ಮದ್ದೂರಿನಲ್ಲಿ 5 ಜನ ಐಪಿಎಲ್ ಬೆಟ್ಟಿಂಗ್ ದಂಧೆಕೋರರು ಅಂದರ್

By: ಮಂಡ್ಯ ಪ್ರತಿನಿಧಿ
Subscribe to Oneindia Kannada

ಮಂಡ್ಯ, ಏಪ್ರಿಲ್ 18: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ನಿರತರಾಗಿದ್ದ ಐವರನ್ನು ಮದ್ದೂರು ಪೊಲೀಸರು ಬಂಧಿಸಿದ್ದಾರೆ ನಡೆದಿದೆ.

ಬಂಧಿತರಿಂದ ಬೆಟ್ಟಿಂಗ್‍ಗೆ ಬಳಕೆಯಾಗಿದ್ದ ಒಂದು ಇನೋವಾ ಕಾರು, 30 ಸಾವಿರ ನಗದು, ಒಂದು ಟಿವಿ, ಸೆಟ್ ಟಾಪ್ ಬಾಕ್ಸ್ ಹಾಗೂ 11 ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬೆಂಗಳೂರು ಮೂಲದವರಾದ ಬೈಯಪ್ಪನಹಳ್ಳಿಯ ಬುಕ್ಕಿ ಟಿ.ಆನಂದ್, ಚಾಲಕರಾದ ರಮೇಶ್ ರಾಮಕೃಷ್ಣ, ವಿಜಯನ್ ಹಾಗೂ ವಸತಿ ಗೃಹ ಬಾಡಿಗೆಗೆ ಪಡೆದಿದ್ದ ಲಿಂಗರಾಜು ಬಂಧಿತರಾಗಿದ್ದಾರೆ.[ಮಂಡ್ಯ: 35ಕ್ಕೂ ಹೆಚ್ಚು ಕೋತಿಗಳ ಮಾರಣಹೋಮ]

IPL Betting: 5 people arrested in Maddur,

ಮದ್ದೂರು ಪಟ್ಟಣದ ಟಿಬಿ ವೃತ್ತದ ಸಮೀಪದ ನೈದಿಲೆ ಮಹಲ್ ರೆಸಿಡೆನ್ಸಿ ಲಾಡ್ಜ್ ನಲ್ಲಿ ಆರೋಪಿಗಳು ಕೊಠಡಿ ಬಾಡಿಗೆಗೆ ಪಡೆದು, ಪಂಜಾಬ್ ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಕ್ರಿಕೆಟ್ ಪಂದ್ಯಾವಳಿ ವೀಕ್ಷಣೆ ಮಾಡುತ್ತ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದರು.

ಈ ಬಗ್ಗೆ ಖಚಿತ ಮಾಹಿತಿ ಪೊಲೀಸರಿಗೆ ಸಿಕ್ಕಿದ್ದರಿಂದ ಜಿಲ್ಲಾ ಪೊಲೀಸರು ದಾಳಿ ನಡೆಸಿ ಐವರನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರ ದಾಳಿಯ ಸುಳಿವು ದೊರೆಯದ ಕಾರಣ ಆರೋಪಿಗಳು ಕೊಠಡಿಯಲ್ಲಿ ಕ್ರಿಕೆಟ್ ಪಂದ್ಯ ನೋಡುತ್ತಾ ತಮ್ಮ ಬೆಟ್ಟಿಂಗ್ ದಂಧೆಯನ್ನು ಮುಂದುವರೆಸಿದ್ದರು ಈ ವೇಳೆ ದಾಳಿ ನಡೆಸಿ ಬಂಧಿಸಲಾಗಿದೆ.[ಕಾಂಗ್ರೆಸ್ ಬಿಡ್ತೀರಾ ಅಂದಿದ್ದಕ್ಕೆ ಅಂಬರೀಷಣ್ಣ ಏನಂದ್ರು ಗೊತ್ತಾ?]

ಕೊಠಡಿಯ ಬಾಗಿಲು ತಟ್ಟುತ್ತಿದ್ದಂತೆಯೇ ಬಾಗಿಲು ತೆಗೆದ ಆರೋಪಿಗಳು ಪೊಲೀಸರು ಬಂದಿದ್ದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ತಕ್ಷಣ ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು ಬೆಟ್ಟಿಂಗ್ ದಂಧೆಗೆ ಬಳಸುತ್ತಿದ್ದ ವಸ್ತುಗಳನ್ನು ನಗದು ಸಹಿತ ವಶಪಡಿಸಿಕೊಂಡು ವಂಚನೆ, ಜೂಜು ಕಾಯಿದೆಯನ್ವಯ ಮೊಕದ್ದಮೆಯನ್ನು ಐವರ ಮೇಲೆ ದಾಖಲು ಮಾಡಿದ್ದಾರೆ.

ಬಳಿಕ ಆರೋಪಿಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದು, ನ್ಯಾಯಾಧೀಶರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

ಐಪಿಎಲ್ ಪಂದ್ಯದ ಹಿಂದೆ ಭಾರೀ ಬೆಟ್ಟಿಂಗ್ ನಡೆಯುತ್ತಿದ್ದು, ಗ್ರಾಮೀಣ ಪ್ರದೇಶಗಳಿಂದ ಆರಂಭವಾಗಿ ನಗರ ಪ್ರದೇಶಗಳ ತನಕ ಜಾಲ ಹರಡಿದೆ. ಈ ಪಂದ್ಯಾವಳಿ ಮುಗಿಯುವ ವೇಳೆಗೆ ಅದೆಷ್ಟು ಮಂದಿ ಎಲ್ಲವನ್ನು ಕಳೆದುಕೊಂಡು ಬೀದಿಗೆ ಬೀಳಲಿದ್ದಾರೋ ಆ ದೇವರಿಗೆ ಗೊತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
5 people arrested in Maddur talluk of Mandya, who involved in IPL betting racket. Arrested persons are from Bengaluru, who allegedly stay in local lodges and running betting racket.
Please Wait while comments are loading...