ನಿಖಿಲ್ ಹೆಸರಿಗೆ ಬಂತು 'ಮಂಡ್ಯ ಸಂಸದ' ಬೋರ್ಡ್

Recommended Video

      Mandya : ನಿಖಿಲ್ ಕುಮಾರಸ್ವಾಮಿ ಉಡುಗೊರೆಯಾಗಿ ಬಂತು ಮಂಡ್ಯ ಸಂಸದನ ಬೋರ್ಡ್ | Oneindia Kannada

      ಮಂಡ್ಯ, ಏಪ್ರಿಲ್ 19: ರಾಜ್ಯದಲ್ಲಿ 28 ಕ್ಷೇತ್ರಗಳಲ್ಲಿ ಲೋಕಸಭೆ ಚುನಾವಣೆ ನಡೆಯುತ್ತಿದ್ದರೂ, ಯಾವ ಕ್ಷೇತ್ರಕ್ಕೂ ಸಿಗದ ಪ್ರಚಾರ ಮತ್ತು ಮನ್ನಣೆ ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ದೊರೆತಿದೆ. ಗುರುವಾರ ಮತದಾನ ಪೂರ್ಣಗೊಂಡ ಬಳಿಕವಷ್ಟೇ ಈಗ ಬೇರೆ ಕ್ಷೇತ್ರಗಳತ್ತ ಎಲ್ಲರ ಗಮನ ಹರಿಯುತ್ತಿದೆ. ಹಾಗೆಂದು ಮಂಡ್ಯದೆಡೆಗಿನ ಕುತೂಹಲ ಕಡಿಮೆಯಾಗಿಲ್ಲ. ಮತ ಎಣಿಕೆಗೆ ಇನ್ನು ಒಂದು ತಿಂಗಳು ಬಾಕಿ ಇದೆ. ಅಲ್ಲಿಯವರೆಗೂ ಮಂಡ್ಯದ ಬಿಸಿ ಆರುವುದಿಲ್ಲ.

      ಮಂಡ್ಯದಲ್ಲಿ ಯಾರು ಗೆಲ್ಲುತ್ತಾರೆ ಎಂಬ ಲೆಕ್ಕಾಚಾರಗಳು ತೀವ್ರವಾಗಿದೆ. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ತಮ್ಮ ಮಗ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸಲೇಬೇಕೆಂದು ಪಣತೊಟ್ಟು ಮಂಡ್ಯದಲ್ಲಿ ಪ್ರಚಾರ ನಡೆಸಿದ್ದಾರೆ. ಇದು ಅವರ ಪಾಲಿಗೆ ಅತ್ಯಂತ ಪ್ರತಿಷ್ಠೆಯ ಚುನಾವಣೆ. ಹಾಗೆಂದು ಅವರಿಗೆ ಮಂಡ್ಯದಲ್ಲಿನ ಗೆಲುವು ಸುಲಭವಲ್ಲ. ಅವರ ಎದುರು ಇರುವುದು ಪಕ್ಷೇತರ ಅಭ್ಯರ್ಥಿಯಾಗಿ ನಿಂತಿರುವ ಸುಮಲತಾ ಅಂಬರೀಷ್. ಅವರಿಗೆ ಬಿಜೆಪಿಯ ಬೆಂಬಲ ದೊರಕಿದೆ. ಕಾಂಗ್ರೆಸ್‌ನ ಅತೃಪ್ತ ಮುಖಂಡರು ಕೂಡ ಅವರೊಂದಿಗೆ ಕೈ ಜೋಡಿಸಿದ್ದಾರೆ. ಹೀಗಾಗಿ ಇಲ್ಲಿ ನಿಕಟ ಪೈಪೋಟಿ ಇದೆ.

      ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

      ಆದರೆ, ಜೆಡಿಎಸ್ ಕಾರ್ಯಕರ್ತರು ಈಗಾಗಲೇ ಸಂಭ್ರಮಾಚರಣೆ ಶುರುಮಾಡಿದ್ದಾರೆ. ನಿಖಿಲ್ ಕುಮಾರಸ್ವಾಮಿ ಗೆಲುವು ನಿಶ್ಚಿತ ಎಂದು ಖುಷಿಪಡುತ್ತಿದ್ದಾರೆ. ನಿಖಿಲ್ ಅವರು ಈಗಾಗಲೇ ಅಲ್ಲಿ ಕಚೇರಿ ಆರಂಭಿಸಲು ಸ್ಥಳ ಹುಡುಕುತ್ತಿದ್ದಾರೆ ಎನ್ನಲಾಗಿದೆ. ಇದರ ನಡುವೆಯೇ ಅಭಿಮಾನಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅವರ ಹೆಸರಿನಲ್ಲಿ ನಾಮಫಲಕವನ್ನೂ ಬರೆಸಿದ್ದಾರೆ.

      ಜೆಡಿಎಸ್ ಬೆಂಬಲಿಗರು ಇದನ್ನು ನೋಡಿ ಸಂಭ್ರಮಿಸುತ್ತಿದ್ದರೆ, ಸುಮಲತಾ ಅಂಬರೀಷ್ ಬೆಂಬಲಿಗರು ಅದನ್ನು ಲೇವಡಿ ಮಾಡುತ್ತಿದ್ದಾರೆ.

      ಚುನಾವಣಾ ಪ್ರಕ್ರಿಯೆ ನಡೆದು ಒಂದು ದಿನದಲ್ಲಿಯೇ ನಿಖಿಲ್ ಹೆಸರಿನಲ್ಲಿ ಫಲಕ ತಯಾರಾಗಿದೆ. ಮತ ಎಣಿಕೆಗೆ ಇನ್ನೂ ಒಂದು ತಿಂಗಳು ಬಾಕಿ ಉಳಿದಿದ್ದು, ಫಲಿತಾಂಶ ಬರುವ ವೇಳೆಗೆ ಇನ್ನೂ ಯಾವ ಯಾವ ಘಟನೆಗಳು ನಡೆಯಲಿವೆಯೋ ಕಾದು ನೋಡಬೇಕು.

      ಅಭಿಮಾನಿ ಕೊಟ್ಟ ಉಡುಗೊರೆ

      ಅಭಿಮಾನಿ ಕೊಟ್ಟ ಉಡುಗೊರೆ

      'ಶ್ರೀ ನಿಖಿಲ್ ಕೆ. ಸಂಸದರು, ಮಂಡ್ಯ ಲೋಕಸಭಾ ಕ್ಷೇತ್ರ' ಎಂದು ಬರೆಯಲಾಗಿರುವ ಫಲಕವನ್ನು ಅಭಿಮಾನಿಯೊಬ್ಬರು ನಿಖಿಲ್ ಕುಮಾರಸ್ವಾಮಿ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ಫಲಕದ ಚಿತ್ರವನ್ನು ಜೆಡಿಎಸ್ ತನ್ನ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿದೆ.

      ನಿಮ್ಮ ರಾಜಕೀಯ ಜ್ಞಾನವನ್ನು ಒರೆಗೆ ಹಚ್ಚುವ ರಸಪ್ರಶ್ನೆ

      ಎಡಿಟ್ ಮಾಡಬಹುದು

      ಎಡಿಟ್ ಮಾಡಬಹುದು

      ನಿಖಿಲ್ ಹೆಸರಿನಲ್ಲಿ ಫಲಕ ತಯಾರಾಗಿದ್ದರೆ, ಅತ್ತ ಸುಮಲತಾ ಅಂಬರೀಷ್ ಅವರ ಬೆಂಬಲಿಗರು, ನಿಖಿಲ್ ಹೆಸರಿನ ಜಾಗದಲ್ಲಿ ಸುಮಲತಾ ಅವರ ಹೆಸರನ್ನು ಬರೆದಿದ್ದಾರೆ. ಫಲಕವನ್ನು ಎಡಿಟ್ ಮಾಡಿ ಅದರಲ್ಲಿ ಶ್ರೀಮತಿ ಸುಮಲತಾ ಅಂಬರೀಷ್ ಸಂಸದರು, ಮಂಡ್ಯ ಲೋಕಸಭಾ ಕ್ಷೇತ್ರದ ಎಂದು ತಿದ್ದಿರುವ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ.

      ಕೂಸು ಹುಟ್ಟುವ ಮುನ್ನವೇ..

      ಕೂಸು ಹುಟ್ಟುವ ಮುನ್ನವೇ..

      ಅದಕ್ಕೆ ಹಿರಿಯರು ಗಾದೆ ಮಾತು ಮಾಡಿರೋದು ಕೂಸು ಹುಟ್ಟುವ ಮೊದಲೇ ಕುಲಾಯಿ ಹೋಲಿಸಿಂದತೆ ಆಯಿತು ನಿಮ್ಮ ಕತೆ ಎಂದು ಚಿನ್ನು ಎಂಬುವವರು ಕಾಮೆಂಟ್ ಮಾಡಿದ್ದಾರೆ. ಇದೇ ರೀತಿ ಅನೇಕರು ಜೆಡಿಎಸ್ ಅಭಿಮಾನಿಗಳ ಆತುರವನ್ನು ವ್ಯಂಗ್ಯವಾಡಿದ್ದಾರೆ.

      ಅಭಿಮಾನಿಗಳಿಗೆ ಸೂಪರ್

      ಅಭಿಮಾನಿಗಳಿಗೆ ಸೂಪರ್

      ಒಮ್ಮೆ ನಿಖಿಲ್ ಗೆದ್ದರೆ 'ನಿಖಿಲ್ ಎಲಿದ್ದೀಯಪ್ಪಾ' ಅಂತ ಅಣಕ ಅಡುತ್ತಿದ್ದ ಹುಚ್ಚು ಕಮಂಗಿಗಳು ಎದೆ ಬಡಿದುಕೊಂಡು ಸಾಯುತ್ತಾರೆ ಎಂದು ಜೆಡಿಎಸ್ ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ಜೆಡಿಎಸ್ ಅಭಿಮಾನಿಗಳಿಗೆ ಈ ಫಲಕ ಸಂತೋಷ ನೀಡಿದೆ. ಈ ಫೋಟೊಗೆ ಅವರೆಲ್ಲರೂ ಸೂಪರ್ ಎನ್ನುತ್ತಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+