ಮಂಡ್ಯದಿಂದ ಚಲಿಸುವ ತಮಿಳುನಾಡಿನ ಬಸ್ ಸ್ಥಗಿತ
ಮಂಡ್ಯ, ಡಿಸೆಂಬರ್ 5: ತಮಿಳುನಾಡಿನ ಸಿಎಂ ಜಯಲಲಿತಾ ಅನಾರೋಗ್ಯ ಹಿನ್ನೆಲೆ ರಾಜ್ಯದಿಂದ ತಮಿಳಿನಾಡಿಗೆ ಸಂಚರಿಸುವ ಬಸ್ ಗಳನ್ನು ತಡೆಯಲಾಗಿದೆ ಹಾಗೆಯೆ ಮಂಡ್ಯದಿಂದ ತಮಿಳುನಾಡಿಗೆ ಹೊರಡಬೇಕಿದ್ದ ಬಸ್‌ಗಳನ್ನು ತಡೆಹಿಡಿಯಲಾಗಿದೆ.
ಮಂಡ್ಯದಿಂದ ಪ್ರತಿದಿನ ನಾಲ್ಕಕ್ಕೂಹೆಚ್ಚು ಬಸ್ ಗಳು ತಮಿಳುನಾಡಿಗೆ ಸಂಚರಿಸುತ್ತವೆ. ಅದರೆ ಸೋಮವಾರ 2 ಬಸ್ ಗಳನ್ನು ತಡೆಯಲಾಗಿದೆ. ಆದರೆ ಭಾನುವಾರ ರಾತ್ರಿ ನಾಲ್ಕು ಬಸ್ ಗಳನ್ನು ತಡೆಯಲಾಗಿದ್ದು, ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ಮಂಡ್ಯ ಕೆಎಸ್ ಆರ್ ಟಿಸಿ ಅಧಿಕಾರಿ ದೀಪಕ್ ಹೇಳಿದರು.

ಮಂಡ್ಯದಿಂದ ತಮಿಳುನಾಡಿನ ಕೊಯಮತ್ತೂರು, ಊಟಿ ಮುಂತಾದ ಸ್ಥಳಗಳಿಗೆ ಚಲಿಸುವ ಬಸ್ ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದರು.
ಅಲ್ಲದೆ ತಮಿಳುನಾಡಿನ ತಿರುಮಣ್ಣಾಮಲೈಯಲ್ಲಿ ಕರ್ನಾಟಕದ ಬಸ್ ಗಳ ವಿರುದ್ಧ ಕಲ್ಲು ತೂರಾಟ ನಡೆಸಿರುವ ಹಿನ್ನೆಲೆ ಈ ಕ್ರಮವನ್ನು ಜರುಗಿಸಲಾಗಿದೆ ಎಂದು ತಿಳಿಸಿದರು.











Click it and Unblock the Notifications