ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯ ಮಳೆ ಹಾನಿ: 400 ಕೋಟಿ ಹಣ ಬಿಡುಗಡೆಗೆ ಸ್ಥಳೀಯ ಶಾಸಕರ ಮನವಿ

|
Google Oneindia Kannada News

ಮಂಡ್ಯ ಆಗಸ್ಟ್ 29: ಮಂಡ್ಯ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿಯಾದ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಪ್ರಕೃತಿ ವಿಕೋಪ ನಿಧಿಯಿಂದ ರೂ .400 ಕೋಟಿ ಹಣ ಬಿಡುಗಡೆ ಮಾಡಬೇಕೆಂದು ಶಾಸಕರಾದ ದಿನೇಶ್ ಗೂಳಿಗೌಡ ಹಾಗೂ ಮಧು ಜಿ. ಮಾದೇಗೌಡ ಮನವಿ ಪತ್ರ ಸಲ್ಲಿಸಿದ್ದಾರೆ.

ಮಂಡ್ಯ ಜಿಲ್ಲೆಯಾದ್ಯಂತ ಕಳೆದ 3 ತಿಂಗಳಿನಿಂದ ಸುರಿದ ಭಾರಿ ಮಳೆಯಿಂದಾಗಿ ಏಳು ವಿಧಾನ ಸಭಾ ಕ್ಷೇತ್ರಗಳಲ್ಲಿನ ಜನ - ಜಾನುವಾರು , ಕೃಷಿ - ತೋಟಗಾರಿಕೆ ಬೆಳೆಗಳ ಹಾನಿ , ಶಾಲೆಗಳು , ಆಸ್ಪತ್ರೆಗಳು , ಗ್ರಾಮೀಣ ರಸ್ತೆಗಳು / ಲೋಕೋಪಯೋಗಿ ರಸ್ತೆಗಳು , ಪಟ್ಟಣ ಪಂಚಾಯಿತಿ / ನಗರಸಭೆ / ಪುರಸಭೆ , ಸಣ್ಣ ನೀರಾವರಿ , ವಿದ್ಯುತ್ ಕಂಬಗಳ ಲೈನ್‌ಗಳು ಸೇರಿದಂತೆ ಜಿಲ್ಲೆಯ ಮೂಲಭೂತ ಸೌಲಭ್ಯ ಭಾರಿ ಪ್ರಮಾಣದಲ್ಲಿ ಹಾನಿಯಾಗಿದೆ.

ಮೈಸೂರು-ಬೆಂಗಳೂರಿಗೆ ತೆರಳುವವರು ಪರ್ಯಾಯ ಮಾರ್ಗ ಅನುಸರಿಸಿಮೈಸೂರು-ಬೆಂಗಳೂರಿಗೆ ತೆರಳುವವರು ಪರ್ಯಾಯ ಮಾರ್ಗ ಅನುಸರಿಸಿ

ಇದರಲ್ಲಿ 264.54 ಹೆಕ್ಟೇರ್ ಕೃಷಿ ಬೆಳೆ, 707.81 ಹೆಕ್ಟೇರ್‌ ' ತೋಟಗಾರಿಕೆ ಬೆಳೆಗಳು, 259 ಶಾಲೆಗಳು, 535 ಶಾಲಾ ಕೊಠಡಿಗಳು, 51 ಸೇತುವೆಗಳು, 25 ಅಂಗನವಾಡಿ ಕೇಂದ್ರಗಳು, 245.4 ಕಿ.ಮೀ. 180 ಹಳ್ಳಿಗಳ ರಸ್ತೆಗಳು ಹಾಳಾಗಿವೆ. ಮಾತ್ರವಲ್ಲದೆ 1000 ಕ್ಕೂ ಹೆಚ್ಚ ಮನೆಗಳು, ಪ್ರಾಥಮಿಕ ಅಂದಾಜು ಒಟ್ಟಾರೆ 7 ವಿಧಾನಸಭಾ ಕ್ಷೇತ್ರಗಳಿಂದ ಸುಮಾರು 400 ಕೋಟಿಗೂ ಹೆಚ್ಚು ಅಸ್ತಿ - ಪಾಸ್ತಿ , ಜನ - ಜಾನುವಾರುಗಳ ಮೂಲಭೂತ ಸೌಕರ್ಯಗಳು ಹಾನಿಯಾಗಿದೆ.

