ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯದಲ್ಲಿ ಆರಂಭವಾಯ್ತು ಕು.ರಮ್ಯಾ ಕ್ಯಾಂಟೀನ್‌

|
Google Oneindia Kannada News

Recommended Video

ಮಂಡ್ಯದಲ್ಲಿ ಶುರು ಆಯ್ತು ಕು.ರಮ್ಯಾ ಕ್ಯಾಂಟೀನ್‌ | Oneindia Kannada

ಮಂಡ್ಯ, ಡಿಸೆಂಬರ್ 03 : ಇಂದಿರಾ, ಅಪ್ಪಾಜಿ, ಸ್ವಾಮಿ ಕ್ಯಾಂಟೀನ್ ಆಯ್ತು. ಈಗ ಮಂಡ್ಯದಲ್ಲಿ ಕು.ರಮ್ಯಾ ಕ್ಯಾಂಟೀನ್ ಆರಂಭವಾಗಿದೆ. 10 ರೂ. ಊಟ, ಉಪಹಾರವನ್ನು ಕ್ಯಾಂಟೀನ್‌ನಲ್ಲಿ ಸವಿಯಬಹುದಾಗಿದೆ.

'ಹೊಸ ವರ್ಷದ ಆರಂಭದಲ್ಲೇ ಹಾಸನ ಜಿಲ್ಲೆಯಲ್ಲಿ 9 ಇಂದಿರಾ ಕ್ಯಾಂಟೀನ್''ಹೊಸ ವರ್ಷದ ಆರಂಭದಲ್ಲೇ ಹಾಸನ ಜಿಲ್ಲೆಯಲ್ಲಿ 9 ಇಂದಿರಾ ಕ್ಯಾಂಟೀನ್'

ಭಾನುವಾರ ಮಂಡ್ಯದಲ್ಲಿ ಕು.ರಮ್ಯಾ ಕ್ಯಾಂಟೀನ್‌ಗೆ ಚಾಲನೆ ಸಿಕ್ಕಿದೆ. ನಟಿ, ಮಾಜಿ ಸಂಸದೆ ರಮ್ಯಾ ಅವರ ಮೇಲಿನ ಅಭಿಮಾನಕ್ಕಾಗಿ ರಘು ಎನ್ನುವವರು ರಮ್ಯಾ ಕ್ಯಾಂಟೀನ್ ಆರಂಭಿಸಿದ್ದಾರೆ. 15 ವರ್ಷಗಳಿಂದ ರಘು ಅವರು ರಸ್ತೆಬದಿಯಲ್ಲಿ ಕ್ಯಾಂಟೀನ್ ನಡೆಸುತ್ತಿದ್ದರು.

Ramya canteen open in Mandya, Karnataka

'ರಮ್ಯಾ ಅವರು ಸಂಸದೆಯಾಗಿದ್ದಾಗ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಹಳ್ಳಿ-ಹಳ್ಳಿಗೆ ಭೇಟಿ ನೀಡಿ ಜನರ ಕಷ್ಟಗಳನ್ನು ಆಲಿಸಿದ್ದಾರೆ. ಆದ್ದರಿಂದ, ಅವರ ಹೆಸರಿನಲ್ಲಿ ಕ್ಯಾಂಟೀನ್ ಆರಂಭಿಸಿದ್ದೇನೆ' ಎಂದು ರಘು ಹೇಳಿದ್ದಾರೆ.

ಇಂದಿರಾ ಕ್ಯಾಂಟೀನ್‌ಗಳಲ್ಲಿ ರಾಗಿ ಮುದ್ದೆ ಭಾಗ್ಯ?ಇಂದಿರಾ ಕ್ಯಾಂಟೀನ್‌ಗಳಲ್ಲಿ ರಾಗಿ ಮುದ್ದೆ ಭಾಗ್ಯ?

ಮಂಡ್ಯದ ಅಶೋಕ ನಗರದ ತ್ರಿವೇಣಿ ರಸ್ತೆಯಲ್ಲಿ ಕು.ರಮ್ಯಾ ಕ್ಯಾಂಟೀನ್ ಆರಂಭವಾಗಿದೆ. ಕೇವಲ 10ರೂ.ಗೆ ಊಟ, ಉಪಹಾರ ದೊರೆಯುತ್ತದೆ. ಮಂಡ್ಯದ ವಿಮ್ಸ್ ಆಸ್ಪತ್ರೆ ಸಮೀಪದಲ್ಲಿಯೇ ಕ್ಯಾಂಟೀನ್ ಇದೆ.

ಮಸಾಲೆ ದೋಸೆ, ಪ್ಲೇನ್ ದೋಸೆ, ಇಡ್ಲಿ-ವಡೆ, ಅನ್ನ-ಸಾಂಬಾರು, ರಾಗಿ ಮುದ್ದೆ, ರಾಗಿ ಗಂಜಿ ಮುಂತಾದವುಗಳು ಕ್ಯಾಂಟೀನ್‌ನಲ್ಲಿ ಸಿಗಲಿವೆ. ಪಾರ್ಸೆಲ್ ತೆಗೆದುಕೊಂಡರೂ ಯಾವುದೇ ಹೆಚ್ಚಿನ ಶುಲ್ಕ ವಿಧಿಸುವುದಿಲ್ಲ ಎಂದು ಮಾಲೀಕ ರಘು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕ ಸರ್ಕಾರ ಈಗಾಗಲೇ ಬೆಂಗಳೂರು ನಗರದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಿದೆ. ಜೆಡಿಎಸ್‌ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಅವರು ನಮ್ಮ ಅಪ್ಪಾಜಿ ಕ್ಯಾಂಟೀನ್‌ ಅನ್ನು ಬಸವನಗುಡಿಯಲ್ಲಿ ಸ್ಥಾಪನೆ ಮಾಡಿದ್ದಾರೆ. ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ 'ಸ್ವಾಮಿ ಕ್ಯಾಂಟೀನ್‌' ಎಂಬ ಹೆಸರಿನಲ್ಲಿ ಕ್ಯಾಂಟೀನ್ ಆರಂಭಿಸಿದ್ದಾರೆ.

English summary
In the name of Mandya former MP and AICC social media in-charge Ramya canteen opened in Mandya on December 03, 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X