ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾರ್ಚ್‌ 18ಕ್ಕೆ ನನ್ನ ರಾಜಕೀಯ ನಿರ್ಧಾರ ಪ್ರಕಟಿಸುತ್ತೇನೆ: ಸುಮಲತಾ

|
Google Oneindia Kannada News

Recommended Video

Lok Sabha Elections 2019 : ಮಾರ್ಚ್‌ 18ಕ್ಕೆ ರಾಜಕೀಯ ನಿರ್ಧಾರ ಪ್ರಕಟಿಸುತ್ತೇನೆ: ಸುಮಲತಾ

ಮಂಡ್ಯ, ಮಾರ್ಚ್‌ 11: ಚುನಾವಣೆ ಕಣದಿಂದ ಹಿಂದೆ ಸರಿಯುವಂತೆ ಕಾಂಗ್ರೆಸ್‌ ಮುಖಂಡರು ನನ್ನ ಮೇಲೆ ಯಾವುದೇ ರೀತಿಯ ಒತ್ತಡ ಹೇರಿಲ್ಲ ಬದಲಾಗಿ ಕೆಲವರು ಸಲಹೆ, ಸೂಚನೆಗಳನ್ನು ನೀಡಿದ್ದಾರೆ ಎಂದು ನಟಿ ಸುಮಲತಾ ಅಂಬರೀಶ್ ಅವರು ಹೇಳಿದ್ದಾರೆ.

ಮಂಡ್ಯದ ಬೆಳ್ಳೂರು ಕ್ರಾಸ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಸುಮಲತಾ ಅವರು, ರಾಜಕೀಯದ ಬಗ್ಗೆ ತಮ್ಮ ಮುಂದಿನ ನಿರ್ಧಾರಗಳನ್ನು ಮಾರ್ಚ್‌ 18ರ ಒಳಗಾಗಿ ತಿಳಿಸುತ್ತೇನೆ ಎಂದು ಹೇಳಿದರು.

ಸುಮಲತಾ ಗೆಲ್ಲುವ ಆಸೆಯನ್ನು ಹೊಸಕಿ ಹಾಕಿದರೇ ಡಿಕೆ ಶಿವಕುಮಾರ್? ಸುಮಲತಾ ಗೆಲ್ಲುವ ಆಸೆಯನ್ನು ಹೊಸಕಿ ಹಾಕಿದರೇ ಡಿಕೆ ಶಿವಕುಮಾರ್?

ಡಿ.ಕೆ.ಶಿವಕುಮಾರ್ ಅವರು ನಿನ್ನೆ ಮಂಡ್ಯದ ಕಾಂಗ್ರೆಸ್ ಮುಖಂಡರ ಜೊತೆ ಸಭೆ ಮಾಡಿದ ಬಗ್ಗೆ ಮಾಹಿತಿ ಇಲ್ಲ ಎಂದ ಸುಮಲತಾ, ನನಗೆ ಕೆಲವು ಮುಖಂಡರ ಪರಿಚಯ ಇದೆ ಅವರನ್ನು ಕೇಳಿ ಸಭೆಯ ಬಗ್ಗೆ ಮಾಹಿತಿ ಪಡೆಯುವೆ ಎಂದು ಹೇಳಿದರು.

ಮಂಡ್ಯ ಚುನಾವಣೆಯಿಂದ ಹಿಂದೆ ಸರಿಯುವಂತೆ ಯಾವ ಕಾಂಗ್ರೆಸ್ ಮುಖಂಡರು ಸಹ ನನಗೆ ಒತ್ತಡ ಹೇರಿಲ್ಲ, ಎಲ್ಲರೂ ಗೌರವದಿಂದಲೇ ಕಂಡಿದ್ದಾರೆ. ಮೈತ್ರಿ ಸೂತ್ರ ಇರುವ ಕಾರಣ ಮಂಡ್ಯವನ್ನು ಕಾಂಗ್ರೆಸ್‌ಗೆ ಉಳಿಸಿಕೊಳ್ಳಲು ಕಷ್ಟವಾಗಬಹುದು ನೀವು ಬೇರೆ ಕ್ಷೇತ್ರದಿಂದ ಸ್ಪರ್ಧಿಸಿ ಎಂದು ಸಲಹೆಗಳನ್ನು ಕೊಟ್ಟಿದ್ದಾರೆ ಎಂದು ಸುಮಲತಾ ಅವರು ಹೇಳಿದರು.

'ದರ್ಶನ್ ಸೇರಿ ಚಿತ್ರರಂಗದ ಎಲ್ಲರೂ ನನ್ನ ಬೆಂಬಲಕ್ಕಿದ್ದಾರೆ'

'ದರ್ಶನ್ ಸೇರಿ ಚಿತ್ರರಂಗದ ಎಲ್ಲರೂ ನನ್ನ ಬೆಂಬಲಕ್ಕಿದ್ದಾರೆ'

ತಮ್ಮ ಪರ ಪ್ರಚಾರಕ್ಕೆ ಬರುವ ನಟರ ಬಗ್ಗೆ ಮಾತನಾಡಿದ ಸುಮಲತಾ, ದರ್ಶನ್ ಅವರು ನನ್ನ ದೊಡ್ಡಮಗನಿದ್ದಂತೆ, ನನ್ನನ್ನು ತಾಯಿಂತೆ ಕಾಣುತ್ತಾರೆ, ಅವರು ಬಂದೇ ಬರುತ್ತಾರೆ, ಅಷ್ಟೆ ಅಲ್ಲ ಚಿತ್ರರಂಗದ ಎಲ್ಲರೂ ನನ್ನ ಬೆನ್ನಿಗಿದ್ದಾರೆ, ಅಂಬರೀಶ್ ಅವರ ಮೇಲೆ ಅವರಿಗಿದ್ದ ಪ್ರೀತಿಗೆ ಉದಾಹರಣೆ ಇದು ಎಂದು ಸುಮಲತಾ ಹೇಳಿದರು. ಆದರೆ ಯಾವ-ಯಾವ ನಟರು ಪ್ರಚಾರಕ್ಕೆ ಬರುತ್ತಾರೆ ಎಂದು ಪಟ್ಟಿ ನೀಡಲು ಒಪ್ಪಲಿಲ್ಲ.

'ಸುಳ್ಳು ಸುದ್ದಿಗಳನ್ನು ನಂಬಬೇಡಿ'

'ಸುಳ್ಳು ಸುದ್ದಿಗಳನ್ನು ನಂಬಬೇಡಿ'

ಸುಮಲತಾ ಬಿಜೆಪಿ ಸೇರುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ ಎಂಬ ಪ್ರಶ್ನೆ ಎದುರಾದಾಗ, ನಾನೇ ಮಾತನಾಡಿ ಸ್ಪಷ್ಟನೆ ನೀಡುವವರೆಗೆ ಯಾವುದನ್ನೂ ನಂಬಬೇಡಿ, ಸುಳ್ಳು ಸುದ್ದಿಗಳು ಹೆಚ್ಚು ಹರಿದಾಡುತ್ತಿವೆ. ಮಾಧ್ಯಮದವರು ಸಹ ಊಹಾಪೋಹದ ಸುದ್ದಿಗಳನ್ನು ಪ್ರಸಾರ ಮಾಡಬೇಡಿ ಎಂದು ಮನವಿ ಮಾಡಿದರು.

ಸುಮಲತಾ ಅಂಬರೀಶ್‌ಗೆ ಮೈಸೂರು ಕ್ಷೇತ್ರದ ಟಿಕೆಟ್‌ ಆಫರ್‌!ಸುಮಲತಾ ಅಂಬರೀಶ್‌ಗೆ ಮೈಸೂರು ಕ್ಷೇತ್ರದ ಟಿಕೆಟ್‌ ಆಫರ್‌!

ಮಂಡ್ಯ ರಾಜಕಾರಣಕ್ಕೆ ಹೊಸ ಕಳೆ

ಮಂಡ್ಯ ರಾಜಕಾರಣಕ್ಕೆ ಹೊಸ ಕಳೆ

ಸುಮಲತಾ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತೇನೆಂದು ಪಟ್ಟು ಹಿಡಿದಿರುವುದು ಮಂಡ್ಯ ರಾಜಕಾರಣಕ್ಕೆ ಹೊಸ ಕಳೆ ತಂದಿದೆ. ಕಾಂಗ್ರೆಸ್ ಟಿಕೆಟ್ ಅವರಿಗೆ ಕೈತಪ್ಪಿದ್ದು, ಪಕ್ಷೇತರವಾಗಿಯಾದರೂ ಚುನಾವಣೆ ಎದುರಿಸಿಯೇ ಸಿದ್ಧ ಎಂದು ಅವರು ಹೇಳುತ್ತಿದ್ದಾರೆ. ಈ ಬಗ್ಗೆ ಮಾರ್ಚ್‌ 18ರ ಒಳಗಾಗಿ ಅವರು ಪ್ರಕಟಿಸಲಿದ್ದಾರೆ.

ರಾತ್ರೋರಾತ್ರಿ ಬಿಜೆಪಿ ಮುಖಂಡರನ್ನು ಭೇಟಿಯಾದ್ರಾ ಸುಮಲತಾ? ಬಿಜೆಪಿಗೆ ಸೇರ್ತಾರಾ?ರಾತ್ರೋರಾತ್ರಿ ಬಿಜೆಪಿ ಮುಖಂಡರನ್ನು ಭೇಟಿಯಾದ್ರಾ ಸುಮಲತಾ? ಬಿಜೆಪಿಗೆ ಸೇರ್ತಾರಾ?

ನಿಖಿಲ್‌ಗೆ ಅಡ್ಡಗಾಲಾಗಿರುವ ಸುಮಲತಾ

ನಿಖಿಲ್‌ಗೆ ಅಡ್ಡಗಾಲಾಗಿರುವ ಸುಮಲತಾ

ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಜೆಡಿಎಸ್‌ನಿಂದ ಮಂಡ್ಯ ಕ್ಷೇತ್ರಕ್ಕೆ ಸ್ಪರ್ಧಿಸುವುದು ಬಹುತೇಕ ಅಂತಿಮಗೊಂಡಿದ್ದು, ನಿಖಿಲ್ ಕುಮಾರಸ್ವಾಮಿ ಗೆಲುವಿಗೆ ಸುಮಲತಾ ಅಡ್ಡಗಾಲಾಗಿದ್ದಾರೆ. ಸುಮಲತಾ ಸ್ಪರ್ಧೆ ಕುಮಾರಸ್ವಾಮಿಗೆ ತಲೆನೋವಾಗಿದೆ.

ಟ್ವಿಟರ್‌ನಲ್ಲಿ ನಿಖಿಲ್ ಕುಮಾರಸ್ವಾಮಿ ವಿರುದ್ಧ GoBack ಅಭಿಯಾನಟ್ವಿಟರ್‌ನಲ್ಲಿ ನಿಖಿಲ್ ಕುಮಾರಸ್ವಾಮಿ ವಿರುದ್ಧ GoBack ಅಭಿಯಾನ

English summary
Sumalatha Ambareesh said i will say my decision about contesting lok sabha elections 2019 from mandya on March 18. She said no bjp people not yet contacted me.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X