ವೀರ ಯೋಧ ಗುರು ಅಂತ್ಯಕ್ರಿಯೆ, ಸ್ಥಳ, ವಿಧಿ ವಿಧಾನಗಳ ಮಾಹಿತಿ
Recommended Video

ಮೈಸೂರು, ಫೆಬ್ರವರಿ 16: ಜಮ್ಮು ಮತ್ತು ಪುಲ್ವಾಮಾದಲ್ಲಿ ನಡೆದ ಆತ್ಮಾಹುತಿ ಬಾಂಬ್ ಸ್ಪೋಟದಲ್ಲಿ ಹುತಾತ್ಮರಾದ 42 ಮಂದಿ ಯೋಧರಲ್ಲಿ ಮಂಡ್ಯ ಜಿಲ್ಲೆ ಗುರು ಕೂಡ ಒಬ್ಬರು. ಅವರ ಅಂತ್ಯಕ್ರಿಯೆ ಮಂಡ್ಯ ಜಿಲ್ಲೆಯ ಗೂಡಿಗೆರೆಯಲ್ಲಿ ಇಂದು ಸಂಜೆ 6.10ಕ್ಕೆ ನಡೆಯಲಿದೆ.
ಅಲ್ಲಿನಕೆ.ಎಂ. ದೊಡ್ಡಿ ಸಮೀಪದ ಮೆಳ್ಳಹಳ್ಳಿ ಬಳಿ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸುಮಾರು 10 ಗುಂಟೆ ಸರ್ಕಾರಿ ಜಾಗದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಪೂರ್ವ-ಪಶ್ಚಿಮಕ್ಕೆ 6 ಅಡಿ, ಉತ್ತರ-ದಕ್ಷಿಣಕ್ಕೆ 9 ಅಡೊ ಅಳತೆಯ ವೇದಿಕೆ ನಿರ್ಮಾಣ ಮಾಡಲಾಗಿದೆ.
ಸಿಮೆಂಟ್ ಇಟ್ಟಿಗೆಯಿಂದ ವೇದಿಕೆ ನಿರ್ಮಿಸಲಾಗಿದೆ. ಅದೇ ವೇದಿಕೆಯಲ್ಲಿ ಅಂತ್ಯಕ್ರಿಯೆ ಹಿಂದೂ ಸಂಪ್ರದಾಯದಂತೆ ನೆರವೇರಲಿದೆ. ಹುತಾತ್ಮ ಯೋಧ ಗುರು ಅವರ ಪಾರ್ಥಿವ ಶರೀರಕ್ಕೆ ಸಹೋದರರು ಅಗ್ನಿ ಸ್ಪರ್ಶ ಮಾಡಲಿದ್ದಾರೆ.

ಅಂತ್ಯಕ್ರಿಯೆ ಸ್ಥಳದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಸ್ಥಳದಲ್ಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಗಣ್ಯರು ಕುಳಿತುಕೊಳ್ಳಲು ಆಸನದ ವ್ಯವಸ್ಥೆಯನ್ನೂ ಕೂಡ ಮಾಡಲಾಗಿದೆ. ಯೋಧ ಗುರು ಅವರ ತಂದೆ, ಪತ್ನಿ, ಚಿಕ್ಕಮ್ಮ ಸೇರಿದಂತೆ ಕುಟುಂಬದ ಸಾಕಷ್ಟು ಮಂದಿ ಅಸ್ವಸ್ಥರಾಗಿದ್ದು, ಷಿಕಿತ್ಸೆ ನೀಡಲಾಗುತ್ತಿದೆ.












Click it and Unblock the Notifications