ಜ್ಞಾನೋದಯವಾಗಿದೆ, ಒಂದೇ ತಟ್ಟೆಯಲ್ಲಿ ಊಟ ಮಾಡುವ ಕಾಲ ಬಂದಿದೆ: ಜಿ.ಟಿ. ದೇವೇಗೌಡ

Recommended Video

      ಕಾಂಗ್ರೆಸ್-ಜೆಡಿಎಸ್ ನಾಯಕರ ಜಗಳದ ಬಗ್ಗೆ ಜಿ ಟಿ ದೇವೇಗೌಡ ಏನಂದ್ರು? | Oneindia Kannada

      ಮಂಡ್ಯ, ಮೇ 14: ಇಂದಿನಿಂದ ಸಮ್ಮಿಶ್ರ ಸರ್ಕಾರದ ಮೈತ್ರಿಪಕ್ಷಗಳ ಮುಖಂಡರು ಪರಸ್ಪರ ವಾಕ್ಸಮರ ನಡೆಸುವುದನ್ನು ಸಂಪೂರ್ಣ ಬಂದ್ ಮಾಡಲಿದ್ದಾರೆ. ಹಿರಿಯ ಮುಖಂಡರು ಕುಳಿತು ಮಾತನಾಡಿದ್ದು, ಎಲ್ಲರಿಗೂ ಜ್ಞಾನೋದಯವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಹೇಳಿದರು.

      ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

      ಮಂಗಳವಾರ ಮಾತನಾಡಿದ ಅವರು, ಎರಡೂ ಪಕ್ಷಗಳು ಮುಖಂಡರು ಒಂದಾಗಿದ್ದಾರೆ. ಎಲ್ಲರೂ ಒಟ್ಟಿಗೆ ಕುಳಿತು ಒಂದೇ ತಟ್ಟೆಯಲ್ಲಿ ಊಟ ಮಾಡುವ ಸಮಯ ಬಂದಿದೆ ಎಂದರು.

      'ನಮ್ಮ ಪಕ್ಷಗಳ ನಾಯಕರು ಮಾತನಾಡಿದ್ದಾರೆ. ಈಗ ಅಸಮಾಧಾನ, ವಾಕ್ಸಮರ ಎಲ್ಲವೂ ಮುಗಿದ ಅಧ್ಯಾಯ. ಬೇಡ್ರಪ್ಪ, ನಾವೆಲ್ಲರೂ ಅಣ್ಣ ತಮ್ಮಂದಿರ ಹಾಗೆ ಒಂದೇ ತಟ್ಟೆಯಲ್ಲಿ ಊಟ ಮಾಡುವ ಎಂದರು.

      Minister GT Devegowda in Mandya we were enlightened will stop war of words

      ಸಣ್ಣಪುಟ್ಟ ತಪ್ಪುಗಳನ್ನು, ಗೊಂದಲಗಳನ್ನು ಕುಟುಂಬದ ಸದಸ್ಯರ ಹಾಗೆ ಸರಿಪಡಿಸಿಕೊಂಡು ಮುಂದೆ ಸಾಗಲು ನಿರ್ಧರಿಸಿದ್ದೇವೆ. ರಾಜ್ಯದ ಎಲ್ಲರಿಗೂ ನೆಮ್ಮದಿ ತರುವ ವಾತಾವರಣ ನಿರ್ಮಾಣವಾಗಿದೆ. ಮಾಧ್ಯಮಗಳಿಗೆ ಈ ರೀತಿ ಯಾವುದೇ ಹೇಳಿಕೆ ನೀಡುವುದು ಬೇಡ ಎಂದು ನಿರ್ಧರಿಸಲಾಗಿದೆ. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮುಂದಿನ ನಾಲ್ಕು ವರ್ಷ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ ಎಂದು ಹೇಳಿದರು.

      ಮೇ 23ರಂದು ಎಲ್ಲರೂ ದೇಶದ ಚುನಾವಣಾ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಆದರೆ, ಈ ಫಲಿತಾಂಶವು ರಾಜ್ಯ ರಾಜಕಾರಣದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಭರವಸೆ ವ್ಯಕ್ತಪಡಿಸಿದರು.

      ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಅದು ಬೀಳುತ್ತದೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಮೇ 23ರ ಫಲಿತಾಂಶದ ಬಳಿಕವೂ ಸರ್ಕಾರ ಮುಂದುವರಿಯಲಿದೆ. ರಾಜ್ಯದಲ್ಲಿ ಈ ವರ್ಷ ಕೂಡ ಮಳೆ, ಬೆಳೆ ಚೆನ್ನಾಗಿ ಆಗಲಿದೆ. ಅದಕ್ಕಾಗಿ ನಿಮಿಷಾಂಬ ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+