ಶಾಕಿಂಗ್ ನ್ಯೂಸ್: ನಾಗಮಂಗಲದಲ್ಲಿ ಇದ್ದಾರಾ 2,000 ಬಾಂಗ್ಲಾ ದೇಶಿಗರು?
ಮಂಡ್ಯ, ಸೆಪ್ಟೆಂಬರ್ 18: ನಾಗಮಂಗಲದಲ್ಲಿ ಸುಮಾರು 2 ಸಾವಿರ ಬಾಂಗ್ಲಾದೇಶದವರು ಇದ್ದಾರೆ. ಸರಿಯಾದ ತನಿಖೆಯಾದರೆ ಎಲ್ಲವೂ ಆಚೆ ಬರುತ್ತದೆ. ರಾಜ್ಯ ಸರ್ಕಾರಕ್ಕೆ ನಿಷ್ಪಕ್ಷಪಾತವಾಗಿ ತನಿಖೆ ಮಾಡುವ ಶಕ್ತಿ ಇದೆಯಾ..? ನಾಗಮಂಗಲದಲ್ಲಿ ಕೆಲವು ತೋಟದ ಮನೆಗಳು, ಕೋಳಿ ಫಾರ್ಮ್, ಫೀಡ್ಸ್ ಕಾರ್ಖಾನೆ ಮೇಲೆ ರೇಡ್ ಮಾಡಿದರೆ ಯಾವ ಊರಿನವರು ಅಂತ ಗೊತ್ತಾಗುತ್ತೆ ಎಂದು ಮಂಡ್ಯದಲ್ಲಿ ಮಾಜಿ ಶಾಸಕ ಸುರೇಶ್ ಗೌಡ ಹೊಸ ಬಾಂಬ್ ಸಿಡಿಸಿದ್ದಾರೆ.
ಮಂಡ್ಯದ ನಾಗಮಂಗಲ ಬದರಿಕೊಪ್ಪಲಿದಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ನಡೆದ ಗಲಭೆ ಬಗ್ಗೆ ಮಾತನಾಡಿದ ಅವರು, ಸ್ಟಾರ್ ಫಾರ್ಮ್ ಅವರ ಜೊತೆ ಇರುವವರೆಲ್ಲಾ ಬಾಂಗ್ಲಾದೇಶದವರು. ಅವರೆಲ್ಲಾ ನಮ್ಮ ದೇಶಕ್ಕೆ ಹೇಗೆ ಬಂದರು? ಲೀಗಲ್ ಅಥವಾ ಇಲ್ಲೀಗಲ್ಲಾ.? ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕದಡಿದಾಗ ನೋಡುವುದಲ್ಲ. ಮೊದಲಿನಿಂದಲೂ ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದರು.

ರೇಷನ್ ಕಾರ್ಡ್, ಆಧಾರ್ ಮಾಡಿಸುವುದು ತುಂಬಾ ಸುಲಭ ಅದಕ್ಕೆ ಮಾಡಿಸಿಕೊಂಡಿರುತ್ತಾರೆ. ಬಾಂಗ್ಲಾದೇಶದವರ ವಿಚಾರ ಎಲ್ಲಾ ಸಭೆಯಲ್ಲಿ ಗಮನಕ್ಕೆ ತಂದಿದ್ದೇನೆ. ಯಾರು ಸಹ ತನಿಖೆ ಮಾಡಲ್ಲ, ನಿರ್ಲಕ್ಷ್ಯ ತೋರಿದ್ದಾರೆ. ಗೃಹ ಮಂತ್ರಿಗಳ ಗಮನಕ್ಕೂ ತಂದಿದ್ದೇನೆ. ನಮ್ಮಲ್ಲಿಯ ಅಧಿಕಾರಿಗಳ ಬಳಿ ತಿಳಿಸಿದ್ದೇನೆ ಎಂದರು.
ನಾಗಮಂಗಲದಲ್ಲಿ ಸುಮಾರು 2 ಸಾವಿರ ಬಾಂಗ್ಲಾ ದೇಶದವರು ಇದ್ದಾರೆ. ತೋಟ ಬಿಟ್ಟು ಹೊರಗೆ ಬರಲ್ಲ. ಅದರ ಬಗ್ಗೆ ತನಿಖೆ ಮಾಡಬೇಕು.
