ಕಬ್ಬಿನ ಕೊರತೆ: ಅವಧಿಗೂ ಮುನ್ನವೇ ಮಂಡ್ಯ ಮೈಶುಗರ್ ಸ್ಥಗಿತ
ಕಬ್ಬಿನ ಕೊರತೆಯಿಂದಾಗಿ ಮಂಡ್ಯ ಜಿಲ್ಲೆಯ ರೈತರ ಜೀವನಾಡಿಯಾಗಿರುವ ಮೈಶುಗರ್ ಕಾರ್ಖಾನೆ ಅವಧಿಗೂ ಮುನ್ನವೇ ಸ್ಥಗಿತಗೊಂಡಿದೆ. ಐದು ತಿಂಗಳ ಕಾಲ ಕಾರ್ಖಾನೆ ನಡೆದಿದ್ದು, 1 ಲಕ್ಷ 2 ಸಾವಿರ ಟನ್ ಕಬ್ಬನ್ನು ಮಾತ್ರ ಈವರೆಗೂ ಬಳಸಿಕೊಳ್ಳಲಾಗಿದೆ.
ಮಂಡ್ಯ, ಫೆಬ್ರವರಿ 8: ಜಿಲ್ಲೆಯ ರೈತರ ಜೀವನಾಡಿಯಾಗಿರುವ ಮೈಶುಗರ್ ಕಾರ್ಖಾನೆ ಕಬ್ಬಿನ ಕೊರತೆಯಿಂದಾಗಿ ಅವಧಿಗೂ ಮುನ್ನವೇ ಸ್ಥಗಿತಗೊಂಡಿದೆ.
2022-23ನೇ ಸಾಲಿನಲ್ಲಿ ಮೈಶುಗರ್ ನಡೆದಿದ್ದು ಕೇವಲ ಪ್ರಾಯೋಗಿಕ ಎನ್ನುವ ಭಾವ ಮೂಡಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸೂಚನೆಯಂತೆ ಇಲ್ಲಿ ಲಾಭ ನಷ್ಟದ ಲೆಕ್ಕಾಚಾರಕ್ಕಿಂತ ಸರ್ಕಾರಿ ಸ್ವಾಮ್ಯದಲ್ಲಿಯೇ ಕಾರ್ಖಾನೆ ನಡೆಸಿ, ಮುಂದೆ ಸಮರ್ಥವಾದ ರೀತಿಯಲ್ಲಿ ಮೈಶುಗರ್ ಕಂಪನಿಯನ್ನು ಯಶಸ್ವಿಯಾಗಿ ನಡೆಸುವ ಗುರಿ ಹೊಂದಲಾಗಿದೆ ಎಂಬ ಸೂಚನೆ ಇಲ್ಲಿ ವ್ಯಕ್ತವಾಗಿದೆ.
ಕಾರ್ಖಾನೆ ಸುಮಾರು 3-4 ವರ್ಷ ಕಾಲ ಸ್ಥಗಿತಗೊಂಡಿದ್ದರಿಂದ ತುಕ್ಕು ಹಿಡಿಯಲಾರಂಭಿಸಿದ್ದ ಯಂತ್ರ ಸಮೂಹವನ್ನು ಸುಸ್ಥಿತಿಗೆ ತರುವುದರಲ್ಲೇ ಬಹಳಷ್ಟು ದಿನಗಳು ಬೇಕಾದವು. ಕಳೆದ ಸೆಪ್ಟೆಂಬರ್‌ನಲ್ಲಿ ಆರಂಭವಾದ ಕಾರ್ಖಾನೆ ಇದೀಗ ಸ್ಥಗಿತಗೊಂಡಿದೆ. ಐದು ತಿಂಗಳ ಕಾಲ ಕಾರ್ಖಾನೆ ನಡೆದಿದ್ದು, 1 ಲಕ್ಷ 2 ಸಾವಿರ ಟನ್ ಕಬ್ಬನ್ನು ಮಾತ್ರ ಬಳಸಿಕೊಳ್ಳಲಾಗಿದೆ.

