ಎಚ್ಡಿಕೆ ಹೇಳಿಕೆ ಎಲ್ಲಾ ಮಹಿಳೆಯರಿಗೂ ಮಾಡಿದ ಅವಮಾನ: ಸುಮಲತಾ
Recommended Video

ಮಂಡ್ಯ, ಮಾರ್ಚ್ 30: ಕುಮಾರಸ್ವಾಮಿ ಅವರ ಹೇಳಿಕೆ ಎಲ್ಲಾ ಮಹಿಳೆಯರಿಗೂ ಮಾಡಿರುವ ಅವಮಾನ ಎಂದು ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹೇಳಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಮಂಡ್ಯದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಗಂಡ ಸತ್ತ ದುಃಖ ಅವರ ಮುಖ್ಯದಲ್ಲಿ ಕಾಣುತ್ತಿಲ್ಲ' ಎಂದಿದ್ದ ಕುಮಾರಸ್ವಾಮಿಯವರಿಗೆ ತಿರುಗೇಟು ನೀಡಿದರು.
ಈ ರೀತಿ ಮಾತನಾಡುವುದು ಅವರ ಸ್ಥಾನಕ್ಕೆ ಶೋಭೆ ತರುವಂಥದ್ದಲ್ಲ, ಇದು ಎಲ್ಲಾ ಮಹಿಳೆಯರಿಗೂ ಮಾಡಿದ ಅವಮಾನ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಗೆಲುವು ಸಾಧಿಸಿಲು ಅಂಬಿ ಅಭಿಮಾನಿ ಓರ್ವ ಉರುಳು ಸೇವೆ ಮಾಡಿದ್ದಾರೆ. ಮೈಸೂರಿನ ಕೆ.ಆರ್.ನಗರದ ಅಂಬಿ ಅಭಿಮಾನಿ ಬೆನಕ ಪ್ರಸಾದ್ ಸುಮಲತಾ ಗೆಲುವಿಗಾಗಿ ಉರುಳುಸೇವೆ ಮಾಡಿದ್ದಾರೆ.
ಸುಮಲತಾ ಅವರು ಎತ್ತುಗಳನ್ನು ಹಿಡಿದಿರುವ ರೈತ, ಕಬ್ಬಿನ ಗದ್ದೆ, ಕಹಳೆ ಊದುತ್ತಿರುವ ರೈತನ ಚಿಹ್ನೆಯನ್ನು ಕೊಡಿರೆಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು. ಮೊದಲಿಗೆ ಅವರಿಗೆ ತಳ್ಳುವ ಗಾಡಿಯ ಗುರುತು ನೀಡಲಾಗಿತ್ತು, ಆ ನಂತರ ಅದು ಬದಲಾಗಿ ಕಹಳೆ ಊದುವ ವ್ಯಕ್ತಿಯ ಗುರುತು ದೊರೆತಿದೆ.
ಅದಕ್ಕೂ ಮುನ್ನ ಕೆಲವೇ ದಿನಗಳ ಹಿಂದೆ ಲೋಕೋಪಯೋಗಿ ಸಚಿವ ರೇವಣ್ಣ ಅವರು ಸುಮಲತಾ ಅವರ 'ಗಂಡ ಸತ್ತು ಮೂರು ತಿಂಗಳಾಗಿಲ್ಲ ಅಷ್ಟು ಬೇಗ ಚುನಾವಣೆ ಅಖಾಡಕ್ಕಿಳಿದಿದ್ದಾರೆ ಎಂಬ ಮಾತು ತೀವ್ರ ವಿರೋಧಕ್ಕೆ ಗುರಿಯಾಗಿತ್ತು.












Click it and Unblock the Notifications