ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯಗೆ ದೇಶಭಕ್ತಿ- ಭಯೋತ್ಪಾದನೆ ಮಧ್ಯೆ ವ್ಯತ್ಯಾಸ ಗೊತ್ತಿಲ್ಲ: ಸಿ.ಟಿ. ಮಂಜುನಾಥ್

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಸೆ.29: ದೇಶಭಕ್ತಿ ಹಾಗು ಭಯೋತ್ಪಾದನೆಗೆ ವ್ಯತ್ಯಾಸಗೊತ್ತಿಲ್ಲದ ಸಿದ್ದರಾಮಯ್ಯ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಪಿ.ಎಫ್.ಐ.ಗೆ ಹೋಲಿಸುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾ ಮಾಧ್ಯಮ ವಕ್ತಾರ ಸಿ.ಟಿ. ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಆರ್‌ಎಸ್‌ಎಸ್‌ ಧ್ಯೇಯ ಮತ್ತು ಒಳ್ಳೆಯ ಕೆಲಸಗಳನ್ನು ಟೀಕಿಸುತ್ತಿಸುತ್ತಿರುವ ಸಿದ್ದರಾಮಯ್ಯರವರಿಗೆ, ದೇಶಭಕ್ತರು ಯಾರು, ದೇಶ ವಿಭಜಕರು ಯಾರು ಎಂಬುದು ತಿಳಿಯದಂತಾಗಿದಿಯೇ..? ಅಥವಾ ಇದು ಜಾಣ ಕುರುಡುತನವೇ?" ಎಂದು ಪ್ರಶ್ನಿಸಿದ್ದಾರೆ.

ದೀಪಾಲಂಕಾರವಿಲ್ಲದೆ ಬಿಕೋ ಎನ್ನುತ್ತಿರುವ ಶ್ರೀರಂಗಪಟ್ಟಣ: ಜನರ ಆಕ್ರೋಶದೀಪಾಲಂಕಾರವಿಲ್ಲದೆ ಬಿಕೋ ಎನ್ನುತ್ತಿರುವ ಶ್ರೀರಂಗಪಟ್ಟಣ: ಜನರ ಆಕ್ರೋಶ

"ದೇಶದ ಶಿಸ್ತು ಬದ್ದ ಸಂಘಟನೆಯ ಬಗ್ಗೆ ಮಾನತಾಡುವ ಮೊದಲು, ಅರಿತು ಮಾತನಾಡಲಿ, ದೇಶದಲ್ಲಿ ನೆರೆ ಪ್ರವಾಹ , ಬರಗಾಲ, ಸುನಾಮಿ, ಭೂಕಂಪ ಬಂದಾಗ ಜನರ ನೆರವಿಗೆ ಧಾವಿಸಿದ್ದು ಇದೆ ಸಂಘಟನೆ ಎಂಬುದನ್ನು ಮರೆಯಬಾರದು" ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Siddaramaiah does not know the difference between patriotism and terrorism: BJP Spokeperson

ಕೋವಿಡ್ ಸಂಧರ್ಭದಲ್ಲಿ ಮೃತಪಟ್ಟ , ಮಕ್ಕಳಿದ್ದರೂ ಮೃತರ ಚಿತಾಭಸ್ಮವನ್ನು ಪಡೆಯಲು ಬಾರದೆ ಇದ್ದಂತಹ ಸಂಧರ್ಭದಲ್ಲಿ , ಸಾವಿರಾರು ಜನರ ಚಿತಾಭಸ್ಮವನ್ನು ನದಿಯಲ್ಲಿ ವಿಧಿ ವಿಧಾನಗಳ ಸಮೇತ ಮಕ್ಕಳ ಸ್ಥಾನದಲ್ಲಿ ನಿಂತು ವಿಸರ್ಜನೆ ಮಾಡಿದ್ದೂ ಇದೆ ಆರ್‌ಎಸ್‌ಎಸ್‌ ಕಾರ್ಯಕರ್ತರು. ಕೋವಿಡ್‌ನಿಂದ ಮೃತ ಪಟ್ಟ ಸಾವಿರಾರು ಮೃತದೇಹಗಳನ್ನು ಅವರ ಕುಟುಂಬದವರೇ ಮುಟ್ಟಲು ಹಿಂಜರೆಯುತಿದ್ದ ಸಂದರ್ಭದಲ್ಲಿ ಅಂತ್ಯ ಸಂಸ್ಕಾರ ಮಾಡಿದ್ದೂ ಇದೆ ಕಾರ್ಯಕರ್ತರೇ. ಕೊರೊನಾ ಸಮಯದಲ್ಲಿ ತುತ್ತು ಅನ್ನಕ್ಕೂ ಪರೆದಾಡುತ್ತಿದ್ದ ವಸತಿರಹಿತ ಕೂಲಿ ಕಾರ್ಮಿಕರಿಗೆ ತಮ್ಮ ಮನೆಯಲ್ಲಿದ್ದ ಅಕ್ಕಿ ಬೇಳೆ, ಸೇರಿದಂತೆ ಆಹಾರವನ್ನು ವಿತರಣೆ ಮಾಡಿದ್ದು ನಮ್ಮ ಕಾರ್ಯಕರ್ತರು" ಎಂದು ತಿಳಿಸಿದ್ದಾರೆ.

