ಮಂಡ್ಯದಲ್ಲಿ ಬಾಲಕಿ ಮೇಲೆ ಅತ್ಯಾಚಾರ, ಮತಾಂತರಕ್ಕೆ ಒತ್ತಡ ಆರೋಪ: ವ್ಯಕ್ತಿ ಬಂಧನ

ಮಂಡ್ಯ, ನ. 24: ನಾಗಮಂಗಲದಲ್ಲಿ ವ್ಯಕ್ತಿಯೊಬ್ಬ 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಇಸ್ಲಾಂಗೆ ಮತಾಂತರಗೊಳ್ಳುವಂತೆ ಬ್ಲಾಕ್ ಮೇಲ್ ಮಾಡಿದ ಘಟನೆ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

13 ವರ್ಷದ ಬಾಲಕಿಯ ಆಕ್ಷೇಪಾರ್ಹ ಚಿತ್ರಗಳನ್ನು ಇಟ್ಟುಕೊಂಡು ಮದುವೆಯಾಗಲು ಇಸ್ಲಾಂಗೆ ಮತಾಂತರವಾಗುವಂತೆ ಒತ್ತಾಯಿಸಿದ ಆರೋಪದ ಮೇಲೆ ಮತಾಂತರ ವಿರೋಧಿ ಕಾನೂನು ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿಯನ್ನು 25 ವರ್ಷದ ಯೂನಸ್ ಪಾಷಾ ಅಲಿಯಾಸ್ ಫಯಾಜ್ ಮೊಹಮ್ಮದ್ ಎಂದು ಗುರುತಿಸಲಾಗಿದ್ದು, ಬಾಲಕಿಯ ಪಕ್ಕದ ಮನೆಯಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ.

Man Rapes Minor Girl, Blackmails to Conversion, Arrested in Mandya

ಆರೋಪಿ ಯೂನಸ್‌ಗೆ ಈಗಾಗಲೇ ಮದುವೆಯಾಗಿದ್ದು, ಮಗುವಿನ ತಂದೆಯಾಗಿರುವ ಈತ ಬಾಲಕಿಗೆ ಫೋನ್ ಒಂದನ್ನು ಉಡುಗೊರೆಯಾಗಿ ನೀಡಿದ್ದಾನೆ. ಬಳಿಕ ವಿಡಿಯೋ ಕರೆಗಳಲ್ಲಿ ಮಾತನಾಡಲು ಪ್ರಾರಂಭಿಸಿದ್ದಾರೆ. ಆತ ಮೊಬೈಲ್ ಕೊಡಿಸಿರುವುದು ಬಾಲಕಿಯ ಕುಟುಂಬದವರಿಗೆ ತಿಳಿದಿರಲಿಲ್ಲ.

ಒಂದು ದಿನ, ಆರೋಪಿ ವಿಡಿಯೋ ಕರೆಯಲ್ಲಿ ಬಾಲಕಿಯ ಆಕ್ಷೇಪಾರ್ಹ ದೃಶ್ಯಗಳನ್ನು ರೆಕಾಡ್‌ ಮಾಡಿಕೊಂಡು, ಆಕೆಯ ಜೊತೆಗೆ ದೈಹಿಕ ಸಂಬಂಧ ಬೆಳೆಸಲು ಬಳಸಿಕೊಳ್ಳಲು ಒತ್ತಡ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿ ನಿರಾಕರಿಸಿದಾಗ, ಅವರ ಖಾಸಗಿ ಮಾತುಕತೆಗಳು ಮತ್ತು ಅಶ್ಲೀಲ ಫೋಟೋಗಳನ್ನು ಆಕೆಯ ಕುಟುಂಬಕ್ಕೆ ತೋರಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ನವೆಂಬರ್ 8 ರಂದು ಬಾಲಕಿಯ ಮನೆಯವರು ನಾಲ್ಕು ದಿನಗಳ ಕಾಲ ಶಿರಡಿಗೆ ಹೋಗಿದ್ದು, ಬಾಲಕಿಯನ್ನು ಅಜ್ಜಿಯೊಂದಿಗೆ ಬಿಟ್ಟು ಹೋಗಿದ್ದಾರೆ. ಆರೋಪಿ ಪರಿಸ್ಥಿತಿಯ ಲಾಭ ಪಡೆದು ನವೆಂಬರ್ 10 ರಂದು ಬಾಲಕಿಯ ಅಜ್ಜಿಗೆ ನಿದ್ದೆ ಮಾತ್ರೆಗಳನ್ನು ಆಹಾರದೊಂದಿಗೆ ಬೆರೆಸಿ ಬಲವಂತವಾಗಿ ತಿನ್ನಿಸಿದ್ದಾರೆ. ಆಕೆ ಪ್ರಜ್ಞೆ ತಪ್ಪಿದಾಗ ಆರೋಪಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ.

Man Rapes Minor Girl, Blackmails to Conversion, Arrested in Mandya

ನವೆಂಬರ್ 12 ರಂದು ಶಿರಡಿಯಿಂದ ಹಿಂದಿರುಗಿದ ನಂತರ ಅವರು ಬಾಲಕಿಯ ನಡವಳಿಕೆಯಲ್ಲಿ ಬದಲಾವಣೆಗಳನ್ನು ಕಂಡಿದ್ದಾರೆ. ಬಳಿಕ ಬಾಲಕಿ ನವೆಂಬರ್ 18 ರಂದು ತನ್ನ ಕುಟುಂಬಕ್ಕೆ ನಡೆದ ಘಟನೆಯನ್ನು ವಿವರಿಸಿದ್ದಾರೆ. ನವೆಂಬರ್ 19 ರಂದು ಬಾಲಕಿಯ ತಂದೆ ಯೂನಸ್ ವಿರುದ್ಧ ಅತ್ಯಾಚಾರ ಮತ್ತು ಬ್ಲ್ಯಾಕ್ ಮೇಲ್ ಪ್ರಕರಣ ದಾಖಲಿಸಿದ್ದಾರೆ.

ಇಸ್ಲಾಂಗೆ ಮತಾಂತರಗೊಂಡರೆ ಮದುವೆಯಾಗುತ್ತೇನೆ ಎಂದು ಬಾಲಕಿಗೆ ಪತ್ತಡ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.

"8 ನೇ ತರಗತಿಯ ವಿದ್ಯಾರ್ಥಿನಿ ತನ್ನ 13 ವರ್ಷದ ಮಗಳಿಗೆ ತಮ್ಮ ಮನೆಯ ಎದುರು ವಾಸಿಸುತ್ತಿದ್ದ ವ್ಯಕ್ತಿಯೊಬ್ಬರು ಬ್ಲಾಕ್‌ಮೇಲ್ ಮಾಡಿದ್ದಾರೆ. ಮನೆಯಲ್ಲಿ ಒಬ್ಬಳೇ ಇದ್ದ ದಿನ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಲ್ಲದೆ ಆಕೆಯನ್ನು ಮದುವೆಯಾಗಬೇಕಿದ್ದರೇ ಮತಾಂತರವಾಗುವಂತೆ ಬಲವಂತ ಮಾಡಿದ್ದಾರೆ ಎಂದು ಬಾಲಕಿಯ ತಂದೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ನಾವು ಆರೋಪಿಯನ್ನು ಬಂಧಿಸಿದ್ದೇವೆ, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ದೂರಿನ ಎಲ್ಲಾ ಆಯಾಮಗಳನ್ನು ತನಿಖೆ ನಡೆಸಲಾಗುತ್ತಿದೆ" ಎಂದು ಮಂಡ್ಯದ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+