ಮಂಡ್ಯದಲ್ಲಿ ಎರಡು ನಮ್ಮ ಅಪ್ಪಾಜಿ ಕ್ಯಾಂಟೀನ್ ಆರಂಭ

Posted By: Gururaj
Subscribe to Oneindia Kannada
   ಜೆಡಿಎಸ್ ಎಂ ಎಲ್ ಸಿ, ಟಿ ಎ ಶರವಣ ಅಪ್ಪಾಜಿ ಕ್ಯಾಂಟೀನ್ ಬಗ್ಗೆ ಹೇಳೋದು ಹೀಗೆ | Oneindia Kannada

   ಮಂಡ್ಯ, ಡಿಸೆಂಬರ್ 04 : ಮಂಡ್ಯದಲ್ಲಿ ಕ್ಯಾಂಟೀನ್ ರಾಜಕಾರಣ ಜೋರಾಗಿದೆ. ನಗರದಲ್ಲಿ ಎರಡು 'ನಮ್ಮ ಅಪ್ಪಾಜಿ ಕ್ಯಾಂಟೀನ್‌'ಗಳು ಆರಂಭವಾಗಿವೆ. ಭಾನುವಾರ ಕು.ರಮ್ಯಾ ಕ್ಯಾಂಟೀನ್ ಆರಂಭವಾಗಿತ್ತು.

   ಮಂಡ್ಯ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಡಾ.ಕೃಷ್ಣ, ಮಾಜಿ ಶಾಸಕ ಎಂ.ಶ್ರೀನಿವಾಸ್ ಅವರು ನಮ್ಮ ಅಪ್ಪಾಜಿ ಕ್ಯಾಂಟೀನ್‌ಗಳಿಗೆ ಚಾಲನೆ ನೀಡಿದ್ದಾರೆ. ಈ ಮೂಲಕ ನಮ್ಮ ಅಪ್ಪಾಜಿ ಕ್ಯಾಂಟೀನ್ ಬೆಂಗಳೂರು ನಗರದ ಬಳಿಕ ಮಂಡ್ಯದಲ್ಲಿ ಪ್ರಾರಂಭಗೊಂಡಿದೆ.

   ಟಿ.ಎ.ಶರವಣ ಸಂದರ್ಶನ

   Now Namma Appaji canteen in Mandya

   ಮಹಾವೀರ ವೃತ್ತದಲ್ಲಿ ಮಂಡ್ಯ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾದ ಡಾ.ಕೃಷ್ಣ ಅವರು, ಹೊಸಹಳ್ಳಿ ವೃತ್ತದ ಬಳಿ ಎಂ.ಶ್ರೀನಿವಾಸ್ ಅವರು ನಮ್ಮ ಅಪ್ಪಾಜಿ ಕ್ಯಾಂಟೀನ್ ಆರಂಭಿಸಿದ್ದಾರೆ.

   ಅಪ್ಪಾಜಿ ಕ್ಯಾಂಟೀನಿನಲ್ಲಿ ಶರವಣಜಿ, ಮಾಂಡ್ರೆ ಮ್ಯಾಮ್

   ಕು.ರಮ್ಯಾ ಕ್ಯಾಂಟೀನ್ : ಮಂಡ್ಯದ ಮಾಜಿ ಸಂಸದೆ, ಎಐಸಿಸಿ ಸಾಮಾಜಿಕ ಜಾಲ ತಾಣಗಳ ಮುಖ್ಯಸ್ಥೆ ರಮ್ಯಾ ಅವರ ಹೆಸರಿನಲ್ಲಿ ಕು.ರಮ್ಯಾ ಕ್ಯಾಂಟೀನ್ ಮಂಡ್ಯದ ಅಶೋಕ ನಗರದ ತ್ರಿವೇಣಿ ರಸ್ತೆಯಲ್ಲಿ ಭಾನುವಾರ ಆರಂಭವಾಗಿದೆ. ರಘು ಎನ್ನುವವರು ಈ ಕ್ಯಾಂಟೀನ್ ಆರಂಭಿಸಿದ್ದು ಊಟ ಮತ್ತು ಉಪ ಹಾರಕ್ಕೆ 10 ರೂ. ದರವಿದೆ.

   100 ದಿನ : ಜೆಡಿಎಸ್ ನಾಯಕ, ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಅವರು ಬೆಂಗಳೂರಿನಲ್ಲಿ ನಮ್ಮ ಅಪ್ಪಾಜಿ ಕ್ಯಾಂಟೀನ್‌ಅನ್ನು ಮೊದಲು ಆರಂಭಿಸಿದ್ದರು. ಈ ಕ್ಯಾಂಟೀನ್ 100 ದಿನಗಳನ್ನು ಪೂರೈಸಿದ್ದು, ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

   ಒನ್ ಇಂಡಿಯಾ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಟಿ.ಎ.ಶರವಣ ಅವರು ಮಂಡ್ಯದಲ್ಲಿ ಕ್ಯಾಂಟೀನ್ ಆರಂಭವಾಗಲಿದೆ ಎಂದು ಹೇಳಿದ್ದರು. ನಮ್ಮ ಅಪ್ಪಾಜಿ ಕ್ಯಾಂಟೀನ್‌ನಲ್ಲಿ 5ರೂ.ಗೆ ಉಪಹಾರ, 10 ರೂ.ಗೆ ಊಟ ನೀಡಲಾಗುತ್ತಿದೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Janata Dal (Secular) Namma Appaji canteen now opened in Mandya. JDS leader and legislative council member T.A.Sharavana begines first canteen in Basavanagudi, Bengaluru.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