ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾರದೇವನಹಳ್ಳಿ ಕೆರೆಗೆ ವಿಷಹಾಕಿದ ಕಿಡಿಗೇಡಿಗಳು, ಸಾವಿರಾರು ಮೀನುಗಳ ಮಾರಣಹೋಮ

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಜೂ.18: ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಕೆರೆ ನೀರಿಗೆ ವಿಷ ಹಾಕಿರುವ ಕಿಡಿಗೇಡಿಗಳು ರು. 5ಲಕ್ಷಕ್ಕೂ ಹೆಚ್ಚು ಮೌಲ್ಯದ ಸಾವಿರಾರು ಮೀನುಗಳ ಮಾರಣಹೋಮ ಮಾಡಿರುವ ಹೀನ ಕೃತ್ಯ ತಾಲೂಕಿನ ಬೆಳ್ಳೂರು ಹೋಬಳಿಯ ಮಾರದೇವನಹಳ್ಳಿಯಲ್ಲಿ ಬುಧವಾರ ರಾತ್ರಿ ಸಂಭವಿಸಿದೆ.

ಗ್ರಾಮದ ಹೊರವಲಯದಲ್ಲಿರುವ ಕೆರೆ ಭರ್ತಿಯಾಗಿದ್ದ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಗ್ರಾಮಸ್ಥರೆಲ್ಲರೂ ಸೇರಿ ಸಾವಿರಾರು ಮೀನಿನ ಮರಿಗಳನ್ನು ಬಿಟ್ಟು ಪೋಷಣೆ ಮಾಡುತ್ತಿದ್ದರು. ಬುಧವಾರ ತಡರಾತ್ರಿ ವೇಳೆ ಯಾರೋ ಕಿಡಿಗೇಡಿಗಳು ಕೆರೆಗೆ ಬಲೆ ಹಾಕಿ ದೊಡ್ಡ ಮೀನುಗಳನ್ನು ಹಿಡಿದಿರುವುದಲ್ಲದೆ ನಂತರ ತುಂಬಿದ ಕೆರೆಗೆ ವಿಷ ಹಾಕಿರುವುದರಿಂದ ಮಾರಾಟ ಮಾಡಬಹುದಾಗಿದ್ದ 5 ರಿಂದ 8 ಕೆ.ಜಿ. ತೂಕದ ಸಾವಿರಾರು ಮೀನುಗಳು ಸಾವನ್ನಪ್ಪಿವೆ.

ಪರಿಷತ್‌ ಚುನಾವಣೆಯಲ್ಲಿ ಮಧು ಗೆಲುವು: ಹಬ್ಬದಂತೆ ಆಚರಿಸಿದ ಕಾಂಗ್ರೆಸ್‌ ಕಾರ್ಯಕರ್ತರುಪರಿಷತ್‌ ಚುನಾವಣೆಯಲ್ಲಿ ಮಧು ಗೆಲುವು: ಹಬ್ಬದಂತೆ ಆಚರಿಸಿದ ಕಾಂಗ್ರೆಸ್‌ ಕಾರ್ಯಕರ್ತರು

Thousands of Fish Poisoned to Death in Maradevanahalli Lake in Mandya

ಜಾನುವಾರುಗಳು ಕುಡಿಯಲೂ ಸಹ ಯೋಗ್ಯವಲ್ಲದಂತಾ ಕೆರೆ

ಗುರುವಾರ ಬೆಳಿಗ್ಗೆ ಕೆರೆಯಲ್ಲಿ ಸತ್ತು ಹೋಗಿರುವ ಮೀನುಗಳು ನೀರಿನಲ್ಲಿ ತೇಲುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಬಂದು ನೋಡಿದ ವೇಳೆ ಕೆರೆಗೆ ಕಿಡಿಗೇಡಿಗಳು ವಿಷ ಬೆರೆಸಿರುವ ಪ್ರಸಂಗ ತಿಳಿದುಬಂದಿದ್ದು, ಕೆರೆಯಲ್ಲಿನ ನೀರೂ ಸಹ ಮಲೀನ ಗೊಂಡು ಜಾನುವಾರುಗಳು ಕುಡಿಯಲೂ ಸಹ ಯೋಗ್ಯವಲ್ಲದಂತಾಗಿದೆ. ಈ ಒಂದು ಕೆರೆಯಿಂದ ಗ್ರಾಮಕ್ಕೆ ಬಹಳಷ್ಟು ಅನುಕೂಲವಾಗಿತ್ತು. ಗ್ರಾಮದ ಅಭಿವೃದ್ಧಿಯ ದೃಷ್ಟಿಯಿಂದ ಮೀನುಗಾರಿಕೆ ಇಲಾಖೆ ಮೂಲಕ ಲಕ್ಷಾಂತರ ಮೌಲ್ಯದ ಮೀನಿನ ಮರಿ ಗಳನ್ನು ಖರೀದಿಸಿ ಕೆರೆಗೆ ಬಿಟ್ಟು ಪೋಷಣೆ ಮಾಡಲಾ ಗುತ್ತಿತ್ತು. ಆದರೆ ಕಿಡಿಗೇಡಿಗಳು ನಡೆಸಿರುವ ಈ ಕೃತ್ಯ ದಿಂದಾಗಿ ಸಾವಿರಕ್ಕೂ ಹೆಚ್ಚು ಮೀನುಗಳ ಮಾರಣ ಹೋಮವಾಗಿದ್ದು ರು.5 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ ಎಂದು ಗ್ರಾಮಸ್ಥರು ದೂರಿ ದ್ದಾರೆ.

