ಕಣ್ಣೀರು ಹಾಕಿದರೆ ಮಂಡ್ಯದ ಜನ ಕರಗಲ್ಲ: ಕುಮಾರಸ್ವಾಮಿ

ಮಂಡ್ಯ, ಮಾರ್ಚ್‌ 20: ವೇದಿಕೆ ಮೇಲೆ ಕಣ್ಣೀರು ಹಾಕಿದ ಕೂಡಲೆ ಮಂಡ್ಯದ ಜನ ಕರಗುವುದಿಲ್ಲ ಎಂದು ಸಿಎಂ ಕುಮಾರಸ್ವಾಮಿ ಅವರು ಸುಮಲತಾ ಅವರ ಪ್ರಚಾರ ಸಭೆಯ ಬಗ್ಗೆ ಟೀಕೆ ಮಾಡಿದ್ದಾರೆ.

ಕೆಆರ್‌ಎಸ್‌ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, ಸುಮಲತಾ ಅವರು ಭಾವುಕರಾಗಿ ಮಾತನಾಡಿದ್ದಕ್ಕಿಂತಲೂ ಎರಡು ಪಟ್ಟು ಭಾವುಕರಾಗಿ ಮಾತನಾಡಲು ನನಗೂ ಬರುತ್ತದೆ, ಆದರೆ ಸುಮಲತಾ ಅವರನ್ನು ಮಂಡ್ಯದ ಜನ ನಂಬುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಯಾವುದೇ ಕಾಣಿಕೆ ನೀಡದ ವ್ಯಕ್ತಿಗಳ ಮಾತನ್ನು ಮಂಡ್ಯದ ಜನ ನಂಬುವುದಿಲ್ಲ, ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಅನ್ನು ಉಳುಸಿ ಬೆಳೆಸಿದ ಮತದಾರರು ಇಂತಹಾ ಮಾತುಗಳಿಗೆ ಕಿವಿಗೊಡಬಾರದು ಎಂದು ಕುಮಾರಸ್ವಾಮಿ ಹೇಳಿದ್ದಾರೆ.

Mandya people would not belive Sumalatha : Kumaraswamy

ವರ್ಷದಿಂದಲೂ ನಿಖಿಲ್ ಕುಮಾರಸ್ವಾಮಿ ಮಂಡ್ಯದ ಜನರ ಸಂಪರ್ಕದಲ್ಲಿದ್ದಾನೆ, ಆತ್ಮಹತ್ಯೆ ಮಾಡಿಕೊಂಡ ರೈತನ ಮನೆಗೆ ಹೋಗಿದ್ದ, ಕ್ಯಾನ್ಸರ್‌ನಿಂದ ತೀರಿಕೊಂಡ ವ್ಯಕ್ತಿಯ ಮಕ್ಕಳನ್ನು ದತ್ತು ಪಡೆದುಕೊಳ್ಳುವ ಬಗ್ಗೆ ನನ್ನೊಂದಿಗೆ ಚರ್ಚಿಸಿದ್ದ, ಚುನಾವಣೆ ಬಂದಾಗ ಉದ್ದುದ್ದ ಭಾಷಣ ಮಾಡುತ್ತಿಲ್ಲ ಎಂದು ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+