ಮಂಡ್ಯ ಉಪಚುನಾವಣೆ: ದೇವೇಗೌಡರಿಗೆ ಭರ್ಜರಿ ಪಸಲು ತಂದುಕೊಟ್ಟ ಬೀಗ್ರು
ಮಂಡ್ಯ ಲೋಕಸಭಾ ಚುನಾವಣೆಯ ಇದುವರೆಗಿನ ಎಲ್ಲಾ ದಾಖಲೆಗಳನ್ನು ಮುರಿದು ಜೆಡಿಎಸ್ ಅಭ್ಯರ್ಥಿ ಎಲ್ ಆರ್ ಶಿವರಾಮೇಗೌಡ ಗೆಲುವಿನ ನಗೆ ಬೀರಿದ್ದಾರೆ. ಸಿ ಎಸ್ ಪುಟ್ಟರಾಜು ಅವರಿಂದ ತೆರವಾದ ಸ್ಥಾನಕ್ಕೆ ನವೆಂಬರ್ ಮೂರರಂದು ಚುನಾವಣೆ ನಡೆದಿತ್ತು.
1998ರಲ್ಲಿ ಜನತಾದಳದ ಅಭ್ಯರ್ಥಿಯಾಗಿದ್ದ ಎಂ ಎಚ್ ಅಂಬರೀಶ್, ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ಸಿನ ಜಿ ಮಾದೇಗೌಡ ಅವರನ್ನು 180,523 ಮತಗಳ ಅಂತರದಿಂದ ಸೋಲಿಸಿದ್ದರು. ಮಂಡ್ಯದಲ್ಲಿ ಇದುವರೆಗಿನ ದಾಖಲೆ ಇದಾಗಿತ್ತು. ಮೊನ್ನೆ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಶಿವರಾಮೇ ಗೌಡರು, ಬಿಜೆಪಿಯ ಡಾ. ಸಿದ್ದರಾಮಯ್ಯ ಅವರನ್ನು 324,943 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು.
ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ, ಮಂಡ್ಯ ಲೋಕಸಭಾ ವ್ಯಾಪ್ತಿಯ ಎಲ್ಲಾ ಎಂಟು ಅಸೆಂಬ್ಲಿ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದರು. ಈ ಬಾರಿ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ. ಜೆಡಿಎಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ನಡೆದಿತ್ತು.
ಮಂಡ್ಯದಲ್ಲಿ ಬಿಜೆಪಿಗೆ ನೆಲೆಯೇ ಇಲ್ಲದಿದ್ದರೂ, ಪಕ್ಷದ ಅಭ್ಯರ್ಥಿ ಸಿದ್ದರಾಮಯ್ಯನವರು 244,404 ಮತಗಳನ್ನು ಪಡೆದದ್ದು ಉಪಚುನಾವಣೆಯಲ್ಲಿ ಗಮನಿಸಬೇಕಾದ ಅಂಶಗಳಲ್ಲೊಂದು. ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಭರ್ಜರಿ ಲೀಡ್ ತಂದುಕೊಟ್ಟಿದ್ದು ಮದ್ದೂರು ಮತ್ತು ನಾಗಮಂಗಲ ಕ್ಷೇತ್ರ.
ಮದ್ದೂರು ಕ್ಷೇತ್ರದ ಶಾಸಕ ಮತ್ತು ಸಾರಿಗೆ ಸಚಿವ ಡಿ ಸಿ ತಮ್ಮಣ್ಣ ದೇವೇಗೌಡರ ಬೀಗರು (ಸೊಸೆಯ ತಂದೆ). ಜೆಡಿಎಸ್ ಪಕ್ಷಕ್ಕೆ ಇಷ್ಟು ಅಂತರದಿಂದ ಜಯಗಳಿಸಲು ತಮ್ಮಣ್ಣ ಮತ್ತು ನಾಗಮಂಗಲ ಕ್ಷೇತ್ರದ ಶಾಸಕ ಸುರೇಶ್ ಗೌಡ ಕೂಡಾ ಕಾರಣ. ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಂಟು ಕ್ಷೇತ್ರಗಳಲ್ಲಿ ಜೆಡಿಎಸ್-ಬಿಜೆಪಿ ಅಭ್ಯರ್ಥಿಗಳು ಪಡೆದ ಮತಗಳೆಷ್ಟು? ಮುಂದೆ ಓದಿ..