ವಿಕೋಪ ನಿಧಿಯಿಂದ ರೂ .400 ಕೋಟಿ ಹಣ ಬಿಡುಗಡೆಗೆ ಮನವಿ

ವಿಕೋಪ ನಿಧಿಯಿಂದ ರೂ .400 ಕೋಟಿ ಹಣ ಬಿಡುಗಡೆಗೆ ಮನವಿ

ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ತುರ್ತಾಗಿ ಮೂಲಭೂತ ಸೌಕರ್ಯಗಳು ಹಾಗೂ ದುರಸ್ಥಿ ಕಾರ್ಯಗಳನ್ನು ಕೈಗೊಳ್ಳಲು ಪ್ರಕೃತಿ ವಿಕೋಪ ನಿಧಿಯಿಂದ ತುರ್ತಾಗಿ ಹಣ ಬಿಡುಗಡೆಗೊಳಿಸಲು ಸೂಕ್ತ ಆದೇಶ ಮಾಡಿ ಸಂಕಷ್ಟದಲ್ಲಿರುವ ಮಂಡ್ಯ ಜಿಲ್ಲೆಯ ಜನತೆಯ ನೆರವಿಗೆ ಧಾವಿಸಬೇಕೆಂದು ಶಾಸಕ ದಿನೇಶ್ ಗೂಳಿಗೌಡ, ಶಾಸಕ ಮಧು ಜಿ. ಮಾದೇಗೌಡ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

ರಾಮನಗರದಲ್ಲಿ ಧಾರಾಕಾರ ಮಳೆ, ಹೆದ್ದಾರಿ ಜಲಾವೃತ, ರಜೆ ಘೋಷಣೆರಾಮನಗರದಲ್ಲಿ ಧಾರಾಕಾರ ಮಳೆ, ಹೆದ್ದಾರಿ ಜಲಾವೃತ, ರಜೆ ಘೋಷಣೆ

'ಮನೆ ಮತ್ತು ಬೆಳೆ ಹಾನಿಗೆ ಪರಿಹಾರ ವಿತರಿಸಿ' ಸಿಎಂ

'ಮನೆ ಮತ್ತು ಬೆಳೆ ಹಾನಿಗೆ ಪರಿಹಾರ ವಿತರಿಸಿ' ಸಿಎಂ

ನಿನ್ನೆ (ಆಗಸ್ಟ್ 28) ಮಳೆ ಹಾನಿ ಜಿಲ್ಲೆಗಳ ಜಿಲ್ಲಾಧಿಕರಿಗಳು, ಎಸ್‌ಪಿಗಳ ಜೊತೆ ಸಿಎಂ ಬೊಮ್ಮಾಯಿ ಗೃಹ ಕಚೇರಿ ಕೃಷ್ಣಾದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು. ಸಭೆಯಲ್ಲಿ ಮಳೆಯಿಂದಾದ ಹಾನಿಗಳ ಬಗ್ಗೆ ಮಾಹಿತಿ ಪಡೆದರು. ಮಳೆ ಹಾನಿ ಸಂತ್ರಸ್ತರಿಗೆ ತಕ್ಷಣ ಮನೆ, ಬೆಳೆ ಹಾನಿ ಪರಹಾರ ವಿತರಿಸಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕೆರೆಗಳು ಒಡೆಯದಂತೆ ಹಾಗೂ ಬಿರುಕು ಬೀಳದಂತೆ ಎಚ್ಚರವಹಿಸಿ. ಸಮೀಕ್ಷೆ ನಡೆಸಿ ಅಗತ್ಯವಿದ್ದೆಡೆ ತಕ್ಷಣವೇ ದುರಸ್ತಿ ಕಾರ್ಯ ಕೈಗೊಳ್ಳಿ. ದೊಡ್ಡ ಕೆರೆಗಳಿರುವಲ್ಲಿ ಜಾಗೃತರಾಗಿದ್ದು, ಸಾವು ನೋವು ಸಂಭವಿಸದಂತೆ ಎಚ್ಚರ ವಹಿಸಿ. ಮಳೆ ಹಾನಿಯಿಂದ ಸಂತ್ರಸ್ತರಿಗೆ ವಿಳಂಬ ಮಾಡದೆ ತಕ್ಷಣವೇ ಮನೆ ಮತ್ತು ಬೆಳೆ ಹಾನಿಗೆ ಪರಿಹಾರ ವಿತರಿಸಿ ಎಂದು ಸೂಚನೆ ನೀಡಿದರು.

