ಮಂಡ್ಯ ರಾಜಕಾರಣ ಬೆಂಗಳೂರಿಗೆ ಶಿಫ್ಟ್ : ಕುತೂಹಲ ಮೂಡಿಸಿದ ಸಭೆ!

ಮಂಡ್ಯ, ಮಾರ್ಚ್ 11 : ಮಂಡ್ಯದ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ಬೆಂಗಳೂರಿನಲ್ಲಿ ನಡೆಸಿದ ಸಭೆ ಕುತೂಹಲಕ್ಕೆ ಕಾರಣವಾಗಿದೆ. ಸಭೆಯಲ್ಲಿ ಬಿಜೆಪಿಯ ಹಾಲಿ ಮತ್ತು ಮಾಜಿ ಶಾಸಕರು ಇದ್ದರು ಎಂಬುದು ಮಂಡ್ಯ ರಾಜಕೀಯಕ್ಕೆ ಹೊಸ ತಿರುವುದ ನೀಡುವ ಸಾಧ್ಯತೆ ಇದೆ.
ಸೋಮವಾರ ಮಂಡ್ಯ ಕ್ಷೇತ್ರದ ಸಂಸದ ಎಲ್.ಆರ್.ಶಿವರಾಮೇಗೌಡ ಅವರು ಜಿಲ್ಲೆಯ ಕಾಂಗ್ರೆಸ್ ನಾಯಕರು, ಬಿಜೆಪಿ ಶಾಸಕರ ಜೊತೆ ಸಭೆ ನಡೆಸಿದ್ದಾರೆ. ಬೆಂಗಳೂರಿನ ಗೋಲ್ಡ್ ಫಿಂಚ್ ಹೋಟೆಲ್‌ನಲ್ಲಿ ಮಧ್ಯಾಹ್ನ ಈ ಸಭೆ ನಡೆದಿದೆ.
ಮಾರ್ಚ್ 18ಕ್ಕೆ ನನ್ನ ರಾಜಕೀಯ ನಿರ್ಧಾರ ಪ್ರಕಟಿಸುತ್ತೇನೆ: ಸುಮಲತಾ
ಎಲ್.ಆರ್.ಶಿವರಾಮೇಗೌಡ, ಚಲುವರಾಯಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ಮಾಗಡಿ ಮಾಜಿ ಶಾಸಕ ಬಾಲಕೃಷ್ಣ, ಬಿಜೆಪಿ ಶಾಸಕ ರಾಜೂಗೌಡ ಮುಂತಾದ ನಾಯಕರು ಮಧ್ಯಾಹ್ನ ಊಟದ ಜೊತೆಗೆ ಹೋಟೆಲ್‌ನಲ್ಲಿ ಸಭೆ ನಡೆಸಿದ್ದಾರೆ.
ಸುಮಲತಾ ಗೆಲ್ಲುವ ಆಸೆಯನ್ನು ಹೊಸಕಿ ಹಾಕಿದರೇ ಡಿಕೆ ಶಿವಕುಮಾರ್?
ಸಭೆಯ ಬಳಿಕ ಮಾತನಾಡಿದ ಎಲ್.ಆರ್.ಶಿವರಾಮೇಗೌಡ ಅವರು, 'ನಾನು ಗೋಲ್ಡ್ ಫಿಂಚ್ ಹೋಟೆಲ್‌ಗೆ ಊಟಕ್ಕೆ ಬಂದಿದ್ದೆ. ಚಲುವರಾಯಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ ಮುಂತಾದ ನಾಯಕರು ಸಿಕ್ಕರು.
ಉಭಯ ಕುಶಲೋಪರಿ ವಿಚಾರಿಸಿದೆ' ಎಂದು ಹೇಳಿದರು.
ರಾತ್ರೋರಾತ್ರಿ ಬಿಜೆಪಿ ಮುಖಂಡರನ್ನು ಭೇಟಿಯಾದ್ರಾ ಸುಮಲತಾ? ಬಿಜೆಪಿಗೆ ಸೇರ್ತಾರಾ?

