ಮನುಷ್ಯನ ಪಾದ ಹೊತ್ತೊಯ್ದ ನಾಯಿ, ನಿಗೂಢ ಪ್ರಕರಣದ ಬೆನ್ನತ್ತಿದ ಪೊಲೀಸರು
ಮಂಡ್ಯ, ಜೂನ್ 23: ನಾಯಿಯೊಂದು ಮನುಷ್ಯನ ತುಂಡಾದ ಪಾದವನ್ನು ಕಚ್ಚಿಕೊಂಡು ಹೋದ ಪ್ರಕರಣ ಮಂಡ್ಯ ಜಿಲ್ಲೆಯ ನಾಗಮಂಡಗಲದ ಬಳಿ ನಡೆದಿದೆ.
ನಾಗಮಂಗಲ ತಾಲೂಕಿನ ಹುಲಿಕೆರೆ ಗ್ರಾಮದ ಜಮೀನಿನಲ್ಲಿ ರೈತನೊಬ್ಬ ಉಳುಮೆ ಮಾಡುತ್ತಿದ್ದಾಗ ತ್ಯಾಪೆನಹಳ್ಳಿ ಅರಣ್ಯ ಸಮೀಪ ನಾಯಿಯೊಂದು ಮನುಷ್ಯನ ತುಂಡಾದ ಪಾದವನ್ನು ಕಚ್ಚಿ ಎಳೆದಾಡಿ ತಿನ್ನುತ್ತಿದ್ದ ದೃಶ್ಯ ಕಾಣಿಸಿದೆ.
ಕೂಡಲೇ ಹತ್ತಿರ ಹೋಗಿ ನೋಡಲು ಮುಂದಾದಾಗ ನಾಯಿ ಹೆದರಿ ಪಾದ ಕಚ್ಚಿಕೊಂಡು ಪರಾರಿಯಾಗಿದೆ. ಇದರಿಂದ ಆತಂಕಗೊಂಡ ರೈತ ತಕ್ಷಣವೇ ಸ್ಥಳೀಯರೊಂದಿಗೆ ಸೇರಿ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ.
ಮಾಹಿತಿ ತಿಳಿದ ನಾಗಮಂಗಲ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಜಮೀನು ಮತ್ತು ಅರಣ್ಯದ ಸುತ್ತಮುತ್ತ ಹುಡುಕಾಟ ನಡೆಸಿದ್ದು ನಾಯಿ ಕಚ್ಚಿಕೊಂಡು ಪಾದಕ್ಕಾಗಿ ಹುಡುಕಾಟ ನಡೆಸಿದ್ದಾರೆ.
ಈ ನಡುವೆ ಪಾದ ಸಿಕ್ಕಿದೆಯಾದರೂ ಶವಕ್ಕಾಗಿ ಹುಡುಕಾಟವನ್ನು ಪೊಲೀಸರು ಮುಂದುವೆರಸಿದ್ದು, ಅರಣ್ಯ ಸೇರಿದಂತೆ ಸುತ್ತ ಮುತ್ತ ಶ್ವಾನದಳದ ಮೂಲಕ ಪರಿಶೀಲನೆ ನಡೆಸಲಾಯಿತಾದರೂ ಶವದ ಕುರಿತು ಯಾವುದೇ ಮಾಹಿತಿ ದೊರಕಿಲ್ಲ.

ಹುಲಿಕೆರೆ ಗ್ರಾಮದಿಂದ ಯುವತಿಯೊಬ್ಬಳು ಕಳೆದ ತಿಂಗಳು ನಾಪತ್ತೆಯಾಗಿರುವ ಪ್ರಕರಣ ಗಾಮಾಂತರ ಠಾಣೆಯಲ್ಲಿ ದಾಖಲಾಗಿದೆ. ಮನುಷ್ಯನ ಪಾದ ಪತ್ತೆಯಾಗಿರುವುದರಿಂದ ಗ್ರಾಮದ ಜನರಲ್ಲಿ ಮತ್ತು ಕುಟುಂಬದಲ್ಲಿ ಆತಂಕ ಹೆಚ್ಚಾಗಿದೆ. ಇದು ಅಪರಿಚಿತ ಶವದ ಪಾದವಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಆದರೂ ಶವಕ್ಕಾಗಿ ಹುಡುಕಾಟ ಮುಂದುವರೆಸಿದ್ದಾರೆ.












Click it and Unblock the Notifications