ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ಆಮಂತ್ರಣ ಪತ್ರಿಕೆಯಲ್ಲಿ ರೆಡ್ಡಿಗೆ ಸೆಡ್ಡು ಹೊಡೆದ ಶಿವರಾಮೇಗೌಡ್ರು!

By ಮಂಡ್ಯ ಪ್ರತಿನಿಧಿ
Subscribe to Oneindia Kannada
For Quick Alerts
ALLOW NOTIFICATIONS
For Daily Alerts
    ಆಮಂತ್ರಣ ಪತ್ರಿಕೆಯಲ್ಲಿ ರೆಡ್ಡಿಗೆ ಸೆಡ್ಡು ಹೊಡೆದ ಶಿವರಾಮೇಗೌಡ್ರು! | Oneindia Kannada

    ಮಂಡ್ಯ, ನವೆಂಬರ್ 23: ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ತಮ್ಮ ಪುತ್ರಿ ಬ್ರಹ್ಮಿಣಿಯ ಮದುವೆ ಆಮಂತ್ರಣ ಪತ್ರಿಕೆಯನ್ನು ಅದ್ಧೂರಿಯಾಗಿ ಮೂಡಿಬರುವಂತೆ ಮಾಡಿ ಮದುವೆಯನ್ನು ಕೂಡ ಅದ್ಧೂರಿಯಾಗಿ ನೆರವೇರಿಸಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ.

    ಇದೀಗ ರೆಡ್ಡಿಯವರ ವೀಡಿಯೋ ಸಹಿತದ ಆಹ್ವಾನಪತ್ರಿಕೆಯನ್ನೇ ಮಾಜಿ ಶಾಸಕ, ಜೆಡಿಎಸ್ ಮುಖಂಡ ಎಲ್.ಆರ್.ಶಿವರಾಮೇಗೌಡ ಅವರು ಅನುಕರಣೆ ಮಾಡಿದ್ದು, ಮಗಳ ಮದುವೆಯ ಆಹ್ವಾನ ಪತ್ರಿಕೆಯನ್ನು ತೆರೆದ ಕೂಡಲೇ ಕುಟುಂಬವರ್ಗದವರು ಆಹ್ವಾನ ನೀಡುವ ವಿಡಿಯೋ ಮೂಡಿಬರುತ್ತಿದೆ. ಆದರೆ ಇದು ವಿಶೇಷ ಗಣ್ಯರಿಗೆ ಮಾತ್ರವಾಗಿದೆ.

    ಗಾಲಿ ಜನಾರ್ದನ ರೆಡ್ಡಿ ಪುತ್ರಿ ಬ್ರಹ್ಮಣಿ ವಿವಾಹಕ್ಕೆ ಬನ್ನಿ, ಬನ್ನಿ!

    ಶಿವರಾಮೇಗೌಡರು ತಮ್ಮ ಪುತ್ರಿ ವಿವಾಹ ಅದ್ಧೂರಿಯಾಗಿ ಮಾಡುತ್ತಿದ್ದು ಆಹ್ವಾನ ಪತ್ರಿಕೆಯಲ್ಲೂ ವಿಶೇಷತೆಯಿರಲಿ ಎಂಬ ಕಾರಣಕ್ಕೆ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಮಾಡಿಸಿದ್ದ ಮಾದರಿಯಲ್ಲೇ ವಿಶೇಷ ವಿಡಿಯೋ ಆಮಂತ್ರಣ ಪತ್ರಿಕೆ ಸಿದ್ಧಪಡಿಸಿದ್ದಾರೆ. ಈ ಆಹ್ವಾನಪತ್ರಿಕೆ ಸಾಮಾಜಿಕಜಾಲ ತಾಣಗಳಲ್ಲಿ ವೈರಲ್ ಆಗಿದೆ.

    ಬೆಂಗಳೂರು ಅರಮನೆ ಮೈದಾನದಲ್ಲಿ ಮದುವೆ

    ಬೆಂಗಳೂರು ಅರಮನೆ ಮೈದಾನದಲ್ಲಿ ಮದುವೆ

    ಶಿವರಾಮೇಗೌಡರ ಪುತ್ರಿ ಕಾವ್ಯ ಅವರ ಮದುವೆ ರಾಜೀವ್ ಅವರೊಂದಿಗೆ ಡಿ.6ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಈಗಾಗಲೇ ಮದುವೆಗೆ ಸಂಬಂಧಿಸಿದಂತೆ ಎಲ್ಲ ರೀತಿಯ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದ್ದು, ಮದುವೆ ಅದ್ಧೂರಿಯಾಗಿ ನಡೆಯಲಿದೆ. ಅಲ್ಲದೆ ಗಣ್ಯಾತಿಗಣ್ಯರು ಈ ವಿವಾಹ ಕಾರ್ಯಕ್ಕೆ ಆಗಮಿಸಲಿದ್ದಾರೆ.

    ಅತಿ ಗಣ್ಯರಿಗೆ ಮಾತ್ರ ವಿಡಿಯೋ ಆಹ್ವಾನ

    ಅತಿ ಗಣ್ಯರಿಗೆ ಮಾತ್ರ ವಿಡಿಯೋ ಆಹ್ವಾನ

    ವಿವಾಹ ಸಂಬಂಧ ವಿವಿಧ ಬಗೆಯ ಆಹ್ವಾನ ಪತ್ರಿಕೆಯನ್ನು ಮುದ್ರಿಸಲಾಗಿದೆಯಾದರೂ ಅತಿಗಣ್ಯರಿಗೆ ವೀಡಿಯೋ ಸಹಿತದ ಆಹ್ವಾನ ಪತ್ರಿಕೆ ನೀಡಲಾಗುತ್ತಿದೆ. ಸಹ ನರ್ತಕ-ನರ್ತಕಿಯರು ನರ್ತಿಸುತ್ತಿರುವ ದೃಶ್ಯವನ್ನು ಅದ್ಧೂರಿ ಗ್ರಾಫಿಕ್ಸ್ ನೊಂದಿಗೆ ಚಿತ್ರೀಕರಿಸಿ ತಯಾರಿಸಲಾಗಿದೆ.

    ಅದ್ಧೂರಿ ಆಮಂತ್ರಣ

    ಅದ್ಧೂರಿ ಆಮಂತ್ರಣ

    ಶಿವರಾಮೇಗೌಡರ ಪುತ್ರಿ ಕಾವ್ಯ ಬೆಲೆಬಾಳುವ ವಸ್ತ್ರಾಭರಣ ಧರಿಸಿ ವರನೊಂದಿಗೆ ಕಾಣಿಸಿಕೊಂಡಿದ್ದರೆ, ಶಿವರಾಮೇಗೌಡ ದಂಪತಿ ಮತ್ತೋರ್ವ ಪುತ್ರಿ ಹಾಗೂ ಪುತ್ರ ವಸ್ತ್ರಾಲಂಕಾರದೊಂದಿಗೆ ಆಮಂತ್ರಿಸುತ್ತಿರುವ ದೃಶ್ಯಗಳು ಇದರಲ್ಲಿದೆ. ಒಂದೆಡೆ ಸರ್ಕಾರ ಅದ್ಧೂರಿ ಮದುವೆಗಳಿಗೆ ಕಡಿವಾಣ ಹಾಕುವ ವಿಧೇಯಕ ಜಾರಿಗೆ ತರಲಾಗುತ್ತದೆ ಎಂದು ಹೇಳಿಕೆ ನೀಡುತ್ತಲೇ ಬರುತ್ತಿದೆಯಾದರೂ ರಾಜಕಾರಣಿಗಳ ಅದ್ಧೂರಿತನಕ್ಕೆ ಮಾತ್ರ ಯಾವುದೇ ಬ್ರೇಕ್ ಬಿದ್ದಂತೆ ಕಾಣುತ್ತಿಲ್ಲ.

    ಗಣ್ಯರ ಉಪಸ್ಥಿತಿಯ ನಿರೀಕ್ಷೆ

    ಗಣ್ಯರ ಉಪಸ್ಥಿತಿಯ ನಿರೀಕ್ಷೆ

    ಕೋಟ್ಯಂತರ ರೂ.ಖರ್ಚು ಮಾಡಿ ಮಾಡುತ್ತಿರುವ ಈ ಮದುವೆಗೆ ದೇಶದ ಹಲವು ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ. ವಿಐಪಿಗಳಿಗೆ ಒಂದು ರೀತಿಯ ಆಮಂತ್ರಣ, ಸಾಮಾನ್ಯರಿಗೆ ಸರಳ ಆಮಂತ್ರಣ ಪತ್ರಿಕೆ ತಯಾರಿಸಲಾಗಿದೆ. ಇಷ್ಟೆಲ್ಲ ಖರ್ಚು ಮಾಡಿ ಮದುವೆಮಾಡುವಷ್ಟು ಹಣ ರಾಜಕಾರಣಿಗಳಿಗೆ ಎಲ್ಲಿಂದ ಬರುತ್ತದೆ ಎಂಬುದು ಮಾತ್ರ ಜನಸಾಮಾನ್ಯರಿಗೆ ಅರ್ಥವಾಗದ ಪ್ರಶ್ನೆ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    A video invitation card of daughter of JDS leader and former member of parliament L R Shivaramegowda becomes viral in social media. The video is almost similar to former MLA Janardan Reddy's daughter's marriage invitation card. Wedding will be taking place in Palace ground Bengaluru on December 6th.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more