ಮಂಡ್ಯ: ಕರೀಘಟ್ಟ ಬೆಟ್ಟಕ್ಕೆ ಬೆಂಕಿ ಹಚ್ಚಿದ ಕಿಡಿಗೇಡಿಗಳು!

Posted By: ಮಂಡ್ಯ ಪ್ರತಿನಿಧಿ
Subscribe to Oneindia Kannada

ಮಂಡ್ಯ, ಮಾರ್ಚ್ 13: ಈಗಾಗಲೇ ಅಲ್ಲಲ್ಲಿ ಅರಣ್ಯ, ಬೆಟ್ಟಗಳಲ್ಲಿ ಬೆಂಕಿ ಅನಾಹುತಗಳು ಸಂಭವಿಸತೊಡಗಿದ್ದು, ಬೆಂಕಿಗೆ ಅರಣ್ಯ, ಪ್ರಾಣಿ ಪಕ್ಷಿಗಳು ಸುಟ್ಟು ಭಸ್ಮವಾಗುತ್ತಿವೆ. ಬಹಳಷ್ಟು ಕಡೆಗಳಲ್ಲಿ ನಡೆಯುತ್ತಿರುವ ಅಗ್ನಿ ಅವಘಡಗಳಿಗೆ ಕಿಡಿಗೇಡಿಗಳೇ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ.

ಇದೀಗ ತಾಲೂಕಿನ ಐತಿಹಾಸಿಕ ಕರೀಘಟ್ಟದ ಬೆಟ್ಟಕ್ಕೂ ಕಿಡಿಗೇಡಿಗಳು ಮತ್ತೆ ಬೆಂಕಿ ಹಚ್ಚಿದ್ದಾರೆ. ಇದರಿಂದಾಗಿ ಕುರುಚಲು ಗಿಡಗಳು ಸೇರಿದಂತೆ ಅರಣ್ಯ ನಾಶವಾಗಿದೆ.

vತಮಿಳುನಾಡು: ಕಾಡ್ಗಿಚ್ಚಿನ ಕೆನ್ನಾಲಿಗೆಗೆ ಸಿಕ್ಕಿ 9 ಜನ ದುರ್ಮರಣ

ಕರೀಘಟ್ಟ ಬೆಟ್ಟದ ಮೇಲಿನ ಅರಣ್ಯದಲ್ಲಿ ಬೆಳೆದಿರುವ ಹುಲ್ಲು ಹಾಗೂ ಕುರುಚಲು ಗಿಡಗಳು ಬಿಸಿಲಿನ ತಾಪಕ್ಕೆ ಒಣಗಿಹೋಗಿದ್ದು ಯಾರೋ ಕಿಡಿಗೇಡಿಗಳು ಈ ಹುಲ್ಲಿಗೆ ಬೆಂಕಿ ಹಚ್ಚಿದ್ದರಿಂದ ಹುಲ್ಲು ಸೇರಿದಂತೆ ಗಿಡಗಳು ಉರಿದು ಬೂದಿಯಾಗಿದೆ.

Some people set fire to Kargighatta hill Mandy

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಸೋಮವಾರ ಅರಣ್ಯದಲ್ಲಿ ಕಂಡ ಬೆಂಕಿ, ಗಾಳಿಯ ರಭಸಕ್ಕೆ ಬೆಟ್ಟದ ಸುತ್ತಲೂ ಹಾಗೂ ಶ್ರೀ ವೆಂಕಟರಮಣಸ್ವಾಮಿ ದೇವಾಲಯದ ಆಸುಪಾಸಿನ ಪ್ರದೇಶಗಳಲ್ಲೂ ಬೆಂಕಿ ಹರಡಿ ಸುಟ್ಟು ಭಸ್ಮವಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ, ಅಗ್ನಿ ಶಾಮಕದಳದ ಸಿಬ್ಬಂದಿ ಹಾಗೂ ಸಾರ್ವಜನಿಕರು ನೀರನ್ನು ಹಾಕಿ ಹಾಗೂ ಸೊಪ್ಪಿನಿಂದ ಬಡಿದು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Some people set fire to Kargighatta hill in Srirangapatna in Mandy district. The fire destroyed many trees and animals.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