"ಶಿಸ್ತು ಬದ್ದವಾಗಿ ಕಟ್ಟಲ್ಪಟ್ಟಂತಹ ಸಂಘದ ಒಳಹರವು ಒಳರಚನೆ ಇತರರಿಗೆ ಮಾದರಿ. ಮನೆ ಮಠ ತಮ್ಮವರೆಲ್ಲರನ್ನು ಬದಿಗಿಟ್ಟು ಸಂಘ ಬಯಸುತ್ತಿರುವ ಬಲಿಷ್ಟ ಭಾರತದ ನಿರ್ಮಾಣ ಕಾರ್ಯದಲ್ಲಿ ಸಂತರಂತೆ ಕಾಯಾ, ವಾಚ, ಮಾನಸ ದುಡಿಯುತ್ತಿದ್ದಾರೆ. ಭಾರತವನ್ನು ಅಖಂಡವಾಗಿ ನೋಡಬೇಕೆನ್ನುವುದು ಆರ್‌ಎಸ್‌ಎಸ್‌ ಧ್ಯೇಯವಾಗಿದೆ" ಎಂದು ತಿಳಿಸಿದ್ದಾರೆ.

'ಅದೇ ಭಾರತವನ್ನು ಮತ್ತೊಮ್ಮೆ ವಿಭಜನೆ ಮಾಡಬೇಕು, ಮೊಘಲಿಸ್ಥಾನ ನಿರ್ಮಾಣ ಮಾಡಬೇಕೆನ್ನುವ, ಪಾಕಿಸ್ತಾನದ ವಿಶ್ವವಿದ್ಯಾಲಯದಲ್ಲಿ ಹುಟ್ಟಿದ ಈ ಹುನ್ನಾರಕ್ಕೆ ದುಡಿಯುತ್ತಿದ್ದ ದೇಶವಿರೋ ಪಿಎಫ್ಐ ಸಂಘಟನೆಯನ್ನು ಕೇಂದ್ರ ಸರ್ಕಾರ ನಿಷೇಸಿದೆ. ಪಿಎಫ್‌ಐ ದೇಶವಿರೋ ಕೃತ್ಯದಲ್ಲಿ ತೊಡಗಿದೆ ಎಂಬ ಅರಿವಿದ್ದರೂ, ಕೇಂದ್ರ ಹಾಗೂ ಗುಪ್ತಚರ ಇಲಾಖೆ ಮಾಹಿತಿಯನ್ನು ಧಿಕ್ಕರಿಸಿ ಆ ಸಂಘಟನೆಯ 175 ಪ್ರಕರಣಗಳನ್ನು ವಜಾ ಮಾಡಿ ಅದರಲ್ಲಿ ಭಾಗಿಯಾಗಿದ್ದ 1600 ಮಂದಿ ಉಗ್ರರಿಗೆ ಸ್ವಾತಂತ್ರ್ಯ ನೀಡಿದ್ದು ನಿಮ್ಮ ಭಾಗ್ಯಗಳಲ್ಲೊಂದಾಗಿದೆ" ಎಂದು ಸಿದ್ದರಾಮಯ್ಯ ಅವರನ್ನು ಟೀಕಿಸಿದ್ದಾರೆ.

Siddaramaiah does not know the difference between patriotism and terrorism: BJP Spokeperson

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಪ್ರಧಾನಿ ನರೇಂದ್ರಮೋದಿ ಸೇರಿದಂತೆ ಅನೇಕ ಸಚಿವರು, ಮುಖಂಡರು ಆರ್‌ಎಸ್‌ಎಸ್ ಮೂಲದವರೇ ಆಗಿದ್ದಾರೆ. ಅವರೆಲ್ಲರನ್ನೂ ನಿಮ್ಮ ಮಾತಿನಲ್ಲಿ ದೇಶದ್ರೋಹಿಗಳು ಎನ್ನಲಾಗುತ್ತದೆಯೇ ಎಂದು ಪ್ರಶ್ನಿಸಿರುವ ಮಂಜುನಾಥ್, ಇನ್ನಾದರೂ ಇಂತಹ ಕೀಳು ಮಟ್ಟದ ರಾಜಕೀಯ ಬಿಟ್ಟು ಅಖಂಡ ಭಾರತವನ್ನು ದೃಷ್ಠಿಯಲ್ಲಿಟ್ಟುಕೊಂಡು ಹೇಳಿಕೆ ನೀಡಬೇಕು ಎಂದಿದ್ದಾರೆ.

English summary
'Siddaramaiah does not know the difference between patriotism and terrorism says Mandya BJP media spokesperson C.T. Manjunath. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X