ಅವಹೇಳನಕಾರಿ ಹೇಳಿಕೆ: ಸಿದ್ದರಾಮಯ್ಯಗೆ ಚೆಡ್ಡಿ ರವಾನೆ

ಮಂಡ್ಯ, ಜೂ 6: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರ್ ಎಸ್ ಎಸ್ ನವರ ಚಡ್ಡಿ ಸುಡುವ ಅಭಿಯಾನ ಮಾಡುತ್ತೇನೆ ಎಂದು ಹೇಳಿಕೆ ನೀಡಿರುವುದನ್ನು ಖಂಡಿಸಿ ಪಟ್ಟಣದಲ್ಲಿ ಹಳೆ ಚಡ್ಡಿಗಳನ್ನು ಕೆಪಿಸಿಸಿ ಕಚೇರಿಗೆ ಕಳುಹಿಸುವ ಮೂಲಕ ಹಿಂದೂ ಪರ ಸಂಘಟನೆ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಆರ್.ಎಸ್.ಎಸ್. ಮುಖಂಡ ಮಂಜುನಾಥ ಮಾತನಾಡಿ, ಸಿದ್ದರಾಮಯ್ಯನವರು ಈ ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಹಾಗೂ ಹಿರಿಯ ನಾಯಕರಾಗಿದ್ದರೂ ಸಹ ತಮ್ನ ರಾಜಕೀಯ ಲಾಭಕ್ಕಾಗಿ ದೇಶಭಕ್ತ ಸಂಘಟನೆಯಾಗಿರುವ ಆರ್.ಎಸ್.ಎಸ್ ಟೀಕಿಸುವುದು ಖಂಡನೀಯ. ಅವರಿಗೆ ಸಂಘದ ಬಗ್ಗೆ ಏನೂ ಗೊತ್ತಿಲ್ಲ, ಮುಂದಿನ ತಿಂಗಳು ಬೆಂಗಳೂರಿನ ರಾಮೂಹಳ್ಳಿ ಸಮೀಪ ಆರ್.ಎಸ್.ಎಸ್.ನ ಕ್ಯಾಂಪ್ ನಡೆಯುತ್ತದೆ ಅಲ್ಲಿ ಹೋಗಿ ಅವರು ಕ್ಯಾಂಪಿಗೆ ಸೇರಿಕೊಂಡು ಸಂಘದ ಬಗ್ಗೆ ಮಾಹಿತಿ ಪಡೆಯುವ ಜೊತೆಗೆ ಸಂಘದ ತತ್ವ ಸಿದ್ದಾಂತವನ್ನು ತಿಳಿದುಕೊಳ್ಳಲಿ. ಅದನ್ನು ಬಿಟ್ಟು ಸಂಘದ ತತ್ವ ಸಿದ್ದಾಂತಗಳನ್ನೇ ತಿಳಿಯದೆ ವಿನಾಕಾರಣ ಸಂಘದವನ್ನು ಟೀಕಿಸುವುದು ಸರಿಯಲ್ಲ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯವನರು ಚಡ್ಡಿ ವಿಷಯಕ್ಕೆ ದೊಡ್ಡ ಬೆಲೆ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಲಕ್ಷಾಂತರ ಚಡ್ಡಿ ಸುಡುವ ಕೆಲಸ ಮಾಡಲಿ:

ಒಂದು ವೇಳೆ ಸಿದ್ದರಾಮಯ್ಯ ಅವರು ಚಡ್ಡಿಗಳನ್ನು ಸುಡುವುದಾದರೆ ನಾವುಗಳೆ ಅವರು ಇರುವ ಸ್ಥಳಕ್ಕೆ ಲಕ್ಷಾಂತರ ಚಡ್ಡಿಗಳನ್ನು ಕಳುಹಿಸುತ್ತೇವೆ. ಅವರು ಅವುಗಳನ್ನು ಸುಟ್ಟುಕೊಂಡೆ ಕಾಲ ಕಳೆಯಲಿ ಎಂದು ಮಂಜುನಾಥ ಟೀಕಿಸಿದರು.

Pro-Hindu leaders Send Old Chaddis to Siddaramaiah

ಕಾಂಗ್ರೆಸ್ ಯುವ ಅಧ್ಯಕ್ಷ ನಲಪಾಡ್ ಪ್ರತಿ ಜಿಲ್ಲೆಗೂ ಬಂದು ಚಡ್ಡಿ ಸುಡುತ್ತೇನೆ ಎಂದು ಹೇಳಿದ್ದಾರೆ. ಅವರಿಗೆ ಯಾವುದೆ ಕಷ್ಟ ಅಗಬಾರದು ಅಂತಾ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಲಕ್ಷಾಂತರ ಚಡಿಗಳನ್ನು ಕೆಪಿಸಿಸಿ ಕಚೇರಿಗೆ ನಾವೇ ಕಳುಹಿಸುತ್ತೇವೆ. ಮುಂದಿನ ದಿನಗಳಲ್ಲಿ ದೇಶದ ಮೂಲೆ ಮೂಲೆಗಳಿಂದ ಚಡ್ಡಿಗಳು ಕೆಪಿಸಿಸಿ ಕಚೇರಿಗೆ ಬರುತ್ತವೆ. ಆಗ ನಲಪಾಡ್ ಮತ್ತು ಕಾಂಗ್ರೆಸ್ ಮುಖಂಡರು ಎಲ್ಲಾ ಜಿಲ್ಲೆಗಳ ಚಡ್ಡಿಗಳ ಸುಡುವೆ ಕೆಲಸವನ್ನು ಮಾಡಲಿ ಎಂದರು.

ಯಾವುದೇ ರಾಜಕೀಯ ನಾಯಕರು ತಮ್ಮ ರಾಜಕೀಯ ಲಾಭಕ್ಕಾಗಿ ಮತ್ತೊಂದು ರಾಜಕೀಯ ಪಕ್ಷಗಳ ಬಗ್ಗೆ ಮಾತನಾಡಲಿ. ಅದನ್ನು ಬಿಟ್ಟು ಸದಾಕಾಲ ದೇಶದ ಹಿತಕ್ಕಾಗಿ ಶ್ರಮಿಸುತ್ತಿರುವ ಸಂಘದ ವಿರುದ್ಧ ಮಾತನಾಡಬಾರದು ಎಂದು ಆರ್ ಎಸ್ ಎಸ್ ಮುಖಂಡ ಮಂಜುನಾಥ ಒತ್ತಾಯಿಸಿದರು.

ಈ ಸಮಯದಲ್ಲಿ ಬಸವರಾಜ್‌ ಸ್ವಾಮಿಗಳು, ಹಿಂದೂ ಸಂಘಟನೆಯ ಹಿರಿಯ ಮುಖಂಡ ಕುಕ್ಕಿಲಿ ಮಂಜುನಾಥ್, ಮುರುಗೇಶ್, ಲೋಕೇಶ್, ತೆರ್ನೆನಹಳ್ಳಿ ಪ್ರದೀಪ್, ಅರುಣ್‌ಕುಮಾರ್ ಮತ್ತಿತ್ತರರು ಹಾಜರಿದ್ದರು.

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+