ಮಳವಳ್ಳಿ: ಕತ್ತು ಕೊಯ್ದು ಪತ್ನಿ ಕೊಂದ ಪತಿ

By: ನಮ್ಮ ಪ್ರತಿನಿಧಿ
Subscribe to Oneindia Kannada

ಮಳವಳ್ಳಿ, ಜುಲೈ 25: ಶೀಲ ಶಂಕಿಸಿ ಪತ್ನಿಯ ಕತ್ತು ಕೊಯ್ದು ಪತಿಯೇ ಹತ್ಯೆ ಮಾಡಿರುವ ಮಾಡಿರುವ ಘಟನೆ ತಾಲೂಕಿನ ಹಲಗೂರು ಸಮೀಪದ ದೊಡ್ಡೇಗೌಡನದೊಡ್ಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಶಿವಣ್ಣ ಎಂಬ ಆರೋಪಿಯೇ ತನ್ನ ಪತ್ನಿ ಕಮಲಮ್ಮ (28) ನನ್ನು ಹತ್ಯೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ.

ಕಮಲಮ್ಮ ಬೇರೆ ಪುರುಷನೊಬ್ಬನೊಂದಿಗೆ ಸಂಬಂಧವಿಟ್ಟುಕೊಂಡಿದ್ದಾಳೆ ಎಂಬ ಅನುಮಾನ ಶಿವಣ್ಣನಲ್ಲಿ ಮೂಡಿತ್ತು. ಇದೇ ವಿಚಾರವಾಗಿ ಇಬ್ಬರ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.

ಭಾನುವಾರ ದೇವಸ್ಥಾನಕ್ಕೆ ಹೋಗುವುದಾಗಿ ಹೇಳಿ ಹೋಗಿದ್ದ ಕಮಲಮ್ಮ, ಸಂಜೆಯಾದರೂ ಮನೆಗೆ ಬಾರದಿರುವುದು ಶಿವಣ್ಣನ ಅನುಮಾನಕ್ಕೆ ಮತ್ತಷ್ಟು ಇಂಬು ನೀಡಿತ್ತು.

Malavalli : Man kills his wife over illicit relationship suspect

ಇದರಿಂದ ಕೋಪಗೊಂಡ ಶಿವಣ್ಣ ಈಕೆಯನ್ನು ಹತ್ಯೆಗೈಯುವ ನಿರ್ಧರಿಸಿ, ಸೋಮವಾರ ಬೆಳಗ್ಗೆ 7.30ರ ಸುಮಾರಿಗೆ ಜಮೀನಿನ ಬಳಿ ಕರೆದೊಯ್ದು ಕುತ್ತಿಗೆಯನ್ನು ಕೊಯ್ದು ಭೀಕರವಾಗಿ ಹತ್ಯೆ ಮಾಡಿದ್ದಾನೆ. ನಂತರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.

ಕೂಡಲೇ ಸ್ಥಳಕ್ಕೆ ಧಾವಿಸಿದ ಹಲಗೂರು ಸಬ್‍ಇನ್ಸ್ ಪೆಕ್ಟರ್ ಗೋವಿಂದರಾಜು ಹಾಗೂ ಸಿಬ್ಬಂದಿ ಶವದ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Malavalli : A man kills his wife over suspicious of illicit relationship in Halaguru, Doddegowdandoddi village. Malavalli police have arrested the accused Shivanna for killing Kamalamma(28).
Please Wait while comments are loading...