ಅಸೆಂಬ್ಲಿ ಕ್ಷೇತ್ರ : ಮಳವಳ್ಳಿ
ಅಸೆಂಬ್ಲಿ ಕ್ಷೇತ್ರ : ಮಳವಳ್ಳಿ
ಕ್ಷೇತ್ರದ ಕ್ರಮ ಸಂಖ್ಯೆ : 186
ಜೆಡಿಎಸ್ : 67,752
ಬಿಜೆಪಿ : 30,107
ನೋಟಾ: 2,762
ಎಲ್ಲಾ ಪಕ್ಷೇತರರು ಸೇರಿ: 11,717

ಅಸೆಂಬ್ಲಿ ಕ್ಷೇತ್ರ : ಮದ್ದೂರು
ಅಸೆಂಬ್ಲಿ ಕ್ಷೇತ್ರ : ಮದ್ದೂರು
ಕ್ಷೇತ್ರದ ಕ್ರಮ ಸಂಖ್ಯೆ : 187
ಜೆಡಿಎಸ್ : 81,263
ಬಿಜೆಪಿ : 26,311
ನೋಟಾ: 1,890
ಎಲ್ಲಾ ಪಕ್ಷೇತರರು ಸೇರಿ: 6,196

ಅಸೆಂಬ್ಲಿ ಕ್ಷೇತ್ರ : ಮೇಲುಕೋಟೆ
ಅಸೆಂಬ್ಲಿ ಕ್ಷೇತ್ರ : ಮೇಲುಕೋಟೆ
ಕ್ಷೇತ್ರದ ಕ್ರಮ ಸಂಖ್ಯೆ : 188
ಜೆಡಿಎಸ್ : 64,874
ಬಿಜೆಪಿ : 43,309
ನೋಟಾ: 1,770
ಎಲ್ಲಾ ಪಕ್ಷೇತರರು ಸೇರಿ: 6,303

ಅಸೆಂಬ್ಲಿ ಕ್ಷೇತ್ರ : ಮಂಡ್ಯ
ಅಸೆಂಬ್ಲಿ ಕ್ಷೇತ್ರ : ಮಂಡ್ಯ
ಕ್ಷೇತ್ರದ ಕ್ರಮ ಸಂಖ್ಯೆ : 189
ಜೆಡಿಎಸ್ : 67,981
ಬಿಜೆಪಿ : 29,020
ನೋಟಾ: 2,021
ಎಲ್ಲಾ ಪಕ್ಷೇತರರು ಸೇರಿ: 6,116

ಅಸೆಂಬ್ಲಿ ಕ್ಷೇತ್ರ : ಶ್ರೀರಂಗಪಟ್ಟಣ
ಅಸೆಂಬ್ಲಿ ಕ್ಷೇತ್ರ : ಶ್ರೀರಂಗಪಟ್ಟಣ
ಕ್ಷೇತ್ರದ ಕ್ರಮ ಸಂಖ್ಯೆ : 190
ಜೆಡಿಎಸ್ : 69,934
ಬಿಜೆಪಿ : 36,192
ನೋಟಾ: 1,754
ಎಲ್ಲಾ ಪಕ್ಷೇತರರು ಸೇರಿ: 8,664

ಅಸೆಂಬ್ಲಿ ಕ್ಷೇತ್ರ : ನಾಗಮಂಗಲ
ಅಸೆಂಬ್ಲಿ ಕ್ಷೇತ್ರ : ನಾಗಮಂಗಲ
ಕ್ಷೇತ್ರದ ಕ್ರಮ ಸಂಖ್ಯೆ : 191
ಜೆಡಿಎಸ್ : 86,205
ಬಿಜೆಪಿ : 23,330
ನೋಟಾ: 1,594
ಎಲ್ಲಾ ಪಕ್ಷೇತರರು ಸೇರಿ: 5,760

ಅಸೆಂಬ್ಲಿ ಕ್ಷೇತ್ರ : ಕೆ ಆರ್ ಪೇಟೆ
ಅಸೆಂಬ್ಲಿ ಕ್ಷೇತ್ರ : ಕೆ ಆರ್ ಪೇಟೆ
ಕ್ಷೇತ್ರದ ಕ್ರಮ ಸಂಖ್ಯೆ : 192
ಜೆಡಿಎಸ್ : 75,346
ಬಿಜೆಪಿ : 27,549
ನೋಟಾ: 1,879
ಎಲ್ಲಾ ಪಕ್ಷೇತರರು ಸೇರಿ: 9,544

ಅಸೆಂಬ್ಲಿ ಕ್ಷೇತ್ರ : ಕೆ ಆರ್ ನಗರ
ಅಸೆಂಬ್ಲಿ ಕ್ಷೇತ್ರ : ಕೆ ಆರ್ ನಗರ
ಕ್ಷೇತ್ರದ ಕ್ರಮ ಸಂಖ್ಯೆ : 211
ಜೆಡಿಎಸ್ : 55,947
ಬಿಜೆಪಿ : 28,559
ನೋಟಾ: 1,808
ಎಲ್ಲಾ ಪಕ್ಷೇತರರು ಸೇರಿ: 8,995
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications