ಜನವರಿ 4ರ ವರೆಗೆ ಭೀಮಾನಾಯ್ಕ್ ಗೆ ಜೈಲುವಾಸ

Posted By:
Subscribe to Oneindia Kannada

ಮದ್ದೂರು, ಡಿಸೆಂಬರ್ 23: ಮದ್ದೂರು ಮೂಲದ ಕಾರು ಚಾಲಕ ರಮೇಶ್ ಗೌಡ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಹೊತ್ತಿರುವ ಅಮಾನತಾಗಿರುವ ಕೆಎಎಸ್ ಅಧಿಕಾರಿ ಎಲ್. ಭೀಮಾನಾಯ್ಕ ಅವರ ನ್ಯಾಯಾಂಗ ಬಂಧನದ ಅವಧಿ ಜನವರಿ 4,2017ರ ತನಕ ವಿಸ್ತರಿಸಲಾಗಿದೆ.[ಚಾಲಕ ರಮೇಶ್ ಆತ್ಮಹತ್ಯೆ ಕೇಸ್, ಕೆಎಎಸ್ ಅಧಿಕಾರಿ ಅಮಾನತು!]

ಬೆಂಗಳೂರು ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಭೀಮಾನಾಯ್ಕ್ ಹಾಗೂ ಕಾರು ಚಾಲಕ ಮಹಮ್ಮದ್ ಎಂಬುವವರನ್ನು ಮಂಡ್ಯಜಿಲ್ಲೆ ಮದ್ದೂರಿನ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಶುಕ್ರವಾರ ಬೆಳಗ್ಗೆ ಹಾಜರುಪಡಿಸಲಾಯಿತು. ಭೀಮಾನಾಯ್ಕ್ ಹಾಗೂ ಮಹಮದ್ ಅವರ ನ್ಯಾಯಾಂಗ ಬಂಧನ ಅವಧಿಯನ್ನು ಜನವರಿ 4 ರ ವಿಸ್ತರಿಸಿ ನ್ಯಾಯಾಲಯ ಆದೇಶ ನೀಡಿದೆ.[ಮನಿ ಲಾಂಡ್ರಿಂಗ್ ಕೇಸ್: ಬಿ ಶ್ರೀರಾಮುಲು ಗನ್ ಮ್ಯಾನ್ ಬಂಧನ]

Ramesh Suicide Case: KAS officer Bheema Naik sent to Judicial Custody till Jan 4

'ಭೀಮಾನಾಯ್ಕ ಅವರು ಗಾಲಿ ಜನಾರ್ದನ ರೆಡ್ಡಿ ಅವರ ಮಗಳ ಮದುವೆಗೆ 25 ಕೋಟಿ ಕಪ್ಪು ಹಣ ಬಿಳಿ ಮಾಡಿಕೊಟ್ಟಿದ್ದರು. ಈ ವಿಷಯ ಗೊತ್ತಿದ್ದ ನನಗೆ ಜೀವ ಬೆದರಿಕೆ ಒಡ್ಡುತ್ತಿದ್ದರು. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ' ಎಂದು ಅವರ ಕಾರು ಚಾಲಕರಾಗಿದ್ದ ರಮೇಶ ಗೌಡ ಅವರು ತಮ್ಮ ಸೂಸೈಡ್ ನೋಟ್ ನಲ್ಲಿ ಉಲ್ಲೇಖಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Driver Ramesh Suicice Case: JMFC court in Maddur, Mandya today sent KAS officer Bheema Naik and driver Mohammad to Judicial Custody till Jan 4.
Please Wait while comments are loading...