Yogi Adityanath: ಸಕ್ಕರೆನಾಡು ಮಂಡ್ಯಕ್ಕೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಆಗಮನ
ಮಂಡ್ಯ, ಏಪ್ರಿಲ್, 26: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಅವರು ಮಂಡ್ಯಕ್ಕೆ ಭೇಟಿ ನೀಡಿದ್ದು, ಕ್ಷೇತ್ರದ ಅಭ್ಯರ್ಥಿ ಪರವಾಗಿ ಪ್ರಚಾರ ಆರಂಭಿಸಿದ್ದಾರೆ.
ಯೋಗಿ ಆದಿತ್ಯಾನಾಥ್ ಅವರು ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಿಂದ ರೋಡ್ ಶೋ ನಡೆಸಲಿದ್ದಾರೆ. ರಾಜೇಂದ್ರ ಪ್ರಸಾದ್ ರಸ್ತೆ (ಆರ್.ಪಿ.ರಸ್ತೆ), ಅಂಬೇಡ್ಕರ್ ವೃತ್ತ (ಕರ್ನಾಟಕ ಬಾರ್ ಸರ್ಕಲ್), ನೂರಡಿ ರಸ್ತೆ, ಹೊಸಹಳ್ಳಿ ವೃತ್ತ, ವಿಶ್ವೇಶ್ವರಯ್ಯ ರಸ್ತೆ (ವಿ.ವಿ. ರಸ್ತೆ) ಸೇರಿದಂತೆ ವಿವಿಧ ರಸ್ತೆಗಳಲ್ಲಿ ರೋಡ್ ಶೋ ನಡೆಸಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ವಿ.ವಿ. ರಸ್ತೆ ಮೂಲಕ ಮಹಾವೀರ ವೃತ್ತ, ಮೈಸೂರು-ಬೆಂಗಳೂರು ಹೆದ್ದಾರಿ ಮಾರ್ಗವಾಗಿ ಸಿಲ್ವರ್ ಜ್ಯೂಬಿಲಿ ಪಾರ್ಕಿನವರೆಗೆ ರೋಡ್ ಶೋ ನಡೆಸಲಿದ್ದಾರೆ. ಬಳಿಕ ಸಿಲ್ವರ್ ಜ್ಯೂಬಿಲಿ ಪಾರ್ಕಿನಲ್ಲಿ ಕಾರ್ಯಕರ್ತರು ಹಾಗೂ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಮುಂದಿನ ಸಿಎಂ ಬಗ್ಗೆ ಭವಿಷ್ಯ ನುಡಿದ ಶ್ವಾನ
ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಈಗಾಗಲೇ ಅಭ್ಯರ್ಥಿಗಳ ನಾಮಪತ್ರ ಪ್ರಕ್ರಿಯೆಗಳು ಮುಗಿದಿವೆ. ಇದೀಗ ಎಲ್ಲಾ ಕ್ಷೇತ್ರಗಳಲ್ಲೂ ಅಖಾಡಗಳು ರಂಗೇರಿದ್ದು, ಮೂರು ಪಕ್ಷಗಳ ನಾಯಕರು ಕೂಡ ಮತಬೇಟೆಯನ್ನು ಶುರು ಮಾಡಿದ್ದಾರೆ. ಹಾಗೆಯೆ ಈ ಬಾರಿ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ? ಯಾರು ಮುಖ್ಯಮಂತ್ರಿ ಆಗುತ್ತಾರೆ ಎನ್ನುವ ಚರ್ಚೆಗಳೂ ಆಗುತ್ತಿವೆ. ಈ ನಡುವೆಯೇ ಎಚ್.ಡಿ.ಕುಮಾರಸ್ವಾಮಿ ಅವರು ಮುಂದಿನ ಸಿಎಂ ಆಗಲಿದ್ದಾರೆ ಎಂದು ಕಾಲ ಭೈರವನ ಪ್ರತಿ ರೂಪ ಶ್ವಾನ ಭವಿಷ್ಯ ನುಡಿದಿದೆ.
ಈ ಹಿಂದೆ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಯಾವ ತಂಡ ಚಾಂಪಿಯನ್ ಆಗಲಿದೆ ಎನ್ನುವ ಭವಿಷ್ಯಗಳನ್ನು ಆಕ್ಟೋಪಸ್ ಹಾಗೂ ಹಂದಿ ನುಡಿದಿದ್ದನ್ನು ನಾವು ಕೇಳಿದ್ದೇವೆ. ಆದರೆ ಇದೀಗ ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರು ಅನ್ನುವ ಬಗ್ಗೆ ಶ್ವಾನವೊಂದು ಭವಿಷ್ಯ ನುಡಿದು ಅಚ್ಚರಿ ಮೂಡಿಸಿದೆ.
ಮಂಡ್ಯದ ಅಶೋಕನಗರದ ಗೋಪಿ ಎನ್ನುವರರ ಭೈರವ ಎಂಬ ಹೆಸರಿನ ಶ್ವಾನವು ಎಚ್.ಡಿ ಕುಮಾರಸ್ವಾಮಿ ಅವರ ಭಾವಚಿತ್ರ ಸೂಚಿಸುವ ಮೂಲಕ ಮುಂದಿನ ಸಿಎಂ ಇವರೇ ಎನ್ನುವ ಸುಳಿವನ್ನು ನೀಡಿ ನೋಡುಗರನ್ನು ಅಚ್ಚರಿಗೊಳಿಸಿದೆ. ಗೋಪಿಯವರು ಕಾಲಭೈರವನ ಭಕ್ತರು. ಪ್ರತಿ ಸೋಮವಾರವೂ ಕೂಡ ಇವರ ಕುಟುಂಬ ಕಾಲಭೈರವನ ಪೂಜೆ ಮಾಡಿಕೊಂಡು ಬಂದಿದೆ.
ಹಾಗೆಯೆ ದೇವಸ್ಥಾನಕ್ಕೆ ತಮ್ಮ ಶ್ವಾನವನ್ನೂ ಸಹ ಜೊತೆಗೆ ಕರೆದುಕೊಂಡು ಹೋಗುತ್ತಾರೆ. ಅದರಂತೆಯೇ ತಮ್ಮ ಶ್ವಾನಕ್ಕೆ ವಿಶೇಷ ಪೂಜೆ ಸಲ್ಲಿಸಿ ಈ ಬಾರಿ ಸಿಎಂ ಯಾರಾಗುತ್ತಾರೆ ಎನ್ನುವುದನ್ನು ಬಸವರಾಜ ಬೊಮ್ಮಾಯಿ, ಎಚ್.ಡಿ.ಕುಮಾರಸ್ವಾಮಿ ಹಾಗೂ ಡಿ.ಕೆ. ಶಿವಕುಮಾರ್ ಅವರ ಮೂರು ಫೋಟೋಗಳನ್ನು ಇಟ್ಟು ಅಪ್ಪಣೆ ಕೇಳಿದ್ದಾರೆ. ಆಗ ಶ್ವಾನವು ಎಚ್.ಡಿ.ಕುಮಾರಸ್ವಾಮಿ ಅವರ ಫೋಟೋವನ್ನು ಎತ್ತಿ ತೋರಿಸಿದೆ. ಈ ಮೂಲಕ ಮುಂದಿನ ಸಿಎಂ ಕುಮಾರಸ್ವಾಮಿ ಎನ್ನುವುದನ್ನು ಈ ಶ್ವಾನ ಖಚಿತಪಡಿಸಿದಂತಿದೆ.
ಈ ಹಿಂದೆಯೂ ಸಹ ಈ ಶ್ವಾನದಂತೆ ಹಲವು ಪವಾಡಗಳು ನಡೆದಿವೆ ಎಂದು ಹಲವರು ಹೇಳುತ್ತಾರೆ. ಹೀಗೆ ಗೋಪಿ ಅವರ ಶ್ವಾನ ನೀಡುತ್ತಿರುವ ಸೂಚನೆಗಳು ನಿಜ ಆಗುತ್ತಿವೆ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ. ಇದೀಗ ಕುಮಾರಸ್ವಾಮಿ ಫೋಟೋವನ್ನು ಎತ್ತಿ ಹಿಡಿಯುವ ಮೂಲಕ ಮುಂದಿನ ಸಿಎಂ ಇವರೇ ಎನ್ನುವ ಸೂಚನೆಯನ್ನು ನೀಡಿದೆ.
ಈ ಶ್ವಾನದಿಂದ ಹಲವು ಪವಾಡಗಳು ನಡೆದಿವೆ ಎನ್ನುವುದನ್ನು ಮಾಲೀಕ ಗೋಪಿ ಹೇಳಿದ್ದಾರೆ. ಕೆಲವು ತಿಂಗಳಗಳ ಹಿಂದೆ ನಮ್ಮ ತಾಯಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ವೈದ್ಯರು ತಾಯಿ ಜೀವದ ಬಗ್ಗೆ ಯಾವುದೇ ಭರವಸೆ ನೀಡಿರಲಿಲ್ಲ. ಇತ್ತ ಮನೆಯಲ್ಲಿ ಶ್ವಾನ ಊಟ ಮಾಡದೇ ನನ್ನ ತಾಯಿಯನ್ನು ನೋಡಲು ಚಡಪಡಿಸುತ್ತಿತ್ತು.
ಕೊನೆಗೆ ಒಂದು ದಿನ ಅದನ್ನು ಕಾರಿನಲ್ಲಿ ಜಯದೇವ ಅಸ್ಪತ್ರೆ ಬಳಿ ಕರೆದುಕೊಂಡು ಹೋಗಿದ್ದೆ. ಆಸ್ಪತ್ರೆಗೆ ಶ್ವಾನಗಳ ಪ್ರವೇಶ ಇಲ್ಲದಿದ್ದರಿಂದ ನನ್ನ ತಾಯಿಯನ್ನು ವೀಲ್ ಚೇರ್ ಮೂಲಕ ಆಸ್ಪತ್ರೆಯಿಂದ ಆಚೆ ಕರೆದುಕೊಂಡು ಬಂದಿದ್ದೆ. ಆಗ ಶ್ವಾನ ನನ್ನ ಅಮ್ಮನನ್ನು ಎರಡ್ಮೂರ ಸಲ ನೆಕ್ಕಿ ಮುದ್ದಾಡಿತ್ತು. ಬಳಿಕ ನಮ್ಮ ತಾಯಿ ಆರೋಗ್ಯದಲ್ಲಿ ಸುಧಾರಣೆ ಆಗಿದೆ ಎಂದರು.












Click it and Unblock the Notifications