ಕಬ್ಬು ಕಟಾವಿಗೆ ಆಳುಗಳ ಕೊರತೆ
ವಾಸ್ತವದಲ್ಲಿ ಈ ಹಂಗಾಮಿನಲ್ಲಿ ಕನಿಷ್ಟ 2 ಲಕ್ಷ ಮೆಗಾಟನ್ ಕಬ್ಬು ನುರಿಸುವ ಗುರಿ ಹೊಂದಿದ್ದ ಕಾರ್ಖಾನೆಗೆ ನಿರೀಕ್ಷಿತ ಪ್ರಮಾಣದಲ್ಲಿ ಕಬ್ಬು ಸರಬರಾಜಾಗದಿರುವುದು, ಸಾಮಾನ್ಯವಾಗಿ ಜೂನ್‌ನಲ್ಲಿ ಆರಂಭವಾಗುತ್ತಿದ್ದ ಕಾರ್ಖಾನೆ 4 ತಿಂಗಳ ಕಾಲ ತಡವಾಗಿ ಎಂದರೆ ಸೆಪ್ಟೆಂಬರ್‌ನಲ್ಲಿ ಆರಂಭವಾಗಿದ್ದು ಕಬ್ಬಿನ ಕೊರತೆಗೆ ಕಾರಣವಾಗಿದೆ. ಇದರೊಂದಿಗೆ ಕಬ್ಬು ಕಟಾವಿಗೆ ಆಳುಗಳ ಕೊರತೆ ದೊಡ್ಡ ಪೆಟ್ಟು ನೀಡಿದಂತಾಗಿದೆ.
ಆರಂಭದಲ್ಲಿ 900 ರಿಂದ 1000 ಟನ್ ಕಬ್ಬು ಬರುತ್ತಿದ್ದ ಜಾಗದಲ್ಲಿ ಇತ್ತೀಗೆ ಕೇವಲ 200 ಟನ್‌ಗೆ ಬಂದು ನಿಂತಿತ್ತು. ಹೀಗೆ ಕಬ್ಬಿನ ಸರಬರಾಜಿನಲ್ಲಿ ತೀವ್ರ ಕೊರತೆ ಉಂಟಾಗಿದೆ.

ಸರ್ಕಾರದ ಗಮನಕ್ಕೆ ತಂದಿದ್ದ ಮೈ ಶುಗರ್ ವ್ಯವಸ್ಥಾಪಕರು
ಇಳುವರಿಯೂ ಕುಸಿತಗೊಂಡಿದ್ದು, ಕಳೆದ ಡಿಸೆಂಬರ್‌ನಲ್ಲೇ ಕಾರ್ಖಾನೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿತ್ತು. ಆಗ ರೈತರು, ಅನೇಕ ಸಂಘಟನೆಗಳ ಮುಖಂಡರು ಈಗಲೇ ನಿಲ್ಲಿಸಬೇಡಿ ಎಂಬ ಒತ್ತಾಯ ಮಾಡಿದ್ದರು. ಈ ಬಗ್ಗೆ ನಾವು ಸರ್ಕಾರದ ಗಮನಕ್ಕೆ ತರಲಾಗಿ, ಈ ಹಂಗಾಮನ್ನು ಪ್ರಾಯೋಗಿಕ ಎಂದು ತಿಳಿದುಕೊಂಡು ಕಾರ್ಖಾನೆಯನ್ನು ಒಂದು ಹಂತಕ್ಕೆ ತನ್ನಿ ಎಂದು ಮುಖ್ಯಮಂತ್ರಿಗಳೇ ಸೂಚನೆ ನೀಡಿದ್ದರು ಎಂದು ವ್ಯವಸ್ಥಾಪಕ ನಿರ್ದೇಶಕ ಅಪ್ಪಾಸಾಹೇಬ ಪಾಟೀಲ್ ತಿಳಿಸಿದ್ದಾರೆ.
ಈ ಎಲ್ಲಾ ಬೆಳವಣಿಗೆಯ ನಡುವೆ ಕಾರ್ಖಾನೆ ಸರಾಸರಿ ಶೇ.5 ರಷ್ಟು ಇಳುವರಿ ಪಡೆದಿದ್ದು, ಸುಮಾರು ಶೇ.4 ರಷ್ಟು ವ್ಯತ್ಯಯವಾಗಿದೆ. ನಿತ್ಯ 24 ತಾಸು ನಡೆಯಬೇಕಿದ್ದ ಕಾರ್ಖಾನೆ ಈ ಹಂಗಾಮಿನಲ್ಲಿ ದಿನಕ್ಕೆ 6-7 ಗಂಟೆಯಷ್ಟೇ ಕಾರ್ಯನಿರ್ವಹಿಸಿತ್ತು. ಇದರಿಂದಾಗಿ ಸರಾಸರಿ ಶೇ.4-5ರಷ್ಟು ಬರುತ್ತಿದ್ದ ಕಾಕಂಬಿ ಪ್ರಮಾಣ ಶೇ.10ಕ್ಕೆ ಹೆಚ್ಚಳಗೊಂಡು ಸಕ್ಕರೆ ಇಳುವರಿ ತೀವ್ರ ಕುಸಿತಗೊಂಡಿದ್ದು ವ್ಯವಸ್ಥಾಪಕರಿಗೆ ಮತ್ತೊಂದು ಪಾಠ ಕಲಿಸಿದಂತಿದೆ.

