• search
 • Live TV
ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಾಂಡವಪುರ ಸಕ್ಕರೆ ಕಾರ್ಖಾನೆ ಗುತ್ತಿಗೆ ಪಾರದರ್ಶಕ: ನಿರಾಣಿ

|
Google Oneindia Kannada News

ಮಂಡ್ಯ ಜೂನ್‌ 8: ಮಂಡ್ಯ ಜಿಲ್ಲೆಯ ಪ್ರತಿಷ್ಠಿತ ಮೈಶುಗರ್ ಸಕ್ಕರೆ ಕಾರ್ಖಾನೆಯನ್ನು ಬಿಜೆಪಿ ಶಾಸಕ, ಮಾಜಿ ಸಚಿವ ಮುರುಗೇಶ್ ನಿರಾಣಿ ಒಡೆತನದ ಕಂಪನಿಗೆ ಮಾರಾಟ ಮಾಡುವುದಕ್ಕೆ ಸರ್ಕಾರ ಮುಂದಾಗಿದೆ.

   Chiranjeevi Sarja : ಕನಕಪುರ ಬಳಿಯ ಬೃಂದಾವನ ಫಾರ್ಮ್ ಹೌಸ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ |

   ಮಂಡ್ಯ ಜಿಲ್ಲೆಯ ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ಕಾನೂನು ಬದ್ದವಾಗಿ ಹಾಗೂ ಪಾರದರ್ಶಕವಾಗಿ ನಡೆದ ಈ-ಟೆಂಡರ್‌ ನಲ್ಲಿ ಅತಿ ಹೆಚ್ಚು ಬಿಡ್‌ ಮಾಡುವ ಮೂಲಕ ನಿರಾಣಿ ಗ್ರೂಫ್‌ ಪಡೆದುಕೊಂಡಿದೆ.

   ಈಗಿರುವ 3500 ಟಿ.ಸಿ.ಡಿ ಇಂದ 5000 ಟಿ.ಸಿ.ಡಿ ಗೆ ವಿಸ್ತರಣೆ ಮಾಡುವುದು ಮತ್ತು 20 ಮೆಗಾವ್ಯಾಟ್‌ ವಿದ್ಯುತ್‌ ಘಟಕ ಪ್ರಾರಂಭಿಸುವುದು, ಹಾಗೆಯೇ, ದಿನ ನಿತ್ಯ 60 ಸಾವಿರ ಲೀಟರ್‌ ಇಥೆನಾಲ್ ಉತ್ಫಾದಿಸುವ ಡಿಸ್ಟಿಲರಿಯನ್ನು ಪ್ರಾರಂಭಿಸುವ ಷರತ್ತಿಗೆ ಒಳಪಟ್ಟು ಕಾರ್ಖಾನೆಯನ್ನು 40 ವರ್ಷಗಳ ಅವಧಿಗೆ ನಿರಾಣಿ ಗ್ರೂಪ್‌ ಗೆ ಗುತ್ತಿಗೆಯನ್ನು ನೀಡಲಾಗಿದೆ.

   ಬಿಜೆಪಿ ಬಂಡಾಯ ಶಮನಕ್ಕೆ ಪಾಂಡವಪುರ ಸಕ್ಕರೆ ಕಾರ್ಖಾನೆ ಕೊಡುಗೆ!ಬಿಜೆಪಿ ಬಂಡಾಯ ಶಮನಕ್ಕೆ ಪಾಂಡವಪುರ ಸಕ್ಕರೆ ಕಾರ್ಖಾನೆ ಕೊಡುಗೆ!

   ನಿರಾಣಿ ಗ್ರೂಪ್‌ ನ ಸಕ್ಕರೆ ಕಾರ್ಖಾನೆ ದೇಶದಲ್ಲಿಯೇ ಅತಿ ಹೆಚ್ಚು ಕಬ್ಬು ನುರಿಯುವಂತಹ ಮೂರು ಕಾರ್ಖಾನೆಗಳಲ್ಲಿ ಒಂದಾಗಿದೆ. ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಕಬ್ಬು ನುರಿಸುವ ಹಾಗೂ ಭಾರತದಲ್ಲೇ ಅತಿ ಹೆಚ್ಚು ಇಥೇನಾಲ್‌ ತಯಾರಿಸುವ ಘಟಕ ಇದಾಗಿದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಿರಾಣಿ ಗ್ರೂಫ್‌ ಕೃಷಿ ಕುಟುಂಬದಿಂದ ಬಂದಿರುವ ಹಾಗೂ ರೈತರ ಜೊತೆ ಒಳ್ಳೆಯ ಸಂಪರ್ಕ, ಬ್ಯಾಂಕುಗಳ ಜೊತೆಗೆ ಯಾವುದೇ ಎನ್‌ಪಿಎ ಇಲ್ಲದೆ, ಸತತವಾಗಿ ಸಾಲ ಮರುಪಾವತಿ ಮಾಡಿರುವ ಕಂಪನಿಯಾಗಿದೆ.

