ಕೆ.ಆರ್.ಪೇಟೆಯಲ್ಲಿ ದುಷ್ಕರ್ಮಿಗಳಿಂದ ವಕೀಲನ ಹತ್ಯೆ:ಸಹೋದರನ ಮೇಲೆ ಶಂಕೆ

ಮಂಡ್ಯ, ಮಾರ್ಚ್ 27: ವಕೀಲನೊಬ್ಬನ ಮನೆಗೆ ನುಗ್ಗಿದ ದುಷ್ಕರ್ಮಿಗಳ ಗುಂಪು ಮಾರಣಾಂತಿಕ ಹಲ್ಲೆ ನಡೆಸಿದ್ದಲ್ಲದೆ, ಉಸಿರುಗಟ್ಟಿಸಿ ಹತ್ಯೆ ಮಾಡಿರುವ ಘಟನೆ ಕೆ.ಆರ್.ಪೇಟೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ನಾಗರಘಟ್ಟ ಗ್ರಾಮದಲ್ಲಿ ನಡೆದಿದೆ.

ನಾಗರಘಟ್ಟ ಗ್ರಾಮದ ದೇವರಾಜೇಗೌಡ ಎಂಬುವರ ಪುತ್ರ ಸತೀಶ್(40) ಹತ್ಯೆಗೀಡಾದ ವಕೀಲ. ಇವರು ಹಾಸನದ ಚನ್ನರಾಯಪಟ್ಟಣದಲ್ಲಿ ಕುಟುಂಬ ಸಮೇತ ವಾಸವಿದ್ದುಕೊಂಡು ಚನ್ನರಾಯಪಟ್ಟಣ, ಬೆಂಗಳೂರು, ಕೆ.ಆರ್.ಪೇಟೆ ತಾಲೂಕುಗಳಲ್ಲಿ ವಕೀಲ ವೃತ್ತಿ ಮಾಡುತ್ತಿದ್ದರಲ್ಲದೆ, ಆಗಾಗ್ಗೆ ತನ್ನ ಸ್ವಗ್ರಾಮ ನಾಗರಘಟ್ಟ ಗ್ರಾಮಕ್ಕೆ ಬಂದು ಜಮೀನು, ತೋಟ ನೋಡಿಕೊಂಡು ಹೋಗುತ್ತಿದ್ದರು.

ಎಂದಿನಂತೆ ವಕೀಲ ಸತೀಶ್ ಅವರು ಸೋಮವಾರ ಸಂಜೆ 6 ಗಂಟೆಗೆ ಮನೆಗೆ ಬಂದು ಗ್ರಾಮದಲ್ಲಿನ ತನ್ನ ಪರಿಚಯಸ್ಥರು ಮತ್ತು ಸ್ನೇಹಿತರೊಂದಿಗೆ ಮಾತನಾಡಿಕೊಂಡು ನಂತರ ಮನೆಗೆ ಹೋಗಿ ಮನೆಯ ಹಜಾರದಲ್ಲಿದ್ದ ಮಂಚದ ಮೇಲೆ ಮಲಗಿದ್ದರು.

Lawyer was murdered in KR Pete

ಈ ವೇಳೆ ಇವರ ಸಹೋದರ ಉಮೇಶ್ ಎಂಬಾತನೂ ಇದ್ದು ಆತ ಅದೇ ಮನೆಯ ಮಹಡಿಯಲ್ಲಿ ಹೋಗಿ ಮಲಗಿದ್ದನು. ರಾತ್ರಿ ಸುಮಾರು11.45ರ ಸುಮಾರಿನಲ್ಲಿ ನಾಲ್ಕೈದು ಮಂದಿ ಮನೆಯ ಬಳಿ ಬಂದು ವಕೀಲ ಸತೀಶನೊಂದಿಗೆ ಹಣದ ವಿಚಾರವಾಗಿ ಚರ್ಚೆ ನಡೆಸುತ್ತಾ ಜಗಳ ಮಾಡಿದ್ದು, ಈ ವೇಳೆ ಸಹೋದರ ಉಮೇಶ್ ಅವರ ವಿಚಾರ ನನಗೇಕೆ ಎಂದು ಅವರ ಪಾಡಿಗೆ ಮಹಡಿಯಲ್ಲಿ ಮಲಗಿದ್ದರು ಎನ್ನಲಾಗಿದ್ದು, ಬೆಳಿಗ್ಗೆ ಎದ್ದು ನೋಡಿದಾಗ ಸತೀಶ್ ಮೃತಪಟ್ಟಿರುವುದು ಕಂಡು ಬಂದಿದೆ ಎಂದು ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾನೆ.

ಆದರೆ ಪೊಲೀಸರಿಗೆ ಮೃತನ ಸಹೋದರ ಉಮೇಶ್‌ನ ಮೇಲೆ ಅನುಮಾನ ಬಂದಿರುವ ಹಿನ್ನಲೆಯಲ್ಲಿ ಆತ ಸೇರಿದಂತೆ ಹಲವರನ್ನು ವಿಚಾರಣೆಗೆ ಒಳಪಡಿಸಿ ತನಿಖೆ ಕೈಗೊಂಡಿದ್ದಾರೆ. ಸ್ಥಳಕ್ಕೆ ಹಾಸನ ಜಿಲ್ಲಾ ಬೆರಳಚ್ಚು ಮತ್ತು ಶ್ವಾನದಳ ತಜ್ಞರು ಆಗಮಿಸಿ ಕೊಲೆ ಆರೋಪಿಗಳಾಗಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಪತ್ತೆಯಾಗಲಿಲ್ಲ.

ಘಟನಾ ಸ್ಥಳಕ್ಕೆ ಮಂಡ್ಯ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಲರಾಮೇಗೌಡ, ಡಿ.ವೈ.ಎಸ್.ಪಿ ಮೋಹನ್‌ಕುಮಾರ್, ಸರ್ಕಲ್ ಇನ್ಸ್ ಪೆಕ್ಟರ್ ಸುಧಾಕರ್, ಸಬ್‌ಇನ್ಸ್ ಪೆಕ್ಟರ್ ಹೆಚ್.ಎಸ್.ವೆಂಕಟೇಶ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ಕುರಿತು ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+