ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯದಲ್ಲಿ ಕೈ-ತೆನೆಗೆ ಹಿನ್ನಡೆ, ಚುನಾವಣೆ ಬಹಿಷ್ಕಾರ ಹಾಕಿದ ಕುರುಬರು

|
Google Oneindia Kannada News

ಮಂಡ್ಯ, ಅಕ್ಟೋಬರ್ 31: ಮಂಡ್ಯ ಲೋಕಸಭೆ ಉಪಚುನಾವಣೆಗೆ ಬಿರುಸಿನ ಪ್ರಚಾರ ಕಾರ್ಯ ನಡೆಯುತ್ತಿದೆ. ಬಿಜೆಪಿ ಹಾಗೂ ಜೆಡಿಎಸ್ ನಡುವಿನ ನೇರ ಹಣಾಹಣಿಗೆ ವೇದಿಕೆ ಸಜ್ಜಾಗಿದೆ. ರೈತ ಸಮೂಹ ಯಾರನ್ನು ಬೆಂಬಲಿಸಲಿದೆ? ಕುರುಬ ಸಮುದಾಯ ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿರುವುದೇಕೆ? ಎಂಬುದರ ಬಗ್ಗೆ ವಿವರ ಇಲ್ಲಿದೆ.

ಮಂಡ್ಯ ಉಪ ಚುನಾವಣೆ : ಬಿಜೆಪಿ, ಜೆಡಿಎಸ್ ಬಲಾಬಲ ಮಂಡ್ಯ ಉಪ ಚುನಾವಣೆ : ಬಿಜೆಪಿ, ಜೆಡಿಎಸ್ ಬಲಾಬಲ

ನವೆಂಬರ್ 03ರಂದು ನಡೆಯಲಿರುವ ಮಂಡ್ಯ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಜೆಡಿಎಸ್ ಗೆ ಕಾಂಗ್ರೆಸ್ ಬದಲಿಗೆ ಬಿಜೆಪಿ ಎದುರಾಳಿಯಾಗುತ್ತಿದೆ. ಕಾಂಗ್ರೆಸ್ ಹಾಗೂ ಜೆಡಿ ಎಸ್ ಮೈತ್ರಿಕೂಟ ಅಭ್ಯರ್ಥಿ ಎಲ್. ಆರ್ ಶಿವರಾಮೇಗೌಡರ ವಿರುದ್ಧ ಬಿಜೆಪಿಯಿಂದ ಮಾಜಿ ಕೆಎಎಸ್ ಅಧಿಕಾರಿ ಡಾ. ಸಿದ್ದರಾಮಯ್ಯ ಅವರು ಕಣಕ್ಕಿಳಿದಿದ್ದಾರೆ.

ಮಂಡ್ಯ ರೈತ ಸಂಘದ ಒಂದೂವರೆ ಲಕ್ಷ ಮತಗಳು ಮೈತ್ರಿಗಾ, ಬಿಜೆಪಿಗಾ? ಮಂಡ್ಯ ರೈತ ಸಂಘದ ಒಂದೂವರೆ ಲಕ್ಷ ಮತಗಳು ಮೈತ್ರಿಗಾ, ಬಿಜೆಪಿಗಾ?

ಕೆ.ಆರ್ ನಗರದ ಕನಕ ಗುರು ಪೀಠದ ಬಳಿ ಮಾತನಾಡಿದ ಕುರುಬ ಸಮುದಾಯದ ಮುಖಂಡ ಶಿವಣ್ಣ, ಅಭಿವೃದ್ಧಿ ಕಾಣದ ಗ್ರಾಮಸ್ಥರು ಈ ಬಾರಿ ಚುನಾವಣೆಯಲ್ಲಿ ಮತದಾನ ಮಾಡದಿರಲು ನಿರ್ಧರಿಸಿದ್ದಾರೆ ಈ ಬಗ್ಗೆ ಯಾರನ್ನು ನಾವು ಬಲವಂತಪಡಿಸಿಲ್ಲ. ಸರಿ ಸುಮಾರು 50 ಸಾವಿರಕ್ಕೂ ಅಧಿಕ ಮತದಾರರು ಕುರುಬ ಸಮುದಾಯದಲ್ಲಿದ್ದಾರೆ ಎಂದರು.

