ಮಂಡ್ಯ, ರಾಮನಗರದಲ್ಲಿ ಭೂಕಂಪ: ಆತಂಕದಲ್ಲಿ ಜನರು
ಮಂಡ್ಯ ಮತ್ತು ರಾಮನಗರ ಜಿಲ್ಲೆಯ ಹಲವೆಡೆ ಇಂದು ಬೆಳಗ್ಗೆ ಭೂಕಂಪದ ಅನುಭವವಾಗಿದ್ದು, ಜನರು ಅತಂಕಗೊಳ್ಳುವಂತಾಗಿದೆ.
ಮಂಡ್ಯ,
ಏಪ್ರಿಲ್ 18: ಮಂಡ್ಯ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಇಂದು ಬೆಳಗ್ಗೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಜಿಲ್ಲೆಯಲ್ಲಿ ಆತಂಕ ಮನೆಮಾಡಿದೆ. ರಾಮನಗರದಲ್ಲೂ ಇಂದು ಬೆಳಗ್ಗೆ 7:37 ಕ್ಕೆ 2-3 ಸೆಕೆಂಡ್ ಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿದೆ.[ದಾವಣಗೆರೆಯಲ್ಲೂ ಕಂಪಿಸಿತು ಭೂಮಿ] id="toptextpromo"> id='are-slot-1' class='oiad oi-axt oiadv'>id='top-searched-articles'>
ಮಂಡ್ಯ
ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಹಲಗೂರು ಸುತ್ತಮುತ್ತ ಮತ್ತು ಮದ್ದೂರು ತಾಲ್ಲೂಕಿನ ಮರಳಿಗ ಗ್ರಾಮದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಕಂಪನ ಸಣ್ಣ ಪ್ರಮಾಣದಲ್ಲೇ ಆಗಿದ್ದರೂ ಗೃಹೋಪಯೋಗಿ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿ, ಗ್ರಾಮಸ್ಥರು ಭಯಗೊಳ್ಳುವಂತಾಗಿದೆ. ಇತ್ತೀಚೆಗಷ್ಟೇ ಮೈಸೂರಿನಲ್ಲಿ ಬೆಂಕಿಯುಗುಳುವ ಭೂಮಿಯ ಕತೆ ಕೇಳಿ ಆತಂಕಗೊಂಡಿದ್ದ ಜನರು ಇದೀಗ ಭೂಕಂಪದ ವಿಷಯಕ್ಕೆ ತಲ್ಲಣಿಸಿದ್ದಾರೆ.











Click it and Unblock the Notifications