ಅಂಬರೀಶ್ ರನ್ನು ನಾಮರ್ದ ಎಂದು ನಿಂದಿಸಿದ ಮಂಡ್ಯ ಜಿಪಂ ಸದಸ್ಯ

Posted By:
Subscribe to Oneindia Kannada

ಮಂಡ್ಯ, ಜನವರಿ 10: "ನಮ್ಮ ಶಾಸಕ ನಾಮರ್ದ. ಆದ್ದರಿಂದ ಕ್ಷೇತ್ರಕ್ಕೆ ಒಂದು ಕುಡಿಯುವ ನೀರಿನ ಘಟಕ ಕೂಡ ತರಲು ಸಾಧ್ಯವಾಗಿಲ್ಲ" - ಹೀಗೆ ಮಂಡ್ಯ ಕ್ಷೇತ್ರದ ಶಾಸಕ ಅಂಬರೀಶ್ ಬಗ್ಗೆ ಮಾತನಾಡಿದ್ದು ಬೂದನೂರು ಜಿಲ್ಲಾ ಪಂಚಾಯಿತಿಯಿಂದ ಆಯ್ಕೆಯಾಗಿರುವ ಜೆಡಿಎಸ್ ಪಕ್ಷದ ಸದಸ್ಯ ಎಚ್.ಎನ್.ಯೋಗೇಶ್.

ಮಂಡ್ಯ ರಾಜಕೀಯದಲ್ಲಿ ಅಚ್ಚರಿ ಮೂಡಿಸುತ್ತಿದೆ ಅಂಬರೀಶ್ ನಡೆ!

ಸ್ಥಾಯಿ ಸಮಿತಿಯ ಅಧ್ಯಕ್ಷರೂ ಆಗಿರುವ ಅವರು ಬುಧವಾರ ಆಕ್ರೋಶಭರಿತರಾಗಿ ಮಾತನಾಡಿ, ಕ್ಷೇತ್ರಕ್ಕೆ ಅನುದಾನ ತರುವಲ್ಲಿ ವಿಫಲರಾಗಿದ್ದಾರೆ ಎಂದು ಶಾಸಕ ಅಂಬರೀಶ್ ವಿರುದ್ಧ ಇಂಥ ಪದ ಪ್ರಯೋಗ ಮಾಡಿದರು. ಇದರಿಂದ ಸಭೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣ ಆಯಿತು.

ಸಂಕ್ರಾಂತಿ ವಿಶೇಷ ಪುಟ

Mandya MLA Ambareesh incapable: JDS ZP member

ಮಂಡ್ಯ ಕ್ಷೇತ್ರದ ಶಾಸಕ ಅಂಬರೀಶ್ ಅವರನ್ನು ಸಿದ್ದರಾಮಯ್ಯ ಅವರ ಸಚಿವ ಸಂಪುಟದಿಂದ ತೆಗೆದುಹಾಕಲಾಗಿದೆ. ಆ ನಂತರ ಕ್ಷೇತ್ರಕ್ಕೆ ಹೋಗುವುದನ್ನೇ ಕಡಿಮೆ ಮಾಡಿದ್ದಾರೆ ಅಂಬರೀಶ್. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಅಂಬರೀಶ್ ಗೆ ಕಾಂಗ್ರೆಸ್ ಟಿಕೆಟ್ ದೊರೆಯುವುದೇ ಅನುಮಾನ ಎಂಬ ಸ್ಥಿತಿಯಿದ್ದು, ಮಂಡ್ಯ ವಿಧಾನಸಭಾ ಕ್ಷೇತ್ರದ ಮೇಲೆ ಅಂಬಿ ತಮ್ಮ ಹಿಡಿತ ಕಳೆದುಕೊಂಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mandya MLA Ambareesh incapable to bring grants to constituency, criticises Mandya district Budanur ZP JDS member HN Yogesh on Wednesday.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