ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯ ಲೋಕಸಭೆ ಉಪಚುನಾವಣೆ: ಜೆಡಿಎಸ್ ಅಭ್ಯರ್ಥಿಯಾಗಿ ಶಿವರಾಮೇಗೌಡ ಆಯ್ಕೆ

|
Google Oneindia Kannada News

Recommended Video

Mandya Lok Sabha By-elections 2018 : ಮಂಡ್ಯ ಉಪಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಘೋಷಿಸಿದ ಎಚ್ ಡಿ ದೇವೇಗೌಡ

ಮಂಡ್ಯ, ಅಕ್ಟೋಬರ್ 14: ಲೋಕಸಭೆ ಉಪಚುನಾವಣೆಗೆ ಮಂಡ್ಯದ ಜೆಡಿಎಸ್ ಅಭ್ಯರ್ಥಿಯಾಗಿ ಎಲ್.ಆರ್. ಶಿವರಾಮೇಗೌಡ ಅವರನ್ನು ಆಯ್ಕೆ ಮಾಡಲಾಗಿದೆ.

ಬೆಂಗಳೂರಿನಲ್ಲಿ ಪಕ್ಷದ ವರಿಷ್ಠ ಎಚ್‌.ಡಿ. ದೇವೇಗೌಡ ಅವರ ನಿವಾಸದಲ್ಲಿ ನಡೆ ಸಭೆಯಲ್ಲಿ ಎಲ್ಲ ಮುಖಂಡದ ಒಕ್ಕೊರಲ ಸಹಮತದೊಂದಿಗೆ ಶಿವರಾಮೇಗೌಡ ಅವರ ಹೆಸರನ್ನು ಅಂತಿಮಗೊಳಿಸಲಾಯಿತು.

ಮಂಡ್ಯ ಉಪ ಚುನಾವಣೆ : ಬಿಜೆಪಿ ಅಭ್ಯರ್ಥಿ ಆಯ್ಕೆ ಬಗ್ಗೆ ಅಸಮಾಧಾನ! ಮಂಡ್ಯ ಉಪ ಚುನಾವಣೆ : ಬಿಜೆಪಿ ಅಭ್ಯರ್ಥಿ ಆಯ್ಕೆ ಬಗ್ಗೆ ಅಸಮಾಧಾನ!

ಮಂಡ್ಯ ಲೋಕಸಭೆ ಉಪಚುನಾವಣೆಗೆ ಅಭ್ಯರ್ಥಿಗಳಾಗಿ ಲಕ್ಷ್ಮಿ ಅಶ್ವಿನ್ ಗೌಡ ಮತ್ತು ಎಲ್‌.ಆರ್. ಶಿವರಾಮೇಗೌಡ ಅವರ ನಡುವೆ ಪೈಪೋಟಿ ಏರ್ಪಟ್ಟಿತ್ತು. ಕೊನೆಯ ಕ್ಷಣದವರೆಗೂ ಲಕ್ಷ್ಮಿ ಅವರ ಹೆಸರೇ ಮುಂಚೂಣಿಯಲ್ಲಿತ್ತು. ಆದರೆ, ಸಭೆಯಲ್ಲಿ ಮುಖಂಡರು ಶಿವರಾಮೇಗೌಡ ಅವರತ್ತ ಒಲವು ತೋರಿದರು, ಇದಕ್ಕೆ ಅವಿರೋಧ ಬೆಂಬಲ ವ್ಯಕ್ತವಾಯಿತು.

ಕಣ್ಣೀರಿಟ್ಟ ಲಕ್ಷ್ಮಿ ಅಶ್ವಿನ್‌ಗೌಡ

ಕಣ್ಣೀರಿಟ್ಟ ಲಕ್ಷ್ಮಿ ಅಶ್ವಿನ್‌ಗೌಡ

ಟಿಕೆಟ್ ಸಿಗಲಿದೆ ಎಂಬ ಭಾರಿ ನಿರೀಕ್ಷೆ ಹಿಂದಿದ್ದ ಲಕ್ಷ್ಮಿ ಅಶ್ವಿನ್ ಗೌಡ ಅವರಿಗೆ ವರಿಷ್ಠರ ತೀರ್ಮಾನದಿಂದ ತೀವ್ರ ನಿರಾಸೆಯಾಗಿದೆ. ಸಭೆ ಬಳಿಕ ಅವರು ದೇವೇಗೌಡರ ನಿವಾಸದಿಂದ ಕಣ್ಣೀರಿಡುತ್ತಾ ಹೊರನಡೆದರು ಎನ್ನಲಾಗಿದೆ.

ಇತ್ತ ಶಿವರಾಮೇಗೌಡ ಅವರು ತಮ್ಮನ್ನು ಆಯ್ಕೆ ಮಾಡಿದ ಬಳಿಕ ದೇವೇಗೌಡರು ಹಾಗೂ ಅವರ ಪತ್ನಿ ಚೆನ್ನಮ್ಮ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು.

ಮೂರನೇ ಬಾರಿ ಟಿಕೆಟ್ ವಂಚನೆ

ಮೂರನೇ ಬಾರಿ ಟಿಕೆಟ್ ವಂಚನೆ

ಲಕ್ಷ್ಮಿ ಅವರು ಟಿಕೆಟ್ ವಂಚಿತರಾಗುತ್ತಿರುವುದು ಇದು ಮೂರನೇ ಬಾರಿ. ಈ ಮೊದಲು ಮೇಲುಕೋಟೆ ಹಾಗೂ ನಾಗಮಂಗಲ ವಿಧಾನಸಭೆ ಕ್ಷೇತ್ರಗಳ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವ ಆಸೆ ಹೊಂದಿದ್ದರು. ಈ ಎರಡೂ ಬಾರಿ ಅವರ ಅದೃಷ್ಟ ಕೈಕೊಟ್ಟಿತ್ತು. ಹೀಗಾಗಿ ಮೂರನೇ ಬಾರಿಯಾದರೂ ತಮ್ಮ ಆಸೆ ಈಡೇರಲಿದೆ ಎಂದು ಅವರು ನಿರೀಕ್ಷಿಸಿದ್ದರು. ಕೆಲ ಸ್ಥಳೀಯ ಮುಖಂಡರು ಸಹ ಅವರ ಪರವಾಗಿ ಸಭೆಯಲ್ಲಿ ಮಾತನಾಡಿದ್ದರು. ಆದರೆ, ಲೋಕಸಭೆ ಉಪಚುನಾವಣೆಯಲ್ಲಿಯೂ ಅವರು ಟಿಕೆಟ್ ವಂಚಿತರಾಗಿದ್ದಾರೆ.

ಮಂಡ್ಯ ಉಪ ಚುನಾವಣೆ : ಟಿಕೆಟ್ ಆಕಾಂಕ್ಷಿಗಳಿಗೆ ದೇವೇಗೌಡರ ಷರತ್ತು! ಮಂಡ್ಯ ಉಪ ಚುನಾವಣೆ : ಟಿಕೆಟ್ ಆಕಾಂಕ್ಷಿಗಳಿಗೆ ದೇವೇಗೌಡರ ಷರತ್ತು!

ಲಕ್ಷ್ಮಿಗೆ ಸೂಕ್ತ ಸ್ಥಾನಮಾನ

ಲಕ್ಷ್ಮಿಗೆ ಸೂಕ್ತ ಸ್ಥಾನಮಾನ

ಸಭೆ ಬಳಿಕ ಮಾತನಾಡಿದ ಸಚಿವ ಸಿ.ಎಸ್. ಪುಟ್ಟರಾಜು, ಶಿವರಾಮೇಗೌಡ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ನಮ್ಮಲ್ಲಿ ಯಾವುದೇ ಅಸಮಾಧಾನ ಅಥವಾ ಗೊಂದಲಗಳಿಲ್ಲ. ನಾಳೆ ಮಂಡ್ಯದಲ್ಲಿ ಶಿವರಾಮೇಗೌಡ ಅವರು ನಾಮಪತ್ರ ಸಲ್ಲಿಸಲಿದ್ದಾರೆ. ಲಕ್ಷ್ಮಿ ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡುವ ಕುರಿತು ಚರ್ಚೆಸಲಾಗಿದೆ ಎಂದರು.

ಮಂಡ್ಯ ಉಪಚುನಾವಣೆ: ಜೆಡಿಎಸ್, ಕಾಂಗ್ರೆಸ್ಸಿಗೆ ಬಿಜೆಪಿ ನೀಡಿದ ಅಚ್ಚರಿಯ ಆಫರ್ ಮಂಡ್ಯ ಉಪಚುನಾವಣೆ: ಜೆಡಿಎಸ್, ಕಾಂಗ್ರೆಸ್ಸಿಗೆ ಬಿಜೆಪಿ ನೀಡಿದ ಅಚ್ಚರಿಯ ಆಫರ್

ಉಪಚುನಾವಣೆಗೆ ಮಾತ್ರ

ಉಪಚುನಾವಣೆಗೆ ಮಾತ್ರ

ಜೆಡಿಎಸ್‌ ಈಗ ಆಯ್ಕೆ ಮಾಡಿರುವ ಅಭ್ಯರ್ಥಿ ಐದು ತಿಂಗಳು ಅಸ್ತಿತ್ವದಲ್ಲಿ ಇರುವ ಲೋಕಸಭೆಯ ಉಪಚುನಾವಣೆಗಾಗಿ ಮಾತ್ರ. ಗೆದ್ದರೂ ಸಾರ್ವತ್ರಿಕ ಚುನಾವಣೆಯಲ್ಲಿಯೂ ಇದೇ ಅಭ್ಯರ್ಥಿಗೆ ಟಿಕೆಟ್ ನೀಡುವುದು ಅನುಮಾನ. ಸಾರ್ವತ್ರಿಕ ಚುನಾವಣೆಗೆ ಇಡೀ ಕಾರ್ಯತಂತ್ರ ಬದಲಾಗಲಿದೆ. ಆಗ ಮಂಡ್ಯ ಕ್ಷೇತ್ರದಿಂದ ಬೇರೆ ಅಭ್ಯರ್ಥಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚು.

ಬಿಜೆಪಿ ಈಗಾಗಲೇ ತನ್ನ ಅಭ್ಯರ್ಥಿಯನ್ನಾಗಿ ಡಾ. ಸಿದ್ಧರಾಮಯ್ಯ ಅವರ ಹೆಸರನ್ನು ಪ್ರಕಟಿಸಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಬೆಂಬಲ ಘೋಷಿಸಿರುವ ಕಾಂಗ್ರೆಸ್, ಮಂಡ್ಯಕ್ಕೆ ಸಂಬಂಧಿಸಿದಂತೆ ಇದುವರೆಗೂ ಯಾವುದೇ ಘೋಷಣೆ ಮಾಡಿಲ್ಲ. ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಂಬಂಧ ಪಕ್ಷದಲ್ಲಿ ತೀವ್ರ ಒತ್ತಡವಿದೆ.

ರಮ್ಯಾಗೆ ಚಾನ್ಸ್ ಕೊಡಿ, ಇಲ್ಲದಿದ್ದರೆ ನನಗಾದರೂ ಬಿಡಿ: ಸ್ಪರ್ಧೆಗೆ ರಂಜಿತಾ ಸಿದ್ಧರಮ್ಯಾಗೆ ಚಾನ್ಸ್ ಕೊಡಿ, ಇಲ್ಲದಿದ್ದರೆ ನನಗಾದರೂ ಬಿಡಿ: ಸ್ಪರ್ಧೆಗೆ ರಂಜಿತಾ ಸಿದ್ಧ

English summary
LR Shivaramegowda has been named as the candidate from JDS in Mandya Lok Sabha constituency for By elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X