ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ ಬಾಹ್ಯ ಬೆಂಬಲ ನೀಡಿದ್ದು ನಿಜ ಎಂದ ಜೆಡಿಎಸ್ ಶಾಸಕ

|
Google Oneindia Kannada News

ಮಂಡ್ಯ, ಅಕ್ಟೋಬರ್ 18: ಬಿಜೆಪಿ ಬಾಹ್ಯಬೆಂಬಲ ನೀಡಿದ್ದು ಹೌದು ಆದರೂ ಯಾಕೆ ಆಪರೇಷನ್ ಕಮಲ ಮಾಡಿದರೋ ಗೊತ್ತಿಲ್ಲ ಎನ್ನುವ ವಿಚಾರವನ್ನು ನಾಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡ ಹೊರಹಾಕಿದ್ದಾರೆ.

ಬಿಜೆಪಿ ಜತೆ ಕೈ ಜೋಡಿಸಲು‌ ಜೆಡಿಎಸ್ ಶಾಸಕರು ನಿರ್ಧರಿಸಿದ್ದೆವು.ನಾವೇ ಅವರಿಗೆ ಬಾಹ್ಯ ಬೆಂಬಲ ನೀಡಿದರೂ ಆಪರೇಷನ್ ಕಮಲ ಏಕೆ ಮಾಡಿದರು ನೀಡಿದ್ದಾರೆ ಎಂದರು. ಉಪ ಚುನಾವಣೆ ಯಲ್ಲಿ ಬಿಜೆಪಿ ನಿರೀಕ್ಷಿತ ಮಟ್ಟದಲ್ಲಿ ಸ್ಥಾನಗಳನ್ನು ಗೆಲ್ಲುವುದಿಲ್ಲ. ಅದಕ್ಕಾಗಿ ಬಿಜೆಪಿ ಎರಡನೇ ಹಂತದ ಆಪರೇಷನ್ ಕಮಲ ಮಾಡಬಹುದು.

ಜೆಡಿಎಸ್ ಶಾಸಕರನ್ನು ಗೌರವಯುತವಾಗಿ ನಡೆಸಿಕೊಂಡರೆ ಬಿಜೆಪಿಗೆ ಬಾಹ್ಯ ಬೆಂಬಲ ನೀಡುವುದಾಗಿ ತೀರ್ಮಾನ ಮಾಡಿದ್ದೆವು. ಬಿಜೆಪಿ ಬೆಂಬಲಿಸುವ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ಶಾಸಕರು ಚರ್ಚೆ ಮಾಡಿದ್ದೇವೆ. ಗೌರವಯುತವಾಗಿ ನಡೆಸಿಕೊಂಡು ಹೋಗುವುದಾದರೆ ಬೆಂಬಲ ಮಾಡೋಣ ಎಂದು ಕುಮಾರಣ್ಣನೂ ಹೇಳಿದ್ದು ನಿಜ ಎಂದು ಹೇಳುವ ಮೂಲಕ ಬಿಜೆಪಿ ಸರ್ಕಾರದ ರಕ್ಷಣೆಗೆ ಜೆಡಿಎಸ್ ಸಿದ್ಧವಿದೆ ಎಂಬ ಸಂದೇಶ ರವಾನಿಸಿದ್ದಾರೆ.

JDS MLA Suresh Gowda Yes We Are Supported BJP

ಬಿಜೆಪಿ ನಾಯಕರು ನಡೆಸಿಕೊಳ್ಳುತ್ತಿರುವ ರೀತಿ ನೋಡಿದರೆ ಬೆಂಬಲ ನೀಡುವುದು ಅನುಮಾನ.ಏಕೆಂದರೆ 2017-18ರಲ್ಲಿ ಬಿಡುಗಡೆ ಮಾಡಿದ್ದ ಅನುದಾನ ಕಿತ್ತುಕೊಂಡರು.ಯಾವ ರೀತಿ ರಾಜಕಾರಣ ಮಾಡುತ್ತಿದ್ದಾರೆ ಎಂಬುದು ಅರ್ಥವಾಗು ತ್ತಿಲ್ಲ.

