• search
  • Live TV
ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಡ್ಯದಲ್ಲಿ ಹೆಚ್ಚುತ್ತಿರುವ ಹೆಣ್ಮಕ್ಕಳ ನಾಪತ್ತೆ ಪ್ರಕರಣ!

|

ಮಂಡ್ಯ, ಜೂನ್ 14: ಮಂಡ್ಯ ಜಿಲ್ಲೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ನಾಪತ್ತೆಯಾಗುತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲಿದ್ದು, ಇವರು ಯಾವ ಕಾರಣಕ್ಕಾಗಿ ನಾಪತ್ತೆಯಾಗುತ್ತಿದ್ದಾರೆ? ನಾಪತ್ತೆಯಾದವರು ಎಲ್ಲಿ ಹೋದರು? ಎಷ್ಟು ಮಂದಿ ಮರಳಿ ಬಂದಿದ್ದಾರೆ? ಪೊಲೀಸರು ಎಷ್ಟು ಮಂದಿಯನ್ನು ಹುಡುಕಿದ್ದಾರೆ? ಈ ಯಾವ ಪ್ರಶ್ನೆಗೂ ಉತ್ತರ ಸಿಗದಂತಾಗಿದೆ.

ಜಿಲ್ಲೆಯಲ್ಲಿ ಆಗಾಗ್ಗೆ ಹಲವು ಪೊಲೀಸ್ ಠಾಣೆಗಳಿಂದ ನಾಪತ್ತೆಯಾದವರ ಪ್ರಕಟಣೆಗಳು ಹೊರಬರುತ್ತಲೇ ಇದ್ದು, ಇವರಲ್ಲಿ ಯುವತಿಯರು ಮತ್ತು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮಹಿಳೆಯರು ನಾಪತ್ತೆಯಾಗಲು ಕಾರಣವೇನು? ಮಂಡ್ಯದಲ್ಲಿ ಮಾನವ ಸಾಗಣೆ ಜಾಲವೇನಾದರೂ ಕಾರ್ಯಾಚರಿಸುತ್ತಿದೆಯಾ? ಎಂಬ ಸಂಶಯವೂ ಕಾಡತೊಡಗಿದೆ.

ಶಾಪಿಂಗ್ ಮಾಡುವ ಭರದಲ್ಲಿ ಮಗನನ್ನೇ ಮರೆತು ಮನೆಗೆ ನಡೆದ ತಾಯಿ

ಕೆಲವು ವೇಶ್ಯಾವಾಟಿಕೆ ಪ್ರಕರಣಗಳು ಬೆಳಕಿಗೆ ಬಂದಾಗ ಅದರಲ್ಲಿ ಸಿಲುಕಿದ ಹೆಣ್ಣು ಮಕ್ಕಳ ರಕ್ಷಣೆ ಮಾಡಿದಾಗ ಅಂತಹ ಹೆಣ್ಣುಮಕ್ಕಳ ಪೈಕಿ ಕೆಲವರು ಮಂಡ್ಯದವರು ಇರುವುದು ಕೂಡ ಕಂಡು ಬಂದಿದೆ. ಯುವತಿಯರನ್ನು ಕೆಲಸ ಕೊಡಿಸುವ, ಪ್ರೀತಿಸಿ ಮದುವೆಯಾಗುವ ಹೀಗೆ ಹಲವು ಆಮಿಷಗಳನ್ನೊಡ್ಡಿ ಕರೆದುಕೊಂಡು ಬರಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಮಂಡ್ಯ ಜಿಲ್ಲೆಯಿಂದಲೇ ಹೆಚ್ಚಿನ ಹೆಣ್ಣು ಮಕ್ಕಳು ನಾಪತ್ತೆಯಾಗುತ್ತಿರುವುದು ಇದೀಗ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಬಹಳಷ್ಟು ಪ್ರಕರಣಗಳಲ್ಲಿ ಮಹಿಳೆಯರು ಕೂಡ ನಾಪತ್ತೆಯಾಗಿದ್ದಾರೆ. ಇವರು ಏನಾದರು ಎಂಬ ಮಾಹಿತಿಯೇ ಇಲ್ಲದಾಗಿದೆ. ಮಂಡ್ಯದಲ್ಲಿ ವಾಣಿಜ್ಯ ವ್ಯವಹಾರಗಳು ಹೆಚ್ಚಾಗಿ ನಡೆಯುತ್ತಿದ್ದು, ಹೊರಗಿನಿಂದ ಬಂದು ನೆಲೆಸುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಹೀಗಾಗಿ ಕೆಲವರು ಇಲ್ಲಿನ ಬಡ ಹೆಣ್ಣು ಮಕ್ಕಳನ್ನು ಟಾರ್ಗೆಟ್ ಮಾಡಿಕೊಂಡು ಅವರಿಗೆ ಹಣ, ಕೆಲಸದ ಆಮಿಷವೊಡ್ಡಿ ಕರೆದೊಯ್ಯುತ್ತಿದ್ದಾರಾ? ಎಂಬ ಸಂಶಯವೂ ಗಿರಕಿ ಹೊಡೆಯುತ್ತಿದೆ.

ತುಂಗಾ ನದಿ ದಡದಲ್ಲಿ ನಾಪತ್ತೆಯಾಗಿದ್ದ ಇಂಜಿನಿಯರ್ ಮುಂಬೈನಲ್ಲಿ ಪ್ರೇಯಸಿ ಜೊತೆ ಪ್ರತ್ಯಕ್ಷ

ಇದುವರೆಗೆ ಯುವತಿಯರು, ಮಹಿಳೆಯರು ನಾಪತ್ತೆಯಾದ ಬಗ್ಗೆ ಪೊಲೀಸ್ ಠಾಣೆಯಿಂದ ಪ್ರಕಟಣೆಗಳು ಬರುತ್ತಿದ್ದವು. ಆದರೆ ಇದೀಗ ವಿದ್ಯಾರ್ಥಿನಿ ನಾಪತ್ತೆಯಾಗಿರುವ ಬಗ್ಗೆ ವರದಿ ಬಂದಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ನಾಪತ್ತೆಯಾದ ವಿದ್ಯಾರ್ಥಿನಿ ಪ್ರಕೃತಿ, ಮದ್ದೂರು ತಾಲೂಕಿನ ರಾಜೇಗೌಡನದೊಡ್ಡಿ ಗ್ರಾಮದವಳಾಗಿದ್ದು, ಗ್ರಾಮದ ಆರ್.ಕೆ.ನಾಗೇಗೌಡ ಅವರ ಮಗಳು. ಈಕೆ ಕೆ.ಹೊನ್ನಲಗೆರೆ ಆರ್.ಕೆ.ವಿದ್ಯಾಸಂಸ್ಥೆಯಲ್ಲಿ 9ನೇ ತರಗತಿಯಿಂದ ಉತ್ತೀರ್ಣರಾಗಿ 10ನೇ ತರಗತಿಗೆ ಪ್ರವೇಶ ಪಡೆದಿದ್ದಳು.

ಜೂ. 10 ರಂದು ಬೆಳಗ್ಗೆ 9 ಗಂಟೆಯ ಸಮಯದಲ್ಲಿ ಮನೆಯಿಂದ ಶಾಲೆಗೆ ಹೋಗುತ್ತೇನೆಂದು ಹೇಳಿ ಹೋದವಳು ಸಂಜೆ ಶಾಲೆ ಬಿಡುವ ವೇಳೆಯಾದರು ಮನೆಗೆ ಬಂದಿಲ್ಲ. ಇದರಿಂದ ಗಾಬರಿಗೊಂಡ ಪೋಷಕರು ಆಕೆಯ ಸ್ನೇಹಿತೆಯರನ್ನು ವಿಚಾರಣೆ ಮಾಡಿದಾಗ ಗೊತ್ತಿಲ್ಲ. ನಾವು ನೋಡಿಲ್ಲ ಎಂಬ ಉತ್ತರ ನೀಡಿದ್ದಾರೆ.

ಅವಳ ಬಗ್ಗೆ ಹುಡುಕಾಟ ನಡೆಸಿದಾಗ ಹೊಸೂರು ಗೇಟ್ ಬಳಿ ಆಕೆಯ ಸೈಕಲ್ ನಿಂತಿರುವುದು ಕಂಡುಬಂದಿದೆ. ಆಕೆ ಎಲ್ಲಿದ್ದಾಳೆ? ಎಲ್ಲಿ ಹೋದಳು ಎಂಬ ಮಾಹಿತಿ ಮಾತ್ರ ದೊರೆಯದಾಗಿದೆ. ಪೋಷಕರು ಎಲ್ಲ ಕಡೆ ಹುಡುಕಾಡಿ ಎಲ್ಲಿಯೂ ಮಾಹಿತಿ ಸಿಗದ ಹಿನ್ನಲೆಯಲ್ಲಿ ಮದ್ದೂರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಅಜ್ಜಿ ಮನೆಗೆ ಹೋಗಿ ಬರುತ್ತೇನೆಂದ ಯುವಕ ಕಾಣೆ

ಇದು ಕೇವಲ ಪ್ರಕೃತಿ ಒಬ್ಬಳ ಪ್ರಕರಣವಲ್ಲ. ಇಂತಹ ನೂರಾರು ಪ್ರಕರಣಗಳು ಮಂಡ್ಯದಲ್ಲಿ ನಡೆದಿವೆ. ಹೆಣ್ಮಕ್ಕಳ ನಾಪತ್ತೆ ಪ್ರಕರಣಗಳ ಬಗ್ಗೆ ಯಾರೂ ಸೊಲ್ಲೆತ್ತಿದಂತೆ ಕಂಡು ಬರುತ್ತಿಲ್ಲ. ಜನಪ್ರತಿನಿಧಿಗಳು, ಮಹಿಳಾ ಸಂಘಟನೆಗಳು ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ ಪ್ರಕರಣಗಳ ಕುರಿತಂತೆ ಗಂಭೀರವಾಗಿ ಪರಿಗಣಿಸಬೇಕಿದೆ.

ಈಗ ಸಂಸದೆಯಾಗಿರುವ ಸುಮಲತಾ ಅಂಬರೀಶ್ ಕೂಡ ಈ ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಗಮನಹರಿಸಿ ನಾಪತ್ತೆ ಪ್ರಕರಣದ ಹಿಂದಿನ ರಹಸ್ಯವನ್ನು ಬೇಧಿಸಬೇಕಿದೆ. ಇಲ್ಲದೆ ಹೋದರೆ ನಾಪತ್ತೆಯಾಗುವವರ ಸಂಖ್ಯೆ ಹೆಚ್ಚಾಗುತ್ತಲೇ ಹೋಗುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The missing cases of women and children in Mandya district are increasing day by day, and for what reasons are they missing? Where did the missing people go? How many have come back? How many cops have searched? This questions are still unanswered.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more