ಮೈ ಶುಗರ್‌ನಲ್ಲಿ 280 ಗುತ್ತಿಗೆ ನೌಕರರು
ಹಾಗಾಗಿ ಈಗಾಗಲೇ 5 ಸಾವಿರ ಟನ್‌ನಷ್ಟು ಕಾಕಂಬಿ(ಬೆಲ್ಲದ ಪಾಲ) ಮಾರಲಾಗಿದ್ದು, ಈಗ ಮತ್ತೆ 3 ಸಾವಿರ ಟನ್ ಎತ್ತುವಳಿಗೆ ಡಿಸ್ಟಿಲ್ಲರಿಗಳಿಂದ ಟೆಂಡರ್ ಕರೆಯಲಾಗಿದೆ. ಇನ್ನು ಮೈಶುಗರ್‌ನಲ್ಲಿ ಕಾರ್ಯನಿರ್ವಹಿಸಿ ವಿಆರ್‌ಎಸ್ ಪಡೆದುಕೊಂಡ ಎಲ್ಲ ನೌಕರರಿಗು ಬಾಕಿ ಚುಕ್ತಾ ಮಾಡಲಾಗಿದ್ದು, ಈಗ ಕಂಪನಿಯ 38 ನೌಕರರು ಹಾಗೂ 280 ಗುತ್ತಿಗೆ ನೌಕರರುಗಳಿದ್ದಾರೆ. ಈ ಹಿಂದೆ ಇದೇ ಕಾರ್ಖಾನೆಯಲ್ಲಿ ವ್ಯವಸ್ಥಾಪಕರಾಗಿದ್ದ ಈಗಿನ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಅವರು ಕಾರ್ಖಾನೆಯ ಸಕ್ಕರೆ ಮಾರಾಟದಿಂದ ಬಂದ ಹಣದಲ್ಲಿ ನೌಕರರ ಬಾಕಿ ತೀರಿಸಿದ್ದರು. ಈಗಿನ ಸ್ಥಿತಿಯಲ್ಲಿ ಮೈಶುಗರ್ ಸಿಕ್ ಇಂಡಸ್ಟ್ರಿ ಎಂಬ ಹಣೆಪಟ್ಟಿ ಹೊತ್ತಿದ್ದರಿಂದ ಕೇಂದ್ರ ಸಕ್ಕರೆ ಮಂತ್ರಾಲಯ ಜನವರಿಯಲ್ಲಿ 7 ಸಾವಿರ ಕ್ವಿಂಟಾಲ್ ಸಕ್ಕರೆ ಮಾರಾಟಕ್ಕೆ ಅನುಮತಿ ನೀಡಿದೆ. ಎಲ್ಲಾ ಸಂಪನ್ಮೂಲ ಬಳಸಿ ಜ.24ರವರೆಗೆ ಕಬ್ಬು ಸರಬರಾಜು ಮಾಡಿದ್ದ ರೈತರಿಗೆ 27 ಕೊಟಿ 2 ಲಕ್ಷ ರೂ.ಪಾವತಿಸಲಾಗಿದೆ. ಹೊಸ ಮಿಲ್ ಒಂದರಲ್ಲೇ ಇಷ್ಟು ಕಬ್ಬನ್ನು ಅರೆಸಲಾಗಿದ್ದು, ಸರಾಸರಿ ನಿತ್ಯ 4 ಸಾವಿರ ಟನ್ ಕಬ್ಬು ಅರೆಯುವ ಸಾಮರ್ಥ್ಯ ಹೊಂದಿದೆ. ಈ ಹಂಗಾಮಿನಲ್ಲಿ ಒಂದೇ ದಿನ 12 ತಾಸಿನಲ್ಲಿ 1800 ಟನ್ ಕಬ್ಬು ನುರಿಸಿದ್ದೇ ಈ ಹಂಗಾಮಿನ ವಿಶೇಷವಾಗಿದೆ.