ಇದನ್ನೆಲ್ಲಾ ನೋಡಿದರೆ ಅಧಿಕಾರ ಬೇರೆಯದಕ್ಕೆ ಬೇಕು, ಜನಗಳ ಕಷ್ಟ ಸುಖಕ್ಕೆ ಸ್ಪಂದಿಸೋದಕ್ಕಲ್ಲ ಅನ್ನಿಸುತ್ತಿದೆ. ನೋಡೋಣ ಇವೆಲ್ಲಾ ಎಷ್ಟು ದಿನ ನಡೆಯುತ್ತೆ. ಪರಿಸ್ಥಿತಿಯನ್ನು ಎದುರಿಸೋಣ.

ನೊಟೀಸ್ ನೀಡಿದ್ದ ಬಿಜೆಪಿ ಶಿಸ್ತು ಸಮಿತಿಗೆ ಯಾತ್ನಾಳ್ ಖಡಕ್ ಉತ್ತರನೊಟೀಸ್ ನೀಡಿದ್ದ ಬಿಜೆಪಿ ಶಿಸ್ತು ಸಮಿತಿಗೆ ಯಾತ್ನಾಳ್ ಖಡಕ್ ಉತ್ತರ

ನಮ್ಮ ಪಕ್ಷದಿಂದ ಯಾವ ಶಾಸಕರು ಬಿಜೆಪಿಗೆ ಹೋಗಲ್ಲ. ನನಗೆ 2018ರಿಂದಲೂ ಆಮಿಷ ಬರುತ್ತಿದೆ. ಜನರು ನೀಡಿರುವ ಅಧಿಕಾರವನ್ನು ವ್ಯಾಪಾರಕ್ಕೆ ಇಡುವುದಿಲ್ಲ ಎಂದು ಹೇಳಿದರು.

2017-18ರಲ್ಲಿ ಕೊಟ್ಟ ಅನುದಾನ, ಅಗ್ರಿಮೆಂಟ್​ ಆಗಿದ್ದ ಕಾಮಗಾರಿ ಎಲ್ಲವನ್ನೂ ತಡೆದಿದ್ದಾರೆ. ಇದೆಲ್ಲವನ್ನು ನೋಡುತ್ತಿದ್ದರೆ ಅವರಿಗೆ ಅಧಿಕಾರ ಬೇಕು, ಉಳಿದಿದ್ದೆಲ್ಲಾ ಬೇಡ ಎನ್ನವ ಹಾಗೆ ಕಾಣಿಸುತ್ತಿದೆ. ಈ ಮುಂಚಿನಿಂದಲೂ ನಮಗೆ ಬಿಜೆಪಿ ಸೇರುವಂತೆ ಆಫರ್ ಬರುತ್ತಿದೆ. ನಮ್ಮ ಪಕ್ಷದಿಂದ ಯಾವ ಶಾಸಕರು ಬಿಜೆಪಿಗೆ ಹೋಗಲ್ಲ. ಇದೇ ಪರಿಸ್ಥಿತಿ ಎಷ್ಟು ದಿನ ಇರುತ್ತೆ ಅಂತ ನೋಡೋಣ. ಅಲ್ಲಿಯವರೆಗೂ ಎಲ್ಲವನ್ನೂ ಎದುರಿಸುತ್ತೇವೆ ಎಂದು ಸುರೇಶ್​ಗೌಡ ಹೇಳಿದ್ದಾರೆ.

ಎಚ್.ಡಿ ಕುಮಾರಸ್ವಾಮಿ ಅವರ ಅಧಿಕಾರವಧಿಯಲ್ಲಿ ಮಂಡ್ಯಕ್ಕೆ ಅನುದಾನ ಬಿಡುಗಡೆಯಾಗಿಲ್ಲ ಎಂಬ ಚಲುವರಾಯಸ್ವಾಮಿ ಆರೋಪಿಸಿದ್ದಾರೆ. ಕುಮಾರಸ್ವಾಮಿ ಏನು ಮಾಡಿದ್ದಾರೆಂಬುದನ್ನು ಪುಸ್ತಕ ಮುದ್ರಿಸಲಾಗಿದೆ. ಅವರಿಗೂ ತಲುಪಿಸುತ್ತೇವೆ.

English summary
Nagamangala JDS MLA Suresh Gowda said that yes we are supported BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X