ನಮ್ಮ ದೇಶದ ಒಳಗೆ ಬಂದು ಹೇಗಿದ್ದಾರೆ? ನಮ್ಮನ್ನು ಬೇರೆ ದೇಶಕ್ಕೆ ಬಿಡುತ್ತಾರಾ? ನಾಗಮಂಗಲಕ್ಕೆ ಬಾಂಬೆಯಿಂದ ಪಠಾಣ್ ಸಂಘದವರು ಬಂದಿದ್ದಾರೆ. ಕೇರಳದಿಂದ 20 ಜನರು ಬಂದು ಹೋಗಿದ್ದಾರೆ. ಪ್ರಾರ್ಥನಾ ಮಂದಿರಕ್ಕೆ ಹೋಗ್ತಾರೆ, ಮಾತನಾಡಿಕೊಳ್ತಾರೆ. ಪೊಲೀಸರು ಅಲ್ಲಿಗೆ ಹೋಗುವಾಗಿಲ್ಲ. ಸರ್ಕಾರ ಕ್ರಮ ಕೈಗೊಳ್ಳಬೇಕು. ಬೂದಿ ಮುಚ್ಚಿದ ಕೆಂಡದಂತಿದೆ ಯಾವಾಗ ಏನು ಬೇಕಾದರೂ ಆಗಬಹುದು ಎಂದು ಹೇಳಿದರು.
ಬದರಿಕೊಪ್ಪಲಿದಲ್ಲಿ ಗ್ರಾಮದ ಜನರ ಆಕ್ರೋಶ ವಿಚಾರವಾಗಿ ಮಾತನಾಡಿದ ಅವರು, ಜನರನ್ನು ನೋಡಲು ಮುಖ ಇರಬೇಕು. ನಾಲ್ಕು ಜನ ಭಟ್ಟಂಗಿಗಳನ್ನು ಮಾಡಿಕೊಂಡು ಹೋಗೋದಲ್ಲ. ನೊಂದವರ ಕಷ್ಟ ಕೇಳಬೇಕು, ಮಾತನಾಡಬೇಕು. ಅಮಾಯಕರು ಇರುತ್ತಾರೆ. ಜವಾಬ್ದಾರಿ ಸ್ಥಾನದಲ್ಲಿರುವವರು ತಾಲ್ಲೂಕು, ಜಿಲ್ಲಾಡಳಿತ ಸರಿಯಾಗಿ ನಡೆಸಬೇಕು ಎಂದರು.
ಜಿಲ್ಲಾ ಮಂತ್ರಿಗಳು ತಮ್ಮ ಮುಖಂಡನ ತಪ್ಪಿಲ್ಲ ಅಂತ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಪೊಲೀಸರು ಮುಟ್ಟುತಾರ ಇವಾಗ?
ವಿಡಿಯೋದಲ್ಲಿ ಇರುವವರ ಅರೆಸ್ಟ್ ಮಾಡುತ್ತೇವೆ ಎನ್ನುತ್ತಾರೆ. ಇವಾಗ ಗೇಮ್ ಪ್ಲಾನ್ ಮಾಡುತ್ತಿದ್ದಾರೆ. ರಾಜಕಾರಣ ಮಾಡಿ ರಾಜಕೀಯ ದ್ವೇಷ ಮಾಡುತ್ತಿದ್ದಾರೆ. ಈ ಸರ್ಕಾರ ತನಿಖೆ ಮಾಡಲ್ಲ, ಪರಿಹಾರನೂ ಕೊಡಲ್ಲ. ಕಣ್ಣೊರೆಸುವ ತಂತ್ರ ಮಾಡುತ್ತಾರೆ ಅಷ್ಟೇ. ಸರ್ಕಾರದ ಮೇಲೆ ನಂಬಿಕೆ ಇಲ್ಲ ಎಂದು ನೇರವಾಗಿ ಹೇಳಿದರು.












Click it and Unblock the Notifications