   ಈ ಕ್ಷೇತ್ರದಲ್ಲಿ 40 ವರ್ಷದ ಅನುಭವವಿದೆ

   ಈ ಕ್ಷೇತ್ರದಲ್ಲಿ 40 ವರ್ಷದ ಅನುಭವವಿದೆ

   40 ವರ್ಷದಲ್ಲಿ 405 ಕೋಟಿ ರೂಪಾಯಿಗಳನ್ನು ಸರಕಾರಕ್ಕೆ ಕೊಡುವ ನಿಯಮಕ್ಕೆ ಒಳಪಟ್ಟು ಅತಿ ಹೆಚ್ಚು ಬಿಡ್‌ ಮಾಡಿರುವ ನಿರಾಣಿ ಗ್ರೂಪ್ ಗೆ ನ್ಯಾಯಬದ್ದವಾಗಿ ಗುತ್ತಿಗೆ ನೀಡಲಾಗಿದೆ. ಇಲ್ಲಿಯವರೆಗೆ 9 ಕೋ ಆಪರೇಟಿವ್‌ ಸಕ್ಕರೆ ಕಾರ್ಖಾನೆಗಳು, 30 ವರ್ಷದ ಲೀಸ್‌ ಗೆ ಕೊಟ್ಟಿರುವುದರಲ್ಲಿ ಅತಿ ಕಡಿಮೆ 40 ಕೋಟಿ ರೂಪಾಯಿಯಿಂದ 162 ಕೋಟಿ ರೂಪಾಯಿ ಅತಿ ಹೆಚ್ಚು ಬಿಡ್‌ ಗೆ ಕೊಟ್ಟಿರುವುದನ್ನು ಇಲ್ಲಿ ಸ್ಮರಿಸಬಹುದು. ಈ 9 ಸಹಕಾರಿ ಸಕ್ಕರೆ ಕಾರ್ಖಾನೆಗಳ ಬಿಡ್‌ ಅಮೌಂಟನ್ನು ನಿರಾಣಿ ಗ್ರೂಪ್‌ ನ ಬಿಡ್‌ ಗೆ ಹೋಲಿಸಿ ನೋಡಿದಾಗ ಅಂದಾಜು ಶೇಕಡಾ 250 ರಷ್ಟು ಹೆಚ್ಚಿನ ದರದಲ್ಲಿ ಬಿಡ್‌ ಮಾಡಲಾಗಿದೆ. ಇದು ಅತಿ ಹೆಚ್ಚಿನ ಬಿಡ್‌ ಎಂದು ನಮೂದಾಗಿದೆ.

   ರೈತರ ಜೊತೆಗೆ ಭಾವನಾತ್ಮಕವಾದ ಸಂಬಂಧ

   ರೈತರ ಜೊತೆಗೆ ಭಾವನಾತ್ಮಕವಾದ ಸಂಬಂಧ

   ಕಬ್ಬು ಖರೀದಿಸಿ ಹಣವನ್ನು ಮರುಪಾವತಿಸುವಲ್ಲದೆ ರೈತರ ಜೊತೆಗೆ ಭಾವನಾತ್ಮಕವಾದ ಸಂಬಂಧ ಹೊಂದಿದೆ. ನಿರಂತರವಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರಗಳು, ಕೃಷಿ ಉತ್ಸವಗಳು, ಗ್ರಾಮೀಣ ಕ್ರೀಡೆಗಳು, ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗ ಮೇಳ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ನಿರುದ್ಯೋಗಿ ಯುವಕ ಯುವತಿಯರಿಗೆ ತರಬೇತಿ ಕೊಟ್ಟು ಅವರ ಆರ್ಥಿಕ ಮಟ್ಟವನ್ನು ಹೆಚ್ಚಿಸುವಂತಹ ಸತತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ.

   ಅಲ್ಲದೆ, 1.25 ಲಕ್ಷ ಜನರಿಗೆ ವಿಮೆ ಮಾಡಿಸುವುದರ ಮುಖಾಂತರ ಆ ಭಾಗದ ಜನರ ಜೀವನದಲ್ಲಿ ಆಶಾಕಿರಣವಾಗಿದೆ. ಹಾಗೆಯೇ, ಸುಪರ್‌ ಮಾರ್ಕೇಟನ್ನು ಸ್ಥಾಪಿಸುವ ಮೂಲಕ ಖರೀದಿ ಬೆಲೆಯಲ್ಲಿಯೇ ಜೀವನಾವಶ್ಯಕ ವಸ್ತುಗಳನ್ನು ರೈತರಿಗೆ ಹಾಗೂ ಕಾರ್ಮಿಕರಿಗೆ ನೀಡುತ್ತಿದ್ದೇವೆ.

   ನಿರಾಣಿಗೆ ಮೈಶುಗರ್ ಮಾರಾಟಕ್ಕೆ ಡಿಕೆಶಿ, ಸಿದ್ದರಾಮಯ್ಯ ತೀವ್ರ ವಿರೋಧ ಯಾಕೆ?ನಿರಾಣಿಗೆ ಮೈಶುಗರ್ ಮಾರಾಟಕ್ಕೆ ಡಿಕೆಶಿ, ಸಿದ್ದರಾಮಯ್ಯ ತೀವ್ರ ವಿರೋಧ ಯಾಕೆ?

   ನಿರಾಣಿ ಗ್ರೂಪ್‌ ನಿಂದ ಸಕ್ಕರೆ ಉಪ ಉತ್ಪನ್ನಗಳ ಬಳಕೆ

   ನಿರಾಣಿ ಗ್ರೂಪ್‌ ನಿಂದ ಸಕ್ಕರೆ ಉಪ ಉತ್ಪನ್ನಗಳ ಬಳಕೆ

   ನಿರಾಣಿ ಗ್ರೂಪ್‌ ಕೇವಲ ಸಕ್ಕರೆ ಉತ್ಪಾದನೆ ಮಾಡುವುದಷ್ಟೇ ಅಲ್ಲದೆ, ವಿದ್ಯುತ್‌, ಇಥೆನಾಲ್‌, ಈಎನ್‌ಎ, ಆರ್‌ ಎಸ್‌ (ರೆಕ್ಟಿಫೈಡ್‌ ಸ್ಪರಿಟ್‌) ಸಿಓ2, ಸಿಎನ್‌ಜಿ, ಸ್ಯಾನಿಟೈಸರ್‌, ರಸಗೊಬ್ಬರ ಇತ್ಯಾದಿ ಉಪ ಉತ್ಪನ್ನಗಳನ್ನು ಉತ್ಪಾದಿಸುತ್ತದೆ. ಅಲ್ಲದೆ, ಸಿಮೆಂಟ್‌, ಶಿಕ್ಷಣ ಸಂಸ್ಥೆಗಳು, ಬ್ಯಾಂಕುಗಳು, ಹೋಟೇಲ್‌ ಉದ್ಯಮ, ಆಸ್ಪತ್ರೆ, ಇತ್ಯಾದಿಗಳನ್ನು ನಡೆಸುತ್ತಿರುವ ಮೂಲಕ ಸುಮಾರು 70 ಸಾವಿರ ಕುಟುಂಬಗಳಿಗೆ ಉದ್ಯೋಗ ನೀಡಿರುವ ಕೀರ್ತಿ ಈ ಸಂಸ್ಥೆಗೆ ಸಲ್ಲುತ್ತದೆ. ಉತ್ತರ ಕರ್ನಾಟಕ ಭಾಗದಲ್ಲಿ ಮಾಡಿರುವಂತೆ ಪಾಂಡವಪುರ ಸಕ್ಕರೆ ಕಾರ್ಖಾನೆಯಲ್ಲಿಯೂ ಇದೇ ರೀತಿಯ ರೈತರಿಗೆ ಅನುಕೂಲ ಆಗುವಂತಹ ಎಲ್ಲಾ ಯೋಜನೆಗಳನ್ನು ಅಳವಡಿಸುವ ಗುರಿಯನ್ನು ಹೊಂದಿದೆ. ಇದರಿಂದಾಗಿ ಈ ಭಾಗದ ರೈತ ಭಾಂಧವರಿಗೆ ಹೆಚ್ಚಿನ ಅನುಕೂಲತೆ ಮಾಡಿಕೊಡಲು ಸಾಧ್ಯವಿದೆ.

   ಸ್ಥಳೀಯವಾಗಿ ಹಾಗೂ ನಮ್ಮದೇ ಆದ ಬ್ಯಾಂಕನ್ನು ಸ್ಥಾಪಿಸುವ ಮೂಲಕ ಆ ಭಾಗದ ರೈತರಿಗೆ ಹೆಚ್ಚಿನ ಅನುಕೂಲತೆಗಳನ್ನು ಮಾಡಿಕೊಡುವುದು ನಮ್ಮ ಉದ್ದೇಶವಾಗಿದೆ, ಗುಣಮಟ್ಟದ ಕಬ್ಬಿನ ಬೀಜಗಳು, ಕಡಿಮೆ ದರದಲ್ಲಿ ರಸಗೊಬ್ಬರ, ಕ್ರಿಮಿನಾಶಕ, ರೈತರಿಗೆ ತರಬೇತಿ ಕ್ಯಾಂಫ್‌, ಕೊಡುವಂತಹ ಗುರಿಯನ್ನು ಹೊಂದಲಾಗಿದೆ.

   ಕೈಗಾರಿಕಾ ಸಚಿವರಾಗಿದ್ದ ಮುರುಗೇಶ್ ನಿರಾಣಿ

   ಕೈಗಾರಿಕಾ ಸಚಿವರಾಗಿದ್ದ ಮುರುಗೇಶ್ ನಿರಾಣಿ

   ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ತುಂಬಾ ಚೆನ್ನಾಗಿ ನಡೆಸಿ ಈ ಭಾಗದ ರೈತರಿಗೆ ಅನುಕೂಲ ಮಾಡಿಕೊಡಲು ನಾನು ಪ್ರಾಮಾಣಿಕತೆಯಿಂದ ಪ್ರಯತ್ನಿಸುವೆ. ಮಂಡ್ಯ ಜಿಲ್ಲೆಗೆ ಇರುವ ಸಕ್ಕರೆ ನಾಡು ಎಂಬ ಹೆಗ್ಗಳಿಕೆಯನ್ನು ಇನ್ನೂ ಹೆಚ್ಚು ಎತ್ತರಕ್ಕೆ ಹೆಚ್ಚಿಸುವ ಕನಸು ನನ್ನದಾಗಿದೆ. ಎಲ್ಲರೂ ಕೂಡಿ ಬೆಳೆಯಬೇಕು ಎಂಬುದು ನನ್ನ ನಂಬಿಕೆ ಆಗಿದೆ ಎಂದು ಮುರಗೇಶ್‌ ನಿರಾಣೀಯವರು ಸ್ಪಷ್ಟಪಡಿಸಿದರು. ಇದೇ ವೇಳೆ ಈ ಕಾರ್ಖಾನೆ ಹೆಚ್ಚಿನ ಅಭಿವೃದ್ದಿ ಹೊಂದಲು ಹಾಗೂ ಲಾಭ ಪಡೆಯುವಂತೆ ಮಾಡಲು ಅಲ್ಲಿನ ಸ್ಥಳೀಯ ರೈತ ಬಾಂಧವರ ಸಹಕಾರ ಅಗತ್ಯ ಎಂದು ತಿಳಿಸಿದರು.

   ಮೂಲತಃ ಕೃಷಿ ಕುಟಂಬದಿಂದ ಬಂದಿರುವ ಇಂಜಿನಿಯರಿಂಗ್ ಹಾಗೂ ಮ್ಯಾನೇಜ್‌ಮೆಂಟ್‌ ಪದವೀಧರ. ಹಾಲಿ ಬೀಳಗಿ ಕ್ಷೇತ್ರದ ಶಾಸಕರಾಗಿದ್ದಾರೆ. ಮೂರು ಬಾರಿ ಶಾಸಕರಾಗಿ 5 ವರ್ಷಗಳ ಕಾಲ ಕೈಗಾರಿಕಾ ಸಚಿವರಾಗಿ ಕರ್ತವ್ಯ ನಿಭಾಯಿಸಿದ್ದಾರೆ.

   English summary
   BJP MLA from Bilgi and former Minister Murugesh Nirani clarified that his company Bagalkot District-based Nirani Sugars has bagged the lease bid for taking control of the decades-old Pandavapura Sahakara Sakkare Kharkhane Niyamita (PSSKL) in a transparent and fair way.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X