Get Updates
Get notified of breaking news, exclusive insights, and must-see stories!

ಮಂಡ್ಯ: ದೆವ್ವಗಳ ಜತೆ ಮೋದಿ ಹೋಲಿಕೆ, ರಮ್ಯಾಗೆ ಪ್ಯಾಂಪರ್ಸ್ ಉಡುಗೊರೆ

ಮಂಡ್ಯ, ನವೆಂಬರ್ 2: ಪ್ರಧಾನಿ ನರೇಂದ್ರ ಮೋದಿ ಅವರ ನೋಟು ನಿಷೇಧ ಕ್ರಮವನ್ನು ವಿರೋಧಿಸುವ ಸಲುವಾಗಿ ಅವರನ್ನು ಭೂತಕ್ಕೆ ಹೋಲಿಸಿ ಮಾಜಿ ಸಂಸದೆ ರಮ್ಯಾ ಟ್ವೀಟ್ ಮಾಡಿದ್ದರು. ಇದೀಗ ಅವರಿಗೆ ತಾಯತ ಹಾಗೂ ಪ್ಯಾಂಪರ್ಸ್ ಕಳುಹಿಸಿ ಕೊಡುವ ಮೂಲಕ ಮಂಡ್ಯ ಬಿಜೆಪಿ ಕಾರ್ಯಕರ್ತರು ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ.

ಒಂದು ಜವಾಬ್ದಾರಿಯುತ ಸ್ಥಾನದಲ್ಲಿರುವ ಪ್ರಧಾನಿ ಮೋದಿ ಅವರನ್ನು ಭೂತಕ್ಕೆ ಹೋಲಿಸಿ ಟ್ವೀಟ್ ಮಾಡಿದ್ದ ರಮ್ಯಾ ಅವರ ಕ್ರಮವನ್ನು ಪ್ರತಿಭಟನಕಾರರು ತೀವ್ರವಾಗಿ ಖಂಡಿಸಿದರು.

Mandya BJP leaders sent Pamper to Ramya after she compares Modi with ghosts

ಪ್ರಧಾನಿ ಮೋದಿ ಅವರು ನೋಟು ನಿಷೇಧ ಮಾಡಿರುವುದರಿಂದ ಭಯೋತ್ಪಾದನೆಗೆ ಹಣವನ್ನು ಕೊಡುತ್ತಿದ್ದ ದುಷ್ಕರ್ಮಿಗಳು ಹಾಗೂ ಕಪ್ಪು ಹಣವನ್ನು ಸಂಗ್ರಹಿಸಿದ್ದ ಸಿರಿವಂತರಿಗೆ ನಿಜವಾಗಿಯೂ ಭೂತವಾಗಿ ಕಾಣಿಸುತ್ತಿದ್ದಾರೆ. ಅದರಿಂದ ನಾವು ಅವರಿಗೆ ಪ್ಯಾಂಪರ್ಸ್ ಹಾಗೂ ದೇವರ ತಾಯತವನ್ನು ಕಳುಹಿಸಿಕೊಡುತ್ತಿರುವುದಾಗಿ ಹೇಳಿದರು.

"ನೋಟು ನಿಷೇಧ ಮಾಡಿರುವುದರಿಂದ ಭಯೋತ್ಪಾದನೆ, ಮತಾಂತರಕ್ಕೆ ಹರಿದು ಬರುತ್ತಿದ್ದ ಬೇನಾಮಿ ಹಣಕ್ಕೆ ಕಡಿವಾಣ ಬಿದ್ದಿದೆ. ಆರ್ಥಿಕ ತಜ್ಞರು, ವಿಶ್ವಸಂಸ್ಥೆ ನಿಷೇಧದ ನಿರ್ಧಾರವನ್ನು ಮೆಚ್ಚಿಕೊಂಡಿದ್ದಾರೆ. ಹೀಗಿರುವಾಗ ರಮ್ಯಾ ಅವರಿಗೆ ಭಯ ಯಾಕೆ? ಈ ಕೂಡಲೇ ರಮ್ಯಾ ಅವರು ತಮ್ಮ ಹೇಳಿಕೆಗೆ ಕ್ಷಮೆ ಕೋರಬೇಕು," ಎಂದು ಪ್ರತಿಬಟನಾಕಾರರು ಆಗ್ರಹಿಸಿದರು.

Mandya BJP leaders sent Pamper to Ramya after she compares Modi with ghosts

ಒಂದು ವೇಳೆ ನೋಟು ನಿಷೇಧದಿಂದ ಯಾರಿಗಾದರೂ ಭಯ ಆದರೆ ಅವರಿಗೆ ಕೊಡಲು ಪ್ಯಾಂಪರ್, ತಾಯತಗಳನ್ನು ಅಂಚೆ ಮೂಲಕ ರಮ್ಯಾ ಅವರಿಗೆ ಕಳುಹಿಸಿದ್ದೇವೆ ಎಂದು ಪ್ರತಿಭಟನಾಕಾರರು ತಿಳಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+