ದೇವೇಗೌಡರ ಕುಟುಂಬ ಸದಸ್ಯ
'ನಾನು ಎಚ್.ಡಿ.ದೇವೇಗೌಡ ಅವರ ಕುಟುಂಬದ ಸದಸ್ಯ, ಯಾವುದೇ ಕಾರಣಕ್ಕೂ ಮಾರಾಟವಾಗುವುದಿಲ್ಲ. ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡುವುದರಲ್ಲಿ ಯಾವುದೇ ಬದಲಾವಣೆ ಇಲ್ಲ' ಎಂದು ಸ್ಪಷ್ಟಪಡಿಸಿದರು.

ಇದೊಂದು ಭೇಟಿ ಮಾತ್ರ
ಸಭೆಯ ಬಳಿಕ ಮಾತನಾಡಿದ ಸುರಪುರ ಕ್ಷೇತ್ರದ ಬಿಜೆಪಿ ಶಾಸಕ ರಾಜೂಗೌಡ ಅವರು, 'ಯಾವುದೇ ರಾಜಕೀಯ ಮಾತುಕತೆಯನ್ನು ನಡೆಸಿಲ್ಲ. ಇದೊಂದು ಸಹಜ ಭೇಟಿ ಮಾತ್ರ' ಎಂದು ಹೇಳಿದರು.

ನಿಖಿಲ್ ಕುಮಾರಸ್ವಾಮಿ ವಿರುದ್ಧ ಸಭೆ?
2019ರ ಲೋಕಸಭಾ ಚುನಾವಣೆಗೆ ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿಯುವುದನ್ನು ಹಲವು ನಾಯಕರು ವಿರೋಧಿಸುತ್ತಿದ್ದಾರೆ. ಈ ನಾಯಕರು ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಬಹುದು ಎಂಬ ನಿರೀಕ್ಷೆ ಇದೆ. ಆದ್ದರಿಂದ, ಈ ಸಭೆ ಕುತೂಹಲಕ್ಕೆ ಕಾರಣವಾಗಿದೆ.

ಬಿಜೆಪಿ ಅಭ್ಯರ್ಥಿ ಹಾಕಬೇಕು
ಸೋಮವಾರ ಬೆಳಗ್ಗೆ ಬಿ.ಎಸ್.ಯಡಿಯೂರಪ್ಪ ಅವರು, 'ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಬಿಜೆಪಿಯಿಂದ ಕಣಕ್ಕಿಳಿಯುತ್ತಿಲ್ಲ, ಬೇರೆ ಅಭ್ಯರ್ಥಿ ಹಾಕಬೇಕು' ಎಂದು ಹೇಳಿದ್ದರು. ಮಧ್ಯಾಹ್ನ ನಡೆದ ಸಭೆಯಲ್ಲಿ ಬಿಜೆಪಿ ನಾಯಕರು ಇದ್ದದ್ದು ಕುತೂಹಲ ಮೂಡಿಸಿದೆ.
|
ಮಂಡ್ಯ ಜೆಡಿಎಸ್‌ಗೆ, ನಮ್ಮ ಬೆಂಬಲವಿಲ್ಲ
ದೆಹಲಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ಸುಮಲತಾ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸುವುದಿಲ್ಲ ಮತ್ತು ಯಾವ ಕಾಂಗ್ರೆಸ್ ನಾಯಕರು ಸುಮಲತಾ ಅವರನ್ನು ಬೆಂಬಲಿಸುತ್ತಿಲ್ಲ' ಎಂದು ಟ್ವೀಟ್ ಮಾಡಿದ್ದರು. ಆದರೆ, ಇಲ್ಲಿ ಕಾಂಗ್ರೆಸ್ ನಾಯಕರು ಸಭೆ ನಡೆಸುತ್ತಿದ್ದಾರೆ.