ನಾದರೂ ಕೊಲೆ ಮಾಡಿ ರಾಜ್ಯಾದ್ಯಂತ ಸುದ್ದಿ ಮಾಡುತ್ತೇನೆ' ಎಂದು ಪಶುಪತಿ ಹಲವು ದಿನಗಳಿಂದ ಹೇಳಿಕೊಂಡು ಓಡಾಡುತ್ತಿದ್ದ. ಪಶುಪತಿ ಆರೋಪ ಮಾಡುವಂತೆ ಗಿರೀಶ್ ಕೆಟ್ಟವನಲ್ಲ ಆತ ಒಳ್ಳೆಯ ಯುವಕ ಎಂದು ಹೇಳಿದ್ದಾರೆ.

ಗಿರೀಶ್ ತಲೆ ಕಡಿದ ಬಳಿಕ ಗ್ರಾಮದಿಂದ 20 ಕಿ.ಮೀ.ದೂರವಿರುವ ಠಾಣೆಗೆ ಪಶುಪತಿ ಅದನ್ನು ಹಿಡಿದುಕೊಂಡು ಬಂದಿದ್ದಾನೆ. ದಾರಿಯುದ್ದಕ್ಕೂ ನನ್ನ ತಾಯಿ ಬಗ್ಗೆ ಮಾತನಾಡಿದ ಆದಕ್ಕೆ ತಲೆ ಕಡಿದೆ ಎಂದು ಹೇಳಿಕೊಂಡು ಬಂದಿದ್ದ. ಪ್ರಚಾರಕ್ಕಾಗಿಯೇ ಇಂತಹ ಕೆಲಸ ಮಾಡಿದ್ದಾನೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

ಗಿರೀಶ್ ಹತ್ಯೆಯಾದ ದಿನ ಅವರ ಚಿಕ್ಕಪ್ಪ ಸಹ ಇದನ್ನೇ ಹೇಳಿದ್ದರು. 'ಗಿರೀಶ್ ಅಂತಹ ಹುಡುಗನಲ್ಲ. ಟೀ ಕುಡಿದುಕೊಂಡು ಬರೋಣ ಎಂದು ಪಶುಪತಿ ಗಿರೀಶ್‌ನನ್ನು ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ' ಎಂದು ಹೇಳಿದ್ದರು.

ನಿಜವಾಗಿಯೂ ನಡೆದಿದ್ದು ಏನು? ಎಂಬುದು ಪೊಲೀಸರ ತನಿಖೆಯಿಂದ ಬಯಲಾಗಬೇಕಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಹೀಗೆ ತಲೆ ಕಡಿದು ಠಾಣೆಗೆ ತಂದ ಮೂರು ಪ್ರಕರಣಗಳು ರಾಜ್ಯದಲ್ಲಿ ನಡೆದಿವೆ.

English summary
28 year old Pashupathi from Malavalli taluk of Mandya district on September 29 murdered his friend Girish (34) for passing bad remarks at his mother. But now twist to murder case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X