ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಆರ್‍ಎಸ್ ಖಾಲಿ ಖಾಲಿ: ಎಲ್ಲಿಂದ ನೀರು ಬಿಡೋಣ ಹೇಳಿ?

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಸೆಪ್ಟೆಂಬರ್ 21: ಈ ವೇಳೆಗೆಲ್ಲ ಕೃಷ್ಣರಾಜಸಾಗರ ಜಲಾಶಯ ಭರ್ತಿಗೊಂಡು ನಳನಳಿಸಬೇಕಿತ್ತು. ಹೆಚ್ಚುವರಿ ನೀರು ಅದರ ಪಾಡಿಗೆ ಹರಿದು ಹೋಗಬೇಕಿತ್ತು. ರೈತರ, ಜನ ಸಾಮಾನ್ಯರ ಮುಖದಲ್ಲಿ ಸಂತಸ ನೆಲೆಯೂರಬೇಕಿತ್ತು. ಆದರೆ ಕಳೆದೆರಡು ವರ್ಷಗಳಿಂದ ಅದು ಮರೀಚಿಕೆಯಾಗಿದೆ.

ಕಳೆದ ವರ್ಷ ವಾಡಿಕೆಯ ಮಳೆಯಾಗದೆ ಕೆಆರ್‍ಎಸ್ ಜಲಾಶಯ ಭರ್ತಿಯಾಗಲೇ ಇಲ್ಲ. ಈ ಬಾರಿ ಉತ್ತಮ ಮಳೆಯಾಗಿ ಜಲಾಶಯ ಭರ್ತಿಯಾಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಅದಕ್ಕಿಂತ ಹೆಚ್ಚಾಗಿ ಆತಂಕ ಪಡುವಂತೆ ಮಾಡಿದ್ದು ಕೊಡಗಿನ ಮಳೆ ಪ್ರಮಾಣ. ಅಲ್ಲಿ ಜನವರಿಯಿಂದ ಮೇ ತಿಂಗಳ ತನಕ ಬಹಳಷ್ಟು ಮಳೆ ಸುರಿಯಬೇಕಿತ್ತು. ಆದರೆ ಒಂದೇ ಒಂದು ಮಳೆ ಸುರಿಯಲಿಲ್ಲ. ಇದುವರೆಗೆ ಕಾಣದಂತಹ ಅಚ್ಚರಿ ಅಲ್ಲಿ ಸೃಷ್ಟಿಯಾಗಿತ್ತು.[ಮತ್ತೊಂದು ಬರಗಾಲದ ಹೊಡೆತಕ್ಕೆ ಸಜ್ಜಾಗಬೇಕಿದೆ ಕರ್ನಾಟಕ!]

krs

ಫೆಬ್ರವರಿ, ಮಾರ್ಚ್ ನಲ್ಲಿ ಮಳೆಯಾಗಲೇ ಇಲ್ಲ. ಕಾಫಿ ಹೂ ಅರಳದೆ ನೆಲ ಕಚ್ಚಿತು. ಕುಡಿಯುವ ನೀರಿಗೆ ಹಾಹಾಕಾರ ಆರಂಭವಾಯಿತು. ಮೇ ವೇಳೆಗೆ ಸ್ವಲ್ಪ ಮಳೆ ಸುರಿದ ಕಾರಣ ಬದುಕಿಕೊಂಡರು. ಆದರೆ ಮುಂಗಾರು ಮತ್ತೆ ಕೈಕೊಟ್ಟಿದೆ. ಪರಿಣಾಮ ಕಾವೇರಿ ಕಣಿವೆಯಲ್ಲಿ ನೀರಿಗಾಗಿ ಬೀದಿಗಿಳಿದು ಹೋರಾಡುವ ಪರಿಸ್ಥಿತಿ ಬಂದೊದಗಿದೆ.

ನೀರು ತಳಮಟ್ಟ

ನೀರು ತಳಮಟ್ಟ

20 ದಿನಗಳಿಂದ ಕೆಆರ್‍ಎಸ್ ನಿಂದ ನೀರು ಹರಿದು ತಮಿಳುನಾಡು ಸೇರಿದೆ. ಪರಿಣಾಮ ನೀರು ತಳಮಟ್ಟ ಸೇರಿದೆ. ಇದೇನಾ ಕೆಆರ್‍ಎಸ್ ಜಲಾಶಯ ಎಂಬ ಅಚ್ಚರಿ ಮೂಡಿದೆ. ಇಂತಹ ದೃಶ್ಯವನ್ನು ಬೇಸಿಗೆಯ ಕೊನೆಯ ದಿನಗಳಲ್ಲಿ ನೋಡಿದ್ದ ಜನ. ಇದೀಗ ಮಳೆಗಾಲದ ಕೊನೆಯ ದಿನದಲ್ಲೇ ನೋಡುವಂತಾಗಿದೆ.

