ಏರ್ ಸರ್ಜಿಕಲ್ ಸ್ಟ್ರೈಕ್:ವಾಯುಸೇನೆಗೆ ಸೆಲ್ಯೂಟ್ ಮಾಡಿದ ಹುತಾತ್ಮ ಯೋಧ ಗುರು ಪತ್ನಿ
ಮಂಡ್ಯ, ಫೆಬ್ರವರಿ 26: ಹುತಾತ್ಮ ವೀರಯೋಧ ಗುರು ಅವರ ಪತ್ನಿ ಕಲಾವತಿ ಭಾರತೀಯ ವಾಯುಸೇನೆಯ ಏರ್ ಸ್ಟ್ರೈಕ್ ದಾಳಿಯನ್ನು ನೋಡಿ ಸೆಲ್ಯೂಟ್ ಮಾಡುವ ಮೂಲಕ ಸೇನೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.
"ಆ ಉಗ್ರರು ಎಲ್ಲೆಲ್ಲಿ ಅಡಗಿದ್ದಾರೆ ಎಂದು ತಿಳಿದುಕೊಂಡು ಅವರನ್ನು ಬಿಡಬಾರದು, ಸೆದೆ ಬಡಿಯಬೇಕು. ನಮ್ಮ ಸರ್ಕಾರಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ. ನಮ್ಮ ಸೈನಿಕರಿಗೆ ಮತ್ತಷ್ಟು ಧೈರ್ಯ, ಶಕ್ತಿ ಕೊಡಲಿ. ಅವರಿಗೆ ಆರೋಗ್ಯ, ಆಯಸ್ಸು ಕೊಟ್ಟು ಕಾಪಾಡಲಿ. ಸೈನಿಕರೆಲ್ಲರೂ ಚೆನ್ನಾಗಿರಲಿ. ನಮ್ಮ ಸೈನಿಕರ ಬಗ್ಗೆ ನಾನು ತುಂಬಾ ಹೆಮ್ಮೆ ಪಡುತ್ತೇನೆ. ಅವರಿಗೆ ಗೌರವ ಕೊಡುತ್ತೇನೆ. ದಾಳಿ ನಡೆಸಿದ ಸೈನಿಕರಿಗೆ ನಾನು ಸೆಲ್ಯೂಟ್ ಹೊಡೆಯುತ್ತೇನೆ" ಎಂದು ಕಲಾ ತಿಳಿಸಿದರು.
ಇದು ದೇಶ ರಕ್ಷಣೆ ಕಾರ್ಯ, ಗಡಿ ಕಾನೂನು ಉಲ್ಲಂಘಿಸಿಲ್ಲ : ಸ್ವಾಮಿ
ಭಾರತ ಪ್ರತೀಕಾರ ತೀರಿಸಿಕೊಂಡ ವಿಷಯ ಕೇಳಿ ಸ್ವಲ್ಪ ಖುಷಿಯಾಗಿದೆ. ಆದರೆ ಇಂತಹ ಪ್ರತಿಕಾರದ ದಾಳಿಗಳು ಪಾಕ್ ಮೇಲೆ ನಿಲ್ಲಬಾರದು ಮತ್ತಷ್ಟು ನಡೆಯುತ್ತಿರಬೇಕು ಎಂದು ಸಂತೋಷ ವ್ಯಕ್ತಪಡಿಸಿದರು.
ಇಂದು ಹುತಾತ್ಮ ಯೋಧ ಗುರು ಅವರ ಹನ್ನೊಂದು ದಿನದ ತಿಥಿ ಕಾರ್ಯ ನಡೆಯಿತು. ಊಟ, ಶಾಮಿಯಾನ, ಸಮಾಧಿಯ ಅಲಂಕಾರದ ಕಾರ್ಯ ಸೇರಿದಂತೆ ತಿಥಿ ಕಾರ್ಯದ ಸಂಪೂರ್ಣ ಜವಬ್ದಾರಿಯನ್ನು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಅವರು ವಹಿಸಿಕೊಂಡಿದ್ದರು.

ಸಮಾಧಿಯ ಬಳಿ ಪೂಜೆ
ಯೋಧ ಗುರು ಸಮಾಧಿಯ ಬಳಿ ಪೂಜಾ ವಿಧಿ ವಿಧಾನಗಳು ನಡೆದಿದ್ದು, ಸಮಾಧಿಯ ಬೂದಿಯನ್ನು ಎತ್ತಿ ಹಾಕಿ, ಗಂಜಳ ಪ್ರೋಕ್ಷಣೆ ಮಾಡಿ, ಮಡಿವಾಳ ಸಂಪ್ರದಾಯದಂತೆ ಪೂಜಾ ವಿಧಿ ವಿಧಾನಗಳು ನಡೆದವು.
ಸರ್ಜಿಕಲ್ ಸ್ಟ್ರೈಕ್ 2: ಕರ್ನಾಟಕಾದ್ಯಂತ ಸಂಭ್ರಮಾಚರಣೆ

ಹಾಲು, ತುಪ್ಪ ಎರೆದು ಅಂತಿಮ ಪೂಜೆ
ಸಮಾಧಿ ಬಳಿ ಹೊಂಬಾಳೆ ನೆಟ್ಟು, ಗುರುವಿನ ಭಾವಚಿತ್ರವನ್ನಿಟ್ಟು ದೀಪ ಹಚ್ಚಲಾಯಿತು. ನಂತರ ಬಾಳೆ ಎಲೆಯ ಮೇಲೆ ತಿಂಡಿ ತಿನಿಸು, ಬಗೆಬಗೆಯ ಆಹಾರ ಪದಾರ್ಥಗಳನ್ನು ಇಟ್ಟು ಪೂಜಿಸಲಾಯಿತು. ಹೊಂಬಾಳೆಗೆ ಹಾಲು ತುಪ್ಪ ಎರೆಯುವುದರ ಮೂಲಕ ಅಂತಿಮ ಪೂಜೆ ಸಲ್ಲಿಸಲಾಯಿತು.
ಹುತಾತ್ಮ ಯೋಧ ಗುರು ಪುಣ್ಯತಿಥಿಯಂದೇ ಉಗ್ರರನ್ನು ಚೆಂಡಾಡಿದ ಸೇನೆ

ಮಳವಳ್ಳಿ ಮಹದೇವಸ್ವಾಮಿಯವರಿಂದ ಗಾಯನ
ಸಮಾಧಿಯ ಬಳಿ ಇಂದು ಬೆಳಗ್ಗೆ 9 ರಿಂದ ಉತ್ತರಕ್ರಿಯಾದಿ ಕಾರ್ಯ ಮುಗಿಯುವವರೆಗೂ ಜನಪದ ಗಾಯಕ ಮಳವಳ್ಳಿ ಮಹದೇವಸ್ವಾಮಿ ಮತ್ತು ತಂಡದವರು ಗೀತಗಾಯನ ನಡೆಸಿಕೊಟ್ಟರು. ಇದೇ ವೇಳೆ ಸಾವಿರಾರು ಮಂದಿ ಯೋಧ ಗುರು ಸಮಾಧಿ ಬಳಿ ತೆರಳಿ ನಮಸ್ಕರಿಸಿದರು.

ದೇಶಭಕ್ತ ಯುವಕರಿಂದ ರಕ್ತದಾನ
ಹುತಾತ್ಮ ಗುರು ಸಮಾಧಿ ಬಳಿ ದೇಶಭಕ್ತರಿಂದ ರಕ್ತದಾನ ಶಿಬಿರ ಸಹ ನಡೆಸಲಾಯಿತು. ರಕ್ತದಾನದ ಮೂಲಕ ಗುರು ಆತ್ಮಕ್ಕೆ ಶ್ರದ್ದಾಂಜಲಿ ಕೋರಿದ ದೇಶಭಕ್ತರು ಇದೇ ವೇಳೆ ಸೈನಿಕರನ್ನು ಸ್ಮರಿಸಿದರು. ಪ್ರಜಾಪ್ರಿಯಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಈ ಶಿಬಿರದಲ್ಲಿ ನೂರಾರು ದೇಶಭಕ್ತ ಯುವಕರು ರಕ್ತದಾನ ಮಾಡಿ ಸಾರ್ಥಕತೆ ಮೆರೆದರು.