Thousands of Fish Poisoned to Death in Maradevanahalli Lake in Mandya

ಕಿಡಿಗೇಡಿಗಳನ್ನು ಪತ್ತೆಹಚ್ಚಿ ಕಠಿಣ ಕ್ರಮಕ್ಕೆ ಗ್ರಾಮಸ್ಥರ ಆಗ್ರಹ

ಯಾವುದೇ ದ್ವೇಷ ಭಿನ್ನಾಭಿಪ್ರಾಯವಿದ್ದರೆ ಗ್ರಾಮಸ್ಥರ ಸಮ್ಮುಖದಲ್ಲಿ ಕುಳಿತು ಮಾತುಕತೆ ಮೂಲಕ ಅಥವಾ ಕಾನೂನು ರೀತಿ ಯಲ್ಲಿ ಸಮಸ್ಯೆ ಬಗೆಹರಿಸಿ ಕೊಳ್ಳಲು ಅವಕಾಶವಿದೆ. ಆದರೆ ಮೂಕ ಪ್ರಾಣಿಗಳು ಕುಡಿಯುವ ನೀರಿಗೆ ವಿಷ ಬೆರೆಸಿ ಸಾಕಿರುವ ಮೀನುಗಳ ಜೊತೆಗೆ ನೀರಿನಲ್ಲೇ ವಾಸಿಸುವ ಸಣ್ಣ ಪುಟ್ಟ ಪ್ರಾಣಿ ಪಕ್ಷಿಗಳನ್ನು ಸಾಯಿಸಿರುವ ಕಿಡಿಗೇಡಿಗಳಿಗೆ ಅವುಗಳ ಶಾಪ ತಟ್ಟದೆ ಇರುವುದಿಲ್ಲ. ಯಾವುದೋ ಹಳೇ ವೈಶಮ್ಯ ದಿಂದ ಈ ಹೀನಕೃತ್ಯ ನಡೆಸಿರ ಬಹುದೆಂದು ಶಂಕಿಸಿರುವ ಗ್ರಾಮಸ್ಥರು ಕಿಡಿಗೇಡಿಗಳನ್ನು ಪತ್ತೆಹಚ್ಚಿ ಕಠಿಣ ಕ್ರಮ ಜರುಗಿಸುವ ಜೊತೆಗೆ ಇಂತಹ ಘಟನೆ ಮರುಕಳಿಸದಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿ ಗಳು ಅಗತ್ಯ ಕ್ರಮ ವಹಿಸಬೇಕು. ಅಲ್ಲದೆ ಸರ್ಕಾರ ಸೂಕ್ತ ಪರಿಹಾರ ಕೊಟ್ಟು ಗ್ರಾಮಸ್ಥರ ನೆರವಿಗೆ ನಿಲ್ಲಬೇಕೆಂದು ಒತ್ತಾಯಿಸಿದ್ದಾರೆ.

(ಒನ್ಇಂಡಿಯಾ ಸುದ್ದಿ)

Recommended Video

Virat Kohli & Babar Azam ಒಂದೇ ತಂಡದಲ್ಲಿ ಆಡೋದು ಗ್ಯಾರೆಂಟಿ | *Cricket | Oneindia Kannada

English summary
Some miscreants have poisoned the lake causing thousands of fish die. Incident happened on Maradevanahalli lake in Mandya district, due to old enemity between 2 groups of villagers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X