ಮಂಡ್ಯ ಚುನಾವಣೆ : ಎಡವಟ್ಟು ಮಾಡಿಕೊಂಡ ಎಲ್.ಆರ್.ಶಿವರಾಮೇಗೌಡ! ಮಂಡ್ಯ ಚುನಾವಣೆ : ಎಡವಟ್ಟು ಮಾಡಿಕೊಂಡ ಎಲ್.ಆರ್.ಶಿವರಾಮೇಗೌಡ!

ಸಾ.ರಾ ಮಹೇಶ್ ಮೇಲೂ ಕೋಪವಿದೆ

ಸಾ.ರಾ ಮಹೇಶ್ ಮೇಲೂ ಕೋಪವಿದೆ

ಕೆ. ಆರ್ ನಗರದ ತಾಲೂಕಿನ ಗ್ರಾಮಗಳ ಅಭಿವೃದ್ದಿಗಾಗಿ ಕಳೆದ ಸರ್ಕಾರದಿಂದ 40 ಕೋಟಿ ರು ನೀಡಲಾಗಿದೆ. ಆದರೆ, ಇನ್ನೂ ಬಳಕೆಯಾಗಿಲ್ಲ. ಜೆಡಿಎಸ್ ಪಕ್ಷದ ಮುಖಂಡ, ಸಚಿವ ಸಾ.ರ ಮಹೇಶ್ ಅವರಿಗೆ ಕುರುಬರನ್ನು ಕಂಡರಾಗುವುದಿಲ್ಲ. ಅವರಿಗೆ ಕುರುಬರು ಮತ ಹಾಕಿಲ್ಲ ಎಂಬ ಸಿಟ್ಟಿನಿಂದ ವರ್ತಿಸುತ್ತಿದ್ದಾರೆ ಎಂಬ ಆರೋಪವಿದೆ.

ಚುನಾವಣೆಗೆ ಬಹಿಷ್ಕಾರ ಹಾಕಿದ ಕುರುಬರು

ಚುನಾವಣೆಗೆ ಬಹಿಷ್ಕಾರ ಹಾಕಿದ ಕುರುಬರು

ಕೆ.ಆರ್ ನಗರದ ಕನಕ ಗುರು ಪೀಠದ ಬಳಿ ಮಾತನಾಡಿದ ಕುರುಬ ಸಮುದಾಯದ ಮುಖಂಡ ಶಿವಣ್ಣ, ಅಭಿವೃದ್ಧಿ ಕಾಣದ ಗ್ರಾಮಸ್ಥರು ಈ ಬಾರಿ ಚುನಾವಣೆಯಲ್ಲಿ ಮತದಾನ ಮಾಡದಿರಲು ನಿರ್ಧರಿಸಿದ್ದಾರೆ ಈ ಬಗ್ಗೆ ಯಾರನ್ನು ನಾವು ಬಲವಂತಪಡಿಸಿಲ್ಲ. ಸರಿ ಸುಮಾರು 50 ಸಾವಿರಕ್ಕೂ ಅಧಿಕ ಮತದಾರರು ಕುರುಬ ಸಮುದಾಯದಲ್ಲಿದ್ದಾರೆ ಎಂದರು.