ಬಿರು ಬೇಸಿಗೆಯ ನೆನಪು

ಬಿರು ಬೇಸಿಗೆಯ ನೆನಪು

ತಮಿಳುನಾಡಿಗೆ ನೀರು ಹರಿಸುವ ಸಲುವಾಗಿ ಕಾವೇರಿ ಕಣಿವೆಗಳ ಕಬಿನಿ, ಹಾರಂಗಿ, ಹೇಮಾವತಿ ಜಲಾಶಯಗಳಿಂದ ಕೆಆರ್‍ಎಸ್ ಗೆ ಹರಿಸಿದ ಪರಿಣಾಮ ಅಲ್ಲಿನ ಜಲಾಶಯಗಳು ಖಾಲಿಯಾಗಿವೆ. ಇತ್ತ ಕೆಆರ್‍ಎಸ್ ಜಲಾಶಯ ಕೂಡ ಖಾಲಿಯಾಗಿದೆ. ನೀರು ಹೀಗೆ ಹರಿದು ಹೋದರೆ ಮಳೆಗಾಲ ಕಳೆಯುವ ಮೊದಲೇ ಡೆಡ್ ಸ್ಟೋರೇಜ್ (74 ಅಡಿ) ತಲುಪುವ ಎಲ್ಲ ಸಾಧ್ಯತೆಗಳಿವೆ.

ಬದುಕು ಮೂರಾಬಟ್ಟೆ

ಬದುಕು ಮೂರಾಬಟ್ಟೆ

ಕೆಆರ್‍ಎಸ್ ನ ನೀರನ್ನೇ ನಂಬಿರುವ ಅನ್ನದಾತರ ಬದುಕು ಮೂರಾಬಟ್ಟೆಯಾಗಿದೆ. ಕೃಷಿ ಹೊರತುಪಡಿಸಿ ಬೇರೆ ಕಾಯಕವೇ ಮಾಡಲಾಗದ ಸ್ಥಿತಿಯಲ್ಲಿರುವ ರೈತರು ಮುಂದೇನು ಎಂಬ ಚಿಂತೆಯಲ್ಲಿದ್ದಾರೆ. ಅಷ್ಟೇ ಅಲ್ಲದೆ, ಕುಡಿಯಲು ಇದೇ ನೀರನ್ನು ನಂಬಿ ಬೆಂಗಳೂರು, ಮೈಸೂರು ಜನರೂ ಇದ್ದಾರೆ. ಮುಂದೆ ಏನಾಗಬಹುದು? ಕಾಲವೇ ಹೇಳಬೇಕಿದೆ.

ಸರಕಾರ ಹಿಂದೇಟು

ಸರಕಾರ ಹಿಂದೇಟು

ಸರಕಾರ ದಿಟ್ಟ ನಿಲುವು ತಳೆಯಲು ಹಿಂದೇಟು ಹಾಕುತ್ತಿದ್ದರೆ, ರಾಜ್ಯದ ಪ್ರತಿಪಕ್ಷ ಸ್ಥಾನದಲ್ಲಿರುವುದು ಕೇಂದ್ರದಲ್ಲಿ ಬಿಜೆಪಿ ಪಕ್ಷದ ಸಂಸದರು, ಕೇಂದ್ರ ಸಚಿವರು ರಾಜ್ಯದ ಪರ ನಿಂತು ಹೋರಾಡುವ ಮಾತುಗಳನ್ನು ಆಡದೆ ರಾಜಕೀಯ ಲಾಭ ಪಡೆಯುವ ಹುನ್ನಾರದಲ್ಲಿದಲ್ಲಿದ್ದಾರೆ.

ಬರಿದಾಯಿತು ಜಲಾಶಯ

ಬರಿದಾಯಿತು ಜಲಾಶಯ

ಕೆಆರ್‍ಎಸ್ ಬರಿದಾಗಿದೆ. 124.80 ಅಡಿ ಸಾಮರ್ಥ್ಯದ ಜಲಾಶಯದಲ್ಲಿ (ಮಂಗಳವಾರ) ಕೇವಲ 84.10 ಅಡಿಯಷ್ಟು ಮಾತ್ರ ನೀರಿದೆ. ಬೇರೆ ಜಲಾಶಯಗಳಿಂದ ನೀರು ಬಿಟ್ಟ ಪರಿಣಾಮ ಸುಮಾರು 6074 ಕ್ಯೂಸೆಕ್ ನೀರು ಒಳಕ್ಕೆ ಹರಿದು ಬರುತ್ತಿದೆ ಅದರಲ್ಲಿ 2192 ಕ್ಯೂಸೆಕ್ ನೀರು ಹೊರಕ್ಕೆ ಹರಿದು ಹೋಗುತ್ತಿದೆ.

English summary
It is the picture of KRS at the end of rainy season. Actually it looks like pictures of Summer. After releasing water to Tamilnadu, other major reservoirs also empty.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X