ಮೇಲುಕೋಟೆ ಅರ್ಚಕರ ಮೊಬೈಲ್ ನಲ್ಲಿ ಪೋಲಿ ವಿಡಿಯೋ

Posted By:
Subscribe to Oneindia Kannada

ಮಂಡ್ಯ, ಡಿಸೆಂಬರ್ 19: ಮೇಲುಕೋಟೆ ಯೋಗಾನರಸಿಂಹಸ್ವಾಮಿ ದೇವಾಲಯದ ಅರ್ಚಕರ ಜಗಳ ಮತ್ತೊಂದು ಹಂತ ತಲುಪಿದೆ. ಪುರೋಹಿತರ ಪೈಕಿ ಒಬ್ಬರು ಮತ್ತೊಬ್ಬರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಸ್ಮಾರ್ಟ್ ಫೋನ್ ನಲ್ಲಿ ಆಕ್ಷೇಪಾರ್ಹವಾದ ವಿಡಿಯೋ ಡೌನ್ ಲೋಡ್ ಮಾಡಿದ್ದಾರೆ ಎಂಬುದು ಅವರ ಆರೋಪ.

ಡಿಸೆಂಬರ್ ಹನ್ನೆರಡರಂದೇ ನಾರಾಯಣ್ ಭಟ್ಟರ್ ಪೊಲೀಸರಿಗೆ ದೂರು ನೀಡಿದ್ದಾರೆ. ಭಾಷ್ಯಂ ಸ್ವಾಮೀಜಿ ಹಲ್ಲೆ ನಡೆಸಿ, ಕಳವು ಮಾಡಿದ್ದಾರೆ ಎಂದು ದೂರಿದ್ದರು. ಅನಂತರ ಮೊಬೈಲ್ ಫೋನ್ ಅನ್ನು ಪೊಲೀಸರಿಗೆ ನೀಡಿರುವ ಭಾಷ್ಯಂ ಸ್ವಾಮೀಜಿ. ಅದರಲ್ಲಿ ಆಕ್ಷೇಪಾರ್ಹ ವಿಡಿಯೋ ಇದೆ. ಅದು ಭಟ್ಟರ್ ಗೆ ಸೇರಿದ್ ಫೋನ್ ಎಂದು ಆರೋಪಿಸಿದ್ದಾರೆ.

ಲಾಡ್ಜ್ ನಲ್ಲಿ ಮಹಿಳೆ ಜತೆ ಕಲ್ಮಠ ಕೊಟ್ಟುರೇಶ್ವರ ಸ್ವಾಮಿ, ವಿಡಿಯೋ ವೈರಲ್

ಆ ಮೊಬೈಲ್ ಫೋನ್ ನಲ್ಲಿ ಪೊಲೀಸರಿಗೆ ವಿಡಿಯೋ ಪತ್ತೆಯಾಗಿದೆ. ಮುಂದಿನ ಕ್ರಮವನ್ನು ಸಂಬಂಧಪಟ್ಟ ಇಲಾಖೆ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

Objectionable video found in Melukote temple priest

"ನಾವು ಭಾಷ್ಯಂ ಸ್ವಾಮೀಜಿ ಮತ್ತಿತರರ ವಿರುದ್ಧ ನಾರಾಯಣ ಭಟ್ಟರ್ ದೂರಿನ ಅನ್ವಯ ಎಫ್ ಐಆರ್ ದಾಖಲಿಸಿದ್ದೇವೆ. ಭಟ್ಟರ್ ಫೋನ್ ಅನ್ನು ಹಿಂತಿರುಗಿಸಿದ್ದೇವೆ. ಭಟ್ಟರ್ ಫೋನ್ ನಲ್ಲಿ ಆಕ್ಷೇಪಾರ್ಹ ವಿಡಿಯೋ ಇದ್ದ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದಿದ್ದೇವೆ. ಮುಂದಿನ ನಿರ್ಧಾರ ಅವರು ಕೈಗೊಳ್ಳುತ್ತಾರೆ" ಎಂದು ಮಂಡ್ಯ ಎಸ್ ಪಿ ಜಿ.ರಾಧಿಕಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪೂಜೆ ಮಾಡಲು ನಾರಾಯಣ ಭಟ್ಟರ್ ಬಿಡಲಿಲ್ಲ ಎಂದು ಭಾಷ್ಯಂ ಸ್ವಾಮೀಜಿ ಆರೋಪಿಸಿದ ನಂತರ ಕಳೆದ ವಾರ ಈ ಪ್ರಕರಣ ಬೆಳಕಿಗೆ ಬಂದಿತ್ತು. ಈ ವಾದ-ವಿವಾದಕ್ಕೆ ಹಲವಾರು ಭಕ್ತರು ಸಾಕ್ಷಿಯಾಗಿದ್ದಾರೆ. ಆ ನಂತರ ನಾರಾಯಣ ಭಟ್ಟರ್ ಮೇಲೆ ದೈಹಿಕ ಹಲ್ಲೆ ನಡೆಯಿತು ಎಂದು ಆರೋಪಿಸಿದ್ದಾರೆ.

ಬೆಳಗಾವಿ: ಸ್ಕೇಟಿಂಗ್ ಕ್ಲಬಿನಲ್ಲಿ ಕಾಮದಾಟ, ಚಿತ್ರಗಳು ವೈರಲ್

"ಜೋರು ಜಗಳ ನಡೆಯುವ ವೇಳೆ ನಾರಾಯಣ ಭಟ್ಟರ್ ಮೊಬೈಲ್ ಫೋನ್ ಕೆಳಗೆ ಬಿತ್ತು. ಆ ನಂತರ ಆಕ್ಷೇಪಾರ್ಹ ವಿಡಿಯೋ ಮತ್ತು ಅಪ್ಲಿಕೇಷನ್ ಇರುವುದು ಪತ್ತೆಯಾಯಿತು. ಅಲ್ಲಿಗೆ ಬಂದಿದ್ದವರಿಗೆ ಇದರಿಂದ ಆಘಾತವಾಯಿತು" ಎಂದು ಭಾಷ್ಯಂ ಸ್ವಾಮೀಜಿ ಹೇಳಿದ್ದಾರೆ.

ಸರಕಾರದ ಆದೇಶದ ಅನ್ವಯ ನಾನು ಮೇಲುಕೋಟೆ ದೇವಸ್ಥಾನಕ್ಕೆ ಹೋದೆ. ನಾರಾಯಣ ಭಟ್ಟರೆ ನನಗೆ ಪೂಜೆಗೆ ಅವಕಾಶ ಕೊಡಲಿಲ್ಲ. ಒಂದು ಗಂಟೆಗೂ ಹೆಚ್ಚು ಕಾಲ ವಾದ ಮಾಡಿದರು. ನನ್ನ ಹಾಗೂ ನನ್ನ ಸೋದರರ ವಿರುದ್ಧ ಅವರು ಮಾಡಿದ ಆರೋಪ ಸುಳ್ಳು ಎಂದು ಕೂಡ ಅವರು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka's famous pilgrimage Melukote in news for the wrong reason. Objectionable video found in temple priest Narayana Bhattar mobile phone. Police recommended for action against him to concerned department officials.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