ಮಂಡ್ಯದಲ್ಲಿ ಹೆಣ್ಣು ಸಿಕ್ಕರೆ ಮದುವೆಯಾಗಲು ರೆಡಿ ಎಂದ ನಿಖಿಲ್
Recommended Video

ಮಂಡ್ಯ, ಮಾರ್ಚ್ 22:ನಾನು ಮದುವೆಯಾಗುವ ಹೆಣ್ಣು ಮಂಡ್ಯದಲ್ಲಿ ಸಿಕ್ಕರೆ, ಇಲ್ಲಿನ ಹುಡುಗಿಯನ್ನೇ ಮದುವೆಯಾಗುತ್ತೇನೆ ಎಂದು ಮಂಡ್ಯ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರ ಸ್ವಾಮಿ ತಿಳಿಸಿದ್ದಾರೆ.
ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಖಿಲ್ ಅವರು ಮಂಡ್ಯ ಅಳಿಯ ಆಗಲಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಯಾವ ಅರ್ಥದಲ್ಲಿ ಹೇಳಿದರು ಗೊತ್ತಿಲ್ಲ. ಅವರನ್ನೇ ಕೇಳುತ್ತೇನೆ. ನಮ್ಮ ತಂದೆ-ತಾಯಿ ಮದುವೆ ಮಾಡಬೇಕು ಎಂದು ಹೆಣ್ಣು ಹುಡುಕುತ್ತಿದ್ದಾರೆ. ನಮ್ಮ ಮಂಡ್ಯ ಜಿಲ್ಲೆಯಲ್ಲಿ ಹೆಣ್ಣು ಸಿಕ್ಕಿದರೂ ಮದುವೆ ಆಗುತ್ತೇನೆ ಎಂದರು.
ನಾನು ಮತ್ತು ಅಭೀಷೇಕ್ ಅವರು ಯಾವಾಗಲೂ ಸಹೋದರರಂತೆ ಇರುತ್ತೇವೆ. ರಾಜಕೀಯದಿಂದ ಸಂಬಂಧ ಹಾಳಾಗುವುದಿಲ್ಲ. ಪಕ್ಷದ ನಾಯಕರು ಕೇವಲ ಅಭಿವೃದ್ಧಿ ವಿಚಾರವಾಗಿ ಮಾತನಾಡಬೇಕು. ವೈಯಕ್ತಿಕವಾಗಿ ಟೀಕೆ ಮಾಡಬಾರದು ಎಂದು ಮನವಿ ಮಾಡಿದರು.

ಇದೇ ಮಾ.25 ರಂದು ನಾಮಪತ್ರ ಸಲ್ಲಿಸುತ್ತಿದ್ದೇನೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಎಲ್ಲಾ ಕಾರ್ಯಕರ್ತರು ಬಂದು ನನಗೆ ಆಶೀರ್ವದಿಸಿ, ಬೆಂಬಲಿಸಬೇಕು. ಮಂಡ್ಯ ಜಿಲ್ಲೆಯ ಜನರು ಕೂಡ ಸಪೋರ್ಟ್ ಮಾಡಬೇಕು. ಯಾರೂ ಯಾರ ಬಗ್ಗೆಯೂ ವೈಯಕ್ತಿಕವಾಗಿ ಮಾತನಾಡಬೇಡಿ. ಇದು ಒಳ್ಳೆಯದಲ್ಲ. ಜನರ ತೀರ್ಪು ಅಂತಿಮವಾಗಿದೆ ಎಂದು ನಿಖಿಲ್ ತಿಳಿಸಿದರು.












Click it and Unblock the Notifications