ಮುಂದಿನ ಹಂಗಾಮಿಗೆ ಕಬ್ಬು ಅರೆಯುವ ಕಾರ್ಯವನ್ನು ಕೈಗೊಳ್ಳಲು ಕಾರ್ಖಾನೆಯನ್ನು ಸಜ್ಜುಗೊಳಿಸಲಾಗಿದೆ. ಮುಂದಿನ ಜೂನ್ ಮೊದಲ ವಾರದಲ್ಲಿ ಮತ್ತೆ ಕಾರ್ಖಾನೆ ಆರಂಭಿಸಿ ಸಕ್ಕರೆ ಉತ್ಪಾದನೆ ಮಾಡಲಾಗುವುದು ಎಂದು ವ್ಯವಸ್ಥಾಪಕ ನಿರ್ದೇಶಕ ಅಪ್ಪಾಸಾಹೇಬ್ ತಿಳಿಸಿದ್ದಾರೆ.

ಮೈಶುಗರ್ ಕಾರ್ಯಾರಂಭಕ್ಕೆ 36 ದಿನಗಳ ಹೋರಾಟ ನಡೆಸಿದ್ದ ರೈತರು
ಪ್ರಸಕ್ತ ಹಂಗಾಮಿನಲ್ಲಿ ಒಂದು ಟನ್ ಕಬ್ಬು ನುರಿಸಲು 1,500 ರೂ. ವೆಚ್ಚ ಮಾಡಬೇಕಾದ ಸಂದಿಗ್ಧತೆ ಬಂದಿತು. ಹಾಗಾಗಿ 1.02 ಲಕ್ಷ ಟನ್ ಕಬ್ಬು ನುರಿಸಲು 15 ಕೋಟಿ ರೂ.ನಷ್ಟವಾಗಿದೆ. ಮುಂದಿನ ಹಂಗಾಮಿಗೆ ಎಲ್ಲವನ್ನೂ ಸರಿಪಡಿಸಿಕೊಂಡು ಕಾರ್ಖಾನೆ ಆರಂಭಿಸಬೇಕು. ಈ ಆಡಿಟ್ ವರದಿ ಬರುವ ವೇಳೆಗೆ ಇದೆಲ್ಲ ಮರೆತುಹೋಗಿರುತ್ತದೆ ಎಂದು ಮೈಶುಗರ್ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಎಸ್.ಕೃಷ್ಣ ಹೇಳಿದ್ದಾರೆ.
ಜಿಲ್ಲೆಯ ಆರ್ಥಿಕ ಜೀವನಾಡಿಯಾದ ಮೈಶುಗರ್ ಕಾರ್ಖಾನೆ ಖಾಸಗಿಯವರ ಪಾಲಾಗುವುದನ್ನು ತಪ್ಪಿಸಬೇಕೆಂಬ ನಮ್ಮ 36 ದಿನಗಳ ಹೋರಾಟಕ್ಕೆ ಸ್ಪಂದಿಸಿ ಮುಖ್ಯಮಂತ್ರಿಗಳು ಮೈಶುಗರನ್ನು ಸರ್ಕಾರಿ ಸ್ವಾಮ್ಯದಲ್ಲಿಯೇ ಆರಂಭಿಸಿದರು. ಮಾತ್ರವಲ್ಲ ಲಾಭ ನಷ್ಟಕ್ಕೆ ಪ್ರಾಮುಖ್ಯತೆ ನೀಡದೆ ರೈತರಿಗೆ ಒಳಿತಾಗಬೇಕೆನ್ನುವ ಉದ್ದೇಶದಿಂದ ಪ್ರಾಯೋಗಿಕ ಕಾರ್ಯವೆಂದು ತಿಳಿದು, ಕಾರ್ಖಾನೆಯನ್ನು ಹಳಿಗೆ ತಂದು ಮುಂದಿನ ಹಂಗಾಮಿಗೆ ಪರಿಣಾಮಕಾರಿಯಾಗಿ ನಡೆಸುವಂತೆ ಹೇಳಿದ್ದರು. ಆದ್ದರಿಂದ ಕಾರ್ಖಾನೆಯನ್ನು ಈ ತಿಂಗಳಾಂತ್ಯದವರೆಗೂ ನಡೆಸುವುದು ಮುಖ್ಯ ಎಂದು ರೈತ ನಾಯಕಿ ಸುನಂದಾ ಜಯರಾಂ ಹೇಳಿದ್ದಾರೆ.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications