KRS Dam: KRS: ಕೆಆರ್‌ಎಸ್‌ನಿಂದ 80,000 ಕ್ಯೂಸೆಕ್ ನೀರು ಬಿಡುಗಡೆ: ನದಿತೀರದ ಜನರಿಗೆ ಪ್ರಮುಖ ಸೂಚನೆಗಳೇನು?

KRS Dam: ರಾಜ್ಯದಲ್ಲಿ ಮುಂಗಾರು ಚುರುಕು ಪಡೆದ ಪರಿಣಾಮ ನದಿ, ಕೆರೆ-ಕಟ್ಟೆಗಳು ತುಂಬಿ ಹರಿಯುತ್ತಿವೆ. ಮತ್ತೊಂದೆಡೆ ಜಲಾಶಯಗಳು ಕೂಡ ಮೈದುಂಬುತಿದ್ದು, ಇದರಿಂದ ನದಿತೀರದ ಜನರಿಗೆ ನಡುಕ ಶುರುವಾಗಿದೆ. ಈಗಾಗಲೇ ಬೆಂಗಳೂರು, ಮಂಡ್ಯ, ಮೈಸೂರು ಜಿಲ್ಲೆಗಳ ಜೀವನಾಡಿ ಕೃಷ್ಣರಾಜ ಸಾಗರ (ಕೆಆರ್‌ಎಸ್‌) ಡ್ಯಾಂ ಭರ್ತಿಯಾಗಿದ್ದು, ಇದೀಗ ಒಳಹರಿವು ಹೆಚ್ಚಾಗಿದೆ. ಈ ಹಿನ್ನೆಲೆ 80,000 ಕ್ಯೂಸೆಕ್‌ ನೀರನ್ನ ನದಿಗೆ ಹರಿಸಲಾಗುತ್ತಿದೆ. ಹಾಗಾದ್ರೆ, ಮಂಡ್ಯ ಜಿಲ್ಲಾಧಿಕಾರಿ ನೀಡಿದ ಮುನ್ನೆಚ್ಚರಿಕೆ ಕ್ರಮಗಳು ಏನೆಂದು ಇಲ್ಲಿ ತಿಳಿಯಿರಿ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ ಮುಂದುವರೆದಿರುವ ಪರಿಣಾಮ ಹಳೇ ಕೆಆರ್‌ಎಸ್ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಏರಿಕೆಉಯಾಗುತ್ತಲಿದೆ. ಆದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ನದಿಗೆ ಹರಿಸುವ ತೀರ್ಮಾನ ಮಾಡಟಲಾಗಿದೆ ಎಂದು ತಿಳಿದುಬಂದಿದೆ.

KRS Dam 80 000 Cusecs Water Release

ಕಳೆದ ಕೆಲ ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಪ್ರಮಾಣ ತಗ್ಗಿದ ಹಿನ್ನೆಲೆ ಹೆಚ್ಚು ನೀರು ಹರಿಯುತ್ತಿರಲಿಲ್ಲ. ಆದರೆ, ಆಗಸ್ಟ್‌ 17ರಿಂದ ಮತ್ತೆ ರಣಭೀಕರ ಮಳೆ ಮುಂದುವರೆದ ಹಿನ್ನೆಲೆ 33,052 ಕ್ಯೂಸೆಕ್‌ಗೂ ಅಧಿಕ ನೀರು ಒಳಹರಿವು ಬರುತ್ತಿದೆ. ಈಗಾಗಲೇ ಜೂನ್ ಅಂತ್ಯದಲ್ಲೇ ಜಲಾಶಯ ಭರ್ತಿಯಾಗಿದೆ. ಇನ್ನು ಇದೀಗ ಒಳಹರಿವು ಏರಿಕೆಯಾಗುತ್ತಿರುವ ಹಿನ್ನೆಲೆ ಇಂದು (ಆಗಸ್ಟ್‌ 18) ಬೆಳಗ್ಗೆ 10 ಗಂಟೆವರೆಗೆ 31,550 ಕ್ಯೂಸೆಕ್‌ ನೀರನ್ನ ನದಿಗೆ ಹರಿಸಲಾಗುತ್ತಿತ್ತು. ಬಳಿಕ 80,000 ಕ್ಯೂಸೆಕ್‌ ನೀರನ್ನ ಹರಿಸಲಾಗುತ್ತಿದೆ.

ಈ ಕುರಿತು ಮಂಡ್ಯದ ಜಿಲ್ಲಾಧಿಕಾರಿ ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿದ್ದು, ಕಾವೇರಿ ನದಿ ಪಾತ್ರದ ಜನರಿಗೆ ಪ್ರವಾಹದ ಮುನ್ನೆಚ್ಚರಿಕೆ ನೀಡಲಾಗಿದೆ. ನದಿತೀರದ ಜನರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದ್ದಾರೆ. ಜಲಾಶಯದಿಂದ ನೀರು ಬಿಡುಗಡೆ ಮಾಡಿದ್ದು, ಈ ಸುಂದರ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಇನ್ನು ಇದೀಗ ಇಂದು ಸದ್ಯ 124.80 ಅಡಿಗಳ ಗರಿಷ್ಠ ಮಟ್ಟದ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ 124.54 ಅಡಿಗೆ ಬಂದಿದೆ. ಅಂದರೆ, ಸಂಪೂರ್ಣ ಭರ್ತಿ ಆಗಿದೆ. 49.452 ಟಿಎಂಸಿ ಗರಿಷ್ಠ ಸಾಮರ್ಥ್ಯ ಇರುವ ಈ ಜಲಾಶಯದಲ್ಲಿ 49.089 ಟಿಎಂಸಿಯಷ್ಟು ನೀರು ಭರ್ತಿ ಆಗಿದೆ ಎಂದು ತಿಳಿದುಬಂದಿದೆ. ಮಳೆ ಹೀಗೆ ಮುಂದುವರೆದರೆ, ಒಳಹರಿವಿನ ಪ್ರಮಾಣ ಮತ್ತಷ್ಟು ಏರಿಕೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಕೆಆರ್‌ಎಸ್‌ ಜಲಾಶಯ ಜೂನ್‌ನಲ್ಲಿಯೇ ಭರ್ತಿಯಾಗಿದ್ದು, ಇದೀಗ ಮತ್ತೆ ಭಾರೀ ಮಳೆಯಿಂದ ಭರ್ತಿಯಾಗಿದೆ. ಅಲ್ಲದೆ, ಒಳಹರಿವು ಹೆಚ್ಚುತ್ತಿರುವ ಹಿನ್ನೆಲೆ ನೀರನ್ನು ನದಿಗೆ ಬಿಡಲಾಗುತ್ತಿದೆ. ಇದರಿಂದ ನದಿತೀರದ ಜನರಿಗೆ ನಡುಕ ಶುರುವಾಗಿದೆ. ಈಗಾಗಲೇ ಈ ಭಾಗಗಳ ಜನರು ಎಚ್ಚರಿಕೆಯಿಂದ ಇರುವಂತೆಯೂ ಜಿಲ್ಲಾಡಳಿತ ಎಚ್ಚರಿಕೆ ಸಂದೇಶವನ್ನು ರವಾನೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+