ರಸ್ತೆ ಮತ್ತು ಸೇತುವೆಗಳನ್ನು ತಕ್ಷಣವೇ ದುರಸ್ತಿ

ರಸ್ತೆ ಮತ್ತು ಸೇತುವೆಗಳನ್ನು ತಕ್ಷಣವೇ ದುರಸ್ತಿ

ಮೈಸೂರು ಹೆದ್ದಾರಿಯಲ್ಲಿ ಮಳೆಯಿಂದಾಗಿ ನೀರು ನಿಂತಿರುವುದರಿಂದ ಪರ್ಯಾಯ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಇಂದಿನಿಂದಲೇ ಅನುವು ಮಾಡಿಕೊಡಿ ಎಂದು ಮೈಸೂರು, ರಾಮನಗರ ಹಾಗೂ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಸೂಚಿಸಿದರು.

ಮಳೆಯಿಂದ ಹಾನಿಗೊಳಗಾಗಿರುವ ರಸ್ತೆ ಮತ್ತು ಸೇತುವೆಗಳನ್ನು ತಕ್ಷಣವೇ ದುರಸ್ತಿ ಮಾಡಬೇಕು. ಅಧಿಕಾರಿಗಳು ಸಂವಹನದ ಮೂಲಕ ಕಾರ್ಯನಿರ್ವಹಿಸಬೇಕು. ಲೋಕೋಪಯೋಗಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ರಸ್ತೆ ದುರಸ್ತಿ ಕೈಗೊಳ್ಳಬೇಕು ಎಂದು ಹೇಳಿದರು.

ಕಾಳಜಿ ಕೇಂದ್ರಗಳಲ್ಲಿರುವವರಿಗೆ ಗುಣಮಟ್ಟದ ಆಹಾರ

ಕಾಳಜಿ ಕೇಂದ್ರಗಳಲ್ಲಿರುವವರಿಗೆ ಗುಣಮಟ್ಟದ ಆಹಾರ

ಸಕಾಲದಲ್ಲಿ ಕಡಿತಗೊಂಡಿರುವ ವಿದ್ಯುತ್ ಸಂಪರ್ಕ ಮರುಸ್ಥಾಪಿಸಬೇಕು. ಕಾಳಜಿ ಕೇಂದ್ರಗಳಲ್ಲಿರುವವರಿಗೆ ಗುಣಮಟ್ಟದ ಆಹಾರ ಹಾಗೂ ಬಂಧುಗಳ ಮನೆಗೆ ತೆರಲಿರುವವರಿಗೆ ಆಹಾರ ಕಿಟ್​ಗಳನ್ನು ತಲುಪಿಸಿ ಎಂದರು. ಈ ವೇಳೆ ಮಳೆಯಿಂದಾಗಿ ತಮ್ಮ ಕ್ಷೇತ್ರಗಳಲ್ಲಿ ಆಗಿರುವ ಅನಾಹುತದ ಬಗ್ಗೆ ಸಚಿವರಾದ ಎಸ್.ಟಿ. ಸೋಮಶೇಖರ್, ಡಾ: ಸಿ.ಎನ್.ಅಶ್ವತ್ಥ್ ನಾರಾಯಣ್, ಉಮೇಶ್ ಕತ್ತಿ ಸಭೆಯಲ್ಲಿ ವಿವರಿಸಿದ್ದಾರೆ.

English summary
MLAs Dinesh Gooligowda and Madhu G. want to release Rs.400 crore from the natural disaster fund to provide basic facilities in rain-damaged areas in the 7 assembly constituencies of Mandya district. Madegowda has submitted a letter of appeal to the District commissioners office.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X