ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯ: ಅಪ್ಪ-ಅಮ್ಮನ ಪಾದ ಪೂಜೆ ಮಾಡಿ ಧನ್ಯರಾದ ವಿದ್ಯಾರ್ಥಿಗಳು

By ಬಿ.ಎಂ.ಲವಕುಮಾರ್‌
|
Google Oneindia Kannada News

ಮಂಡ್ಯ, ಜೂನ್ 30: ಹಿರಿಯರನ್ನು ಗೌರವಿಸುವ ಸಂಪ್ರದಾಯ ದೂರವಾಗುತ್ತಿದ್ದು, ಇದರ ಅರಿವು ಮೂಡಿಸುವ ಸಲುವಾಗಿ ಮಂಡ್ಯದ ಸುಭಾಷ್‌ ನಗರದ ಚಿನ್ಮಯ ಮಿಷನ್ ರಾಮಮಂದಿರದಲ್ಲಿ ಮಾತೃ-ಪಿತೃ ಪೂಜಾ ಸಮಾರಂಭ ನಡೆಸುವ ಮೂಲಕ ಮಾತೃ-ಪಿತೃರನ್ನು ಪೂಜಿಸುವ ಕಾರ್ಯಕ್ಕೆ ನಾಂದಿ ಹಾಡಲಾಯಿತು.

ಚಿನ್ಮಯ ವಿದ್ಯಾಲಯವು ಪ್ರತಿ ವರ್ಷ ಮಾತೃ-ಪಿತೃ ಪೂಜಾ ಕಾರ್ಯಕ್ರಮ ಹಮ್ಮಿಕೊಂಡು ವಿದ್ಯಾರ್ಥಿಗಳಲ್ಲಿ ಹಿರಿಯರ ಬಗ್ಗೆ ಭಕ್ತಿ-ಗೌರವ ಮೂಡಿಸುವ ಸಣ್ಣ ಪ್ರಯತ್ನ ಮಾಡುತ್ತಿದ್ದು. ಆ ಮೂಲಕ ವಿದ್ಯಾರ್ಥಿ ಜೀವನದಲ್ಲಿಯೇ ಭಕ್ತಿ, ವಿಧೇಯತೆ, ಸೇವೆ ಮೊದಲಾದವುಗಳನ್ನು ಪಾಠದೊಂದಿಗೆ ಕಲಿಸುವ ಕಾರ್ಯದಲ್ಲಿ ನಿರತವಾಗಿದೆ.

ಮಂಡ್ಯದಲ್ಲಿ ಮುದ್ದೆ ಉಣ್ಣೊ ಸ್ಪರ್ಧೆ, ಮುದ್ದೆ ತಿನ್ನಿ ಸಿನಿಮಾ ಸ್ಟಾರ್ ಆಗಿ!ಮಂಡ್ಯದಲ್ಲಿ ಮುದ್ದೆ ಉಣ್ಣೊ ಸ್ಪರ್ಧೆ, ಮುದ್ದೆ ತಿನ್ನಿ ಸಿನಿಮಾ ಸ್ಟಾರ್ ಆಗಿ!

ಈ ಬಾರಿ ಕಾರ್ಯಕ್ರಮದಲ್ಲಿ 1200 ವಿದ್ಯಾರ್ಥಿಗಳು ಮತ್ತು 2000ಕ್ಕೂ ಹೆಚ್ಚು ಪೋಷಕರು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಜತೆಗೆ ಪೂಜಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಂದೆ- ತಾಯಿಯರನ್ನು ಕಾಲು ತೊಳೆದು ಪೂಜಿಸಿ ಭಾವಪರವಶರಾಗಿದ್ದು ಕಂಡು ಬಂತು.

students-worshiped-their-parents-mandya

ಕಾರ್ಯಕ್ರಮದ ಕುರಿತು ಶಾಲೆಯ ಮುಖ್ಯ ಶಿಕ್ಷಕ ಜೆ.ವಿಶ್ವನಾಥ್ ಮಾತನಾಡಿ ಇಂದು ಮಕ್ಕಳಲ್ಲಿ ನೈತಿಕ ಮೌಲ್ಯ ಕುಸಿಯುತ್ತಿರುವುದು ಗಮನಾರ್ಹ ಸಂಗತಿಯಾಗಿದ್ದು, ಈ ನಿಟ್ಟಿನಿಲ್ಲಿ ವಿದ್ಯಾರ್ಥಿಗಳಿಗೆ ಗುರು-ಹಿರಿಯರನ್ನು ಗೌರವಿಸುವ ಸಂಸ್ಕಾರ ಬೆಳೆಸಲು ಮಾತೃ-ಪಿತೃ ಪೂಜಾ ಕಾರ್ಯಕ್ರಮದ ಮೂಲಕ ಒಂದು ವೇದಿಕೆಯಾಗಿದೆ ನಿರ್ಮಿಸಲಾಗಿದೆ ಎಂದರು.

106 ಅಡಿಗೆ ತಲುಪಿದ ಕೆಆರ್‌ಎಸ್ ನೀರಿನ ಮಟ್ಟ106 ಅಡಿಗೆ ತಲುಪಿದ ಕೆಆರ್‌ಎಸ್ ನೀರಿನ ಮಟ್ಟ

ಕಾರ್ಯಕ್ರಮದಲ್ಲಿ ಚಿನ್ಮಯ ವಿದ್ಯಾಲಯದ ಪ್ರಾಂಶುಪಾಲರಾದ ವೀಣಾ, ಶಿಕ್ಷಕಿಯರಾದ ಪದ್ಮಲತಾ, ಸ್ಮಿತಾ, ಆಯಿಷಾ ಹಾಗೂ ಆಡಳಿತ ಮಂಡಳಿ ಸದಸ್ಯರು ಇದ್ದರು.

English summary
Mandya's Chinmayi School organized a unique program. School children's worshiped their parents traditionally today. 1200 students and more than 2000 parents were participated in the event.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X