ಆರೋಪ ತಳ್ಳಿ ಹಾಕಿದ ಮಾಜಿ ಮೇಯರ್

ಆರೋಪ ತಳ್ಳಿ ಹಾಕಿದ ಮಾಜಿ ಮೇಯರ್

ಆದರೆ, ಈ ಆರೋಪವನ್ನು ತಳ್ಳಿ ಹಾಕಿದ ಮೈಸೂರಿನ ಜೆಡಿಎಸ್ ಮುಖಂಡ, ಮಾಜಿ ಮೇಯರ್ ಬಿಎಸ್ ಭೈರಪ್ಪ, ಕುರುಬ ಸಮಾಜದವರು ಜೆಡಿಎಸ್ ಪರವಾಗಿ ಇದ್ದಾರೆ. ಈ ಬಾರಿ ಚುನಾವಣೆಯಲ್ಲೂ ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಿರಿಯ ನಾಯಕ ಜೆಡಿಎಸ್ ರಾಜ್ಯಾಧ್ಯಕ್ಷ ಎ.ಎಚ್ ವಿಶ್ವನಾಥ್ ಇಬ್ಬರು ನಮ್ಮ ಸಮುದಾಯದ ಕಣ್ಣುಗಳು. ಮಹೇಶ್ ಅವರ ಬಗ್ಗೆ ಅಪಪ್ರಚಾರ ಬೇಡ ಎಂದಿದ್ದಾರೆ.

ಸಮ್ಮಿಶ್ರ ಸರ್ಕಾರದ ಇಬ್ಬರು ಸಚಿವರು ಜಿಲ್ಲೆಯಲ್ಲಿದ್ದಾರೆ

ಸಮ್ಮಿಶ್ರ ಸರ್ಕಾರದ ಇಬ್ಬರು ಸಚಿವರು ಜಿಲ್ಲೆಯಲ್ಲಿದ್ದಾರೆ

ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಮಂಡ್ಯವನ್ನು ಜೆಡಿಎಸ್ ಒಂದೂವರೆ ದಶಕದಿಂದ ತನ್ನವಶದಲ್ಲಿ ಇಟ್ಟುಕೊಂಡಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ 8 ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆದ್ದಿದ್ದಾರೆ. ಸಮ್ಮಿಶ್ರ ಸರ್ಕಾರದ ಇಬ್ಬರು ಸಚಿವರು ಜಿಲ್ಲೆಯಲ್ಲಿದ್ದಾರೆ. ಇಂತಹ ಪ್ರಭಾವನ್ನು ಬಿಜೆಪಿಗೆ ಹೇಗೆ ಮುರಿಯಲಿದೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಬಿಜೆಪಿಗೆ ಗೆಲುವು ಸುಲಭವಲ್ಲ

ಬಿಜೆಪಿಗೆ ಗೆಲುವು ಸುಲಭವಲ್ಲ

ಇದುವರೆಗೂ ಕ್ಷೇತ್ರದಲ್ಲಿ ನಡೆದ 19 ಚುನಾವಣೆಯಲ್ಲಿ 14ರಲ್ಲಿ ಕಾಂಗ್ರೆಸ್ ಗೆದ್ದಿದೆ. ಬಿಜೆಪಿ ಕ್ಷೇತ್ರದಲ್ಲಿ ಸಾಕಷ್ಟು ಪ್ರಭಾವವನ್ನು ಹೊಂದಿಲ್ಲ. 1991 ರಲ್ಲಿ ಡಿ.ರಾಮಲಿಂಗಯ್ಯ 161153 ಮತ ಪಡೆದಿದ್ದರು. 2009ರಲ್ಲಿ ಎಲ್.ಆರ್.ಶಿವರಾಮೇಗೌಡ ಅವರು 144875 ಮತ ಮತ್ತು 2014ರ ಚುನಾವಣೆಯಲ್ಲಿ ಪ್ರೊ.ಶಿವಲಿಂಗಯ್ಯ 86996 ಮತಗಳನ್ನು ಪಡೆದಿದ್ದರು.

English summary
Setback for JDS -Congress? Kurubas will boycott Mandya poll. Over 50,000 people of the Kuruba community in K R Nagar taluk have decided to boycott the Mandya Lok Sabha by-poll on November 3.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X