ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಡ್ಯದಲ್ಲಿ 5 ದಿನದಲ್ಲಿ ಮೂವರು ರೈತರ ಆತ್ಮಹತ್ಯೆ

|
Google Oneindia Kannada News

ಮಂಡ್ಯ, ಸೆಪ್ಟೆಂಬರ್ 11 : ಸರ್ಕಾರ ರೈತರ ಸಾಲ ಮನ್ನಾ ಮಾಡಿದರೂ ರೈತ ಆತ್ಮಹತ್ಯೆ ನಿಂತಿಲ್ಲ. ಮಂಡ್ಯದಲ್ಲಿ ಸಾಲಬಾಧೆಯಿಂದಾಗಿ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 5 ದಿನದಲ್ಲಿ ಮೂವರು ರೈತರು ಮಂಡ್ಯದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ತುಂಗಭದ್ರಾ ನದಿ ಪ್ರವಾಹ, ಬಳ್ಳಾರಿಯಲ್ಲಿ ರೈತರಿಗೆ ಭಾರಿ ನಷ್ಟ ತುಂಗಭದ್ರಾ ನದಿ ಪ್ರವಾಹ, ಬಳ್ಳಾರಿಯಲ್ಲಿ ರೈತರಿಗೆ ಭಾರಿ ನಷ್ಟ

ಸೆ.10ರ ತಡರಾತ್ರಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮಾಲಗಾರನಹಳ್ಳಿ ಗ್ರಾಮದ ರೈತ ರಾಜೇಶ್ (45) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಮೀನಿನ ಸಮೀಪದ ಮರಕ್ಕೆ ನೇಣು ಬಿಗಿದುಕೊಂಡು ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮೈಸೂರು ಜಿಲ್ಲೆಯಲ್ಲೂ ಮಳೆಗೆ ಕೃಷಿ ಭೂಮಿ ಮುಳುಗಡೆ, ರೈತರ ಬದುಕು ಅತಂತ್ರ ಮೈಸೂರು ಜಿಲ್ಲೆಯಲ್ಲೂ ಮಳೆಗೆ ಕೃಷಿ ಭೂಮಿ ಮುಳುಗಡೆ, ರೈತರ ಬದುಕು ಅತಂತ್ರ

ರಾಜೇಶ್‌ಗೆ 5 ಎಕರೆ ಜಮೀನು ಇದ್ದು, ಬ್ಯಾಂಕ್ ಮತ್ತು ಕೈ ಸಾಲ ಸೇರಿ ಸುಮಾರು 5 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಸೋಮವಾರ ಗದ್ದೆಯ ನಾಟಿ ಕೆಲಸಕ್ಕೆ ಹೋಗಿದ್ದ ರಾಜೇಶ್ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

In 5 days 3 farmer commits suicide in Mandya

ಸಾಯುವ ಮುನ್ನ ರಾಜೇಶ್ ಡೆತ್ ನೋಟ್ ಬರೆದಿಟ್ಟಿದ್ದಾರೆ. ನಮ್ಮ ಅಂತ್ಯಕ್ರಿಯೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಚಿವ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಚಿವ ಅಂಬರೀಶ್ ಆಗಮಿಸಬೇಕು ಎಂದು ಬರೆದಿದ್ದಾರೆ.

5 ದಿನದಲ್ಲಿ 3 ಆತ್ಮಹತ್ಯೆ : ಎಚ್.ಡಿ.ಕುಮಾರಸ್ವಾಮಿ ಅವರು ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ರೈತರಿಗೆ ಕರೆ ನೀಡಿದ್ದರು. ಸಹಕಾರ ಸಂಘ ಮತ್ತು ರಾಷ್ಟ್ರೀಕೃತ ಬ್ಯಾಂಕ್ ಸೇರಿ ಸುಮಾರು 45 ಸಾವಿರ ಕೋಟಿ ಸಾಲವನ್ನು ಮನ್ನಾ ಮಾಡಿದ್ದರು.

ಮಂಡ್ಯ ಜಿಲ್ಲೆ ಸೀತಾಪುರ ಗ್ರಾಮದಲ್ಲಿ ರೈತರೊಂದಿಗೆ ಭತ್ತದ ನಾಟಿಯಲ್ಲಿ ಪಾಲ್ಗೊಂಡು ಕುಮಾರಸ್ವಾಮಿ ಅವರು ರೈತರಿಗೆ ಧೈರ್ಯ ತುಂಬಿದ್ದರು. ಆದರೆ, ಮಂಡ್ಯ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ನಿಂತಿಲ್ಲ.

ಕಳೆದ 5 ದಿನಗಳಲ್ಲಿ ಮೂವರು ರೈತರು ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೆ.10ರಂದು ರಾಕೇಶ್, ಸೆ.7ರಂದು ಮಂಡ್ಯ ತಾಲೂಕಿನ ಮಹಾದೇವು, ಸೆ.9ರಂದು ಹೊನ್ನೇನಹಳ್ಳಿ ಗ್ರಾಮದ ರೈತ ಜವರೇಗೌಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

English summary
45 -year-old farmer from Mandya district Maddur taluk committed suicide. In 5 days 3 farmer committed suicide